Ad imageAd image

ಚುನಾವಣೆ ದಿನ ಸಾರಿಗೆ ನೌಕರರಿಗೆ ವೇತನ ಸಹಿತ ರಜೆ 

Bharath Vaibhav
ಚುನಾವಣೆ ದಿನ ಸಾರಿಗೆ ನೌಕರರಿಗೆ ವೇತನ ಸಹಿತ ರಜೆ 
ksrtc
WhatsApp Group Join Now
Telegram Group Join Now

ಬೆಂಗಳೂರು : ರಾಜ್ಯದಲ್ಲಿ 26-04-2024 & 07-05-2024 ರಂದು ನಡೆಯುವ ಲೋಕಸಭಾ ಚುನಾವಣೆ-2024 ರಲ್ಲಿ ರಾಜ್ಯ ಸಾರಿಗೆ ನೌಕರರಿಗೆ ಮತ ಚಲಾಯಿಸಲು ರಜೆ / ಅನುಮತಿ ನೀಡುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.

ದಿನಾಂಕ:26-04-2024 & 07-05-2024 ರಂದು ಕರ್ನಾಟಕ ರಾಜ್ಯದಲ್ಲಿ ನಡೆಯುವ ಲೋಕಸಭಾ ಚುನಾವಣೆ-2024 ರ ನಿಮಿತ್ತ ರಾಜ್ಯ ಸರ್ಕಾರವು ಉಲ್ಲೇಖಿತ ಅಧಿಸೂಚನೆಯನ್ನು ಹೊರಡಿಸಿದ್ದು.

ಈ ಅಧಿಸೂಚನೆಯಲ್ಲಿ ಸೂಚಿಸಿರುವ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವಂತಹ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಎಲ್ಲಾ ರಾಜ್ಯ ಸರ್ಕಾರಿ ಕಛೇರಿಗಳಿಗೆ ನೆಗೋಷಿಯೇಬಲ್‌ ಇನ್ಮುಮೆಂಟ್ಸ್ ಆಕ್ಟ್ 1981 ರ ಪ್ರಕಾರ ಸಾರ್ವತ್ರಿಕ ರಜೆಯನ್ನು ಸರ್ಕಾರವು ಘೋಷಿಸಿದೆ ಹಾಗೂ 1951 ರ ಪ್ರಜಾಪ್ರತಿನಿಧಿ ಕಾಯ್ದೆಯ ಕಲಂ 135 (ಬಿ) ರಡಿಯಲ್ಲಿ ವೇತನ ಸಹಿತ ರಜೆ ನೀಡಲು ಆದೇಶಿಸಿದೆ.

ಕ.ರಾ.ರ.ಸಾ.ನಿಗಮವು ಅಗತ್ಯ ಸೇವೆಯಡಿಯಲ್ಲಿ ಬರುವುದರಿಂದ ದಿನಾಂಕ:26/04/2024 ಹಾಗೂ ದಿನಾಂಕ:07/05/2024 ರಂದು ನಡೆಯುವ ಲೋಕಸಭಾ ಚುನಾವಣೆ ದಿನದಂದು ಆಯಾ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ನಿಗಮದ ಕೇಂದ್ರ ಕಛೇರಿ. ವಿಭಾಗೀಯ ಕಛೇರಿಗಳು, ತರಬೇತಿ ಕೇಂದ್ರಗಳಿಗೆ ಸಾರ್ವತ್ರಿಕ ರಜೆ ಘೋಷಿಸಿದೆ.

ಘಟಕ, ವಿಭಾಗೀಯ ಕಾರ್ಯಾಗಾರ, ಪ್ರಾದೇಶಿಕ ಕಾರ್ಯಾಗಾರ, ಕರಾಸಾ ಮುದ್ರಣಾಲಯ ಹಾಗೂ ಕರಾಸಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಮತದಾನದ ದಿನಾಂಕದಂದು ವೇತನ ಸಹಿತ ರಜೆಯನ್ನು ನೀಡುವುದು. ಈ ಹಿನ್ನೆಲೆಯಲ್ಲಿ ಚುನಾವಣಾ ದಿನದಂದು ಅವಶ್ಯಕತೆಗೆ ಅನುಗುಣವಾಗಿ ಕನಿಷ್ಠ ಸಂಖ್ಯೆಯಲ್ಲಿ ಸಿಬ್ಬಂದಿಗಳನ್ನು ಬಳಸಿಕೊಳ್ಳುವುದು.

ಮುಂದುವರೆದು, ಚುನಾವಣಾ ದಿನದಂದು ಕರ್ತವ್ಯದ ಮೇಲಿರುವ ಸಿಬ್ಬಂದಿಗಳಿಗೆ ಅವರ ಅನುಕೂಲಕ್ಕನುಗುಣವಾಗಿ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಅಥವಾ ಕರ್ತವ್ಯದ ಅವಧಿಯ ಮಧ್ಯೆ ಮತ ಚಲಾಯಿಸಲು ಅವಕಾಶವನ್ನು ಮಾಡಿಕೊಡುವಂತೆ/ಅನುಮತಿ ನೀಡುವಂತೆ ಸೂಕ್ತಾಧಿಕಾರಿಗಳು ಆದೇಶಿಸಿರುತ್ತಾರೆ. ಅದರಂತೆ, ಕ್ರಮ ಕೈಗೊಳ್ಳುವುದು.

 

 

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!