ಕಲಬುರ್ಗಿ : ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ರಾಧಾಕೃಷ್ಣಗೆ ವೋಟ್ ಕೊಟ್ಟು ನೋಡಿ ಐದು ವರ್ಷಗಳಲ್ಲಿ ಕಲಬುರ್ಗಿಯಲ್ಲಿ ಏನು ಬದಲಾವಣೆ ಆಗುತ್ತೆ ನೀವೇ ನೋಡಿ. ನಾನು ಇನ್ನೂ ಸತ್ತಿಲ್ಲ ಜನರ ಸೇವೆ ಮಾಡಲು ಬದ್ಧನಾಗಿದ್ದೇನೆ. ಎಂದು ಭಾಷಣದ ವೇಳೆ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾವುಕರಾದ ಘಟನೆ ಜರುಗಿತು.
ಕಲ್ಬುರ್ಗಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ 25 ಗ್ಯಾರಂಟಿಗಳಿವೆ ಎಲ್ಲವನ್ನು ಈಡೇರಿಸುತ್ತೇವೆ. ಕಲ್ಬುರ್ಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದರು.
ಎಲ್ಲೇ ಕೇಳಿದರೂ ನಾನು ಒಳ್ಳೆಯ ಕೆಲಸ ಮಾಡಿದ್ದೇನೆ ಎಂದು ಹೇಳ್ತೀರಾ ಆದರೆ ಮತಕಟ್ಟೆಗೆ ಹೋದಾಗ ನಿಮಗೆ ಏನೂ ಅನಿಸುತ್ತೋ ಗೊತ್ತಿಲ್ಲ ಆದರೆ ನಮ್ಮನ್ನೇ ಮರೆತು ಬಿಡ್ತೀರಾ ಎಂದು ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದರು.
ನನ್ನ ಗುರಿ ನಿಜವಾಗಿಯೂ ಕಲ್ಯಾಣ ಕರ್ನಾಟಕ ಕಲ್ಯಾಣ ಕರ್ನಾಟಕ ಭಾಗಕ್ಕೆ 371 ಜೆ ಸ್ಥಾನಮಾನ ತಂದು ಕೊಟ್ಟಿದ್ದೇನೆ. ಈ ಮೂಲಕ ಸಂವಿಧಾನದ ಪುಸ್ತಕದಲ್ಲಿ ಕಲಬುರ್ಗಿ ಹೆಸರನ್ನು ಸೇರಿಸಿದ್ದೇನೆ. ಸೆಂಟ್ರಲ್ ವಿಶ್ವವಿದ್ಯಾಲಯ ಇಎಸ್‌ಐ ಆಸ್ಪತ್ರೆ ಜವಳಿ ಪಾರ್ಕ್ ರಾಷ್ಟ್ರೀಯ ಹೆದ್ದಾರಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹಲವು ಕೆಲಸ ಮಾಡಿದ್ದೇನೆ.
ಆದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಬಿಜೆಪಿಯವರ ಕೊಡುಗೆ ಶೂನ್ಯವಾಗಿದೆ ಬಸವಣ್ಣ ಅಂಬೇಡ್ಕರ್ ತತ್ವ ಉಳಿಯಬೇಕು ಅನ್ನೋದು ನನ್ನ ಗುರಿಯಾಗಿದೆ ಎಂದು ಕಲ್ಬುರ್ಗಿಯಲ್ಲಿ ಜರುಗಿದ ಕಾಂಗ್ರೆಸ್ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದರು.