ಹುಬ್ಬಳ್ಳಿ :- ಧಾರವಾಡ ಜಿಲ್ಲಾ ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಎಸ್ ಎಸ್ ಕೆ ಸಮುದಾಯವನ್ನು ಬಿಜೆಪಿ ನಾಯಕರು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಲಾಭಕ್ಕಾಗಿ ಜನಸಂಘದಿಂದ ಇಲ್ಲಿವರೆಗೂ ಬಿಜೆಪಿಯ ಮುಖಂಡರು ಎಸ್ ಎಸ್ ಕೆ ಸಮುದಾಯವನ್ನು ತಮಗೆ ತಕ್ಕಂತೆ ಬಳಸಿಕೊಂಡು ಕಪ್ಪಿ ಮುಸ್ಟಿನಲ್ಲಿ ಹಿಡಿದುಕೊಂಡಿದ್ದಾರೆ.
ಎಸ್ ಎಸ್ ಕೆ ಸಮಾಜದಲ್ಲಿ ಪಂಚ್ ಪ್ರಮುಖರು ಆಗಲು ಪ್ರತಿ ಐದು ವರ್ಷಕ್ಕೆ ಒಮ್ಮೆ ಸಮಾಜದ ಬಾಂಧವರ ಮತದಾರರ ಮತದಿಂದ ಚುನಾವಣೆ ಮಾಡಬೇಕಿತ್ತು. ಆದರೆ ಸರ್ವಾಧಿಕಾರಿಯ ಪ್ರವೃತ್ತಿ ಮತ್ತು ತಮ್ಮ ಲಾಭಕ್ಕಾಗಿ ಪ್ರತಿಷ್ಠೆಗಾಗಿ ತಮಗೆ ಬೇಕಾದಂತವರು ಸ್ನೇಹಿತರು ಬಂಧು -ಬಳಗ ರಾಜಕೀಯ ಪ್ರೇರಿತ ಹಿಂಬಾಲಕರು ಅವರಿಗೆ ಸ್ವಯಂಘೋಷಿತವಾಗಿ ಆಯ್ಕೆ ಮಾಡಿ ಸಮಾಜದ ಅಭಿವೃದ್ಧಿ ಸೇವಾ ಕಾರ್ಯಗಳನ್ನು ಕಡೆಗಣಿಸಿ ಕೇವಲ ಬಿಜೆಪಿಯ ರಾಜಕೀಯ ಬೆಂಬಲಿತವಾಗಿ ಎಸ್ ಎಸ್ ಕೆ ಸಮಾಜದ ನಾಯಕರು ಹಿಂಬಾಲಕರು ಸರ್ವಾಧಿಕಾರಿಯ ಧೋರಣೆ ಮಾಡಲಾಗುತ್ತಿದೆ.
ಎಸ್ ಎಸ್ ಕೆ ಸಮಾಜದ ಬಾಂಧವರ ಮತದ ಹಕ್ಕುಗಳು ಸಂವಿದಾನಾತ್ಮಕವಾಗಿ ದಮನ ಮಾಡಲಾಗುತ್ತಿದೆ.ಧಾರವಾಡ ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಬಿಜೆಪಿಯ ಹಿಂಬಾಲಕರು ಗೋಕುಲ್ ರೋಡ್ ಕೂಬಿಕ್ಸ್ ಹೋಟೆಲ್ ನಲ್ಲಿ ರಾಜಕೀಯವಾಗಿ ಎಸ್ ಎಸ್ ಕೆ ಸಮಾಜದ ಪವಿತ್ರವಾದ ಮತದಾರರ ಬಾಂಧವರನ್ನು ಉಪಯೋಗಿಸಿಕೊಂಡು ಕೇವಲ ಬಿಜೆಪಿಗೆ ಸೀಮಿತವಾಗಿ ಬದಲಾಯಿಸುವ ಪ್ರಯತ್ನ ಮಾಡಲಾಗುತ್ತಿದೆ. ಎಂದು ಧಾರವಾಡ ಜಿಲ್ಲಾ ಪಕ್ಷೇತರ ಅಭ್ಯರ್ಥಿ ರಾಜು ಅನಂತಸಾ ನಾಯಕವಾಡಿ ಅವರು ಮಾಧ್ಯಮದ ಮುಖಾಂತರ ಅಸಮಾಧಾನ ವ್ಯಕ್ತಪಡಿಸಿದರು.
ವರದಿ:- ಸುಧೀರ್ ಕುಲಕರ್ಣಿ