Ad imageAd image

ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೊ, ಮೋದಿ ಪ್ರಧಾನಿಯಾಗುವುದು ಅಷ್ಟೆ ಸತ್ಯ

Bharath Vaibhav
ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೊ, ಮೋದಿ ಪ್ರಧಾನಿಯಾಗುವುದು ಅಷ್ಟೆ ಸತ್ಯ
WhatsApp Group Join Now
Telegram Group Join Now

ಮೊಳಕಾಲ್ಮೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ರಾಂಪುರದಲ್ಲಿ ಹೋಬಳಿ ಮಟ್ಟದ ಬೃಹತ್ ಸಾರ್ವಜನಿಕರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರವು ತೊಗಲಕ್ ದರ್ಬಾರ್ ನಡೆಸುತ್ತಿದೆ ಹಣವನ್ನು ಲೂಟಿ ಮಾಡಿ ಧರಣಿ ಮಾಡುತ್ತಿದೆ ಸರ್ಕಾರದ ಖಜನೆ ಖಾಲಿಯಾಗಿ ದಿವಾಳಿಯಾಗಿದೆ ಹಣದ ಬಲ ತೋಳ್ಬಲ ಎಲ್ಲಾ ಬಲಗಳು ಮುಗಿದ ಹೋದ ಅಧ್ಯಾಯ ಜನಗಳು ಜಾಗೃತರಾಗಿದ್ದಾರೆ ನನ್ನ ಅವಧಿಯಲ್ಲಿ ಅನೇಕ ಬಡ ಜನರಿಗೆ ರೈತರಿಗೆ ಅನುಕೂಲವಾಗುವ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಮಾಡಿದ್ದೆ ಕಾಂಗ್ರೆಸ್ ಸರ್ಕಾರ ಅದನ್ನು ರದ್ದು ಮಾಡಿದೆ ಕಾಂಗ್ರೆಸ್ ಪಕ್ಷವು ಮುಳುಗಿ ಹೋಗುವ ಹಡಗು ವಿಶ್ವವೇ ಮೆಚ್ಚಿರುವ ನರೇಂದ್ರ ಮೋದಿ ಎದುರು ಪ್ರಧಾನಿ ಅಭ್ಯರ್ಥಿ ಯಾರೆಂದು ಕಾಂಗ್ರೆಸ್ ಹೇಳಲಿದ್ದಾರೆಯೇ ಎಂದು ಪ್ರಶ್ನಿಸಿದರು.ಆದ್ದರಿಂದ ನೀವು ಈ ಬಾರಿ ಬಿಜೆಪಿ ಪಕ್ಷಕ್ಕೆ ಗೋವಿಂದ ಕಾರಜೋಳ ಅವರಿಗೆ ಆಶೀರ್ವಾದ ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ಶಾಸಕರಾದ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ ಸಂಸ್ಕೃತಿ ಇಲ್ಲದ ಕಾಂಗ್ರೆಸ್ ಪಕ್ಷಕ್ಕ 100 ಸೀಟುಗಳು ಕೂಡ ಬರುವುದಿಲ್ಲ ನೀವು ಏನಾದರೂ ಕಾಂಗ್ರೆಸ್ ಪಕ್ಷಕ್ಕೆ ವೋಟು ಹಾಕಿದರೆ ಡಸ್ಟ್ ಪಿನ್ನು ಗೆ ಹಾಕಿದ ಹಾಗೆ ಎಂದು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು ನನಗೆ ಎನ್ ವೈ ಕುಟುಂಬ ತುಂಬಾ ಆತ್ಮೀಯವಾಗಿದೆ ಆದರೆ ಕಳೆದ ಬಾರಿ ಅವರಿಗೆ ಟಿಕೆಟ್ ಕೊಡಲಿಲ್ಲ ಈ ಕಾಂಗ್ರೆಸ್ ಪಕ್ಷ ಎಂದರು. ಇಡೀ ವಿಶ್ವದಲ್ಲೇ ಬಲಿಷ್ಠವಾದ ಮೂರ್ನಾಲ್ಕು ರಾಷ್ಟ್ರಗಳಲ್ಲಿ ರಾಷ್ಟ್ರಗಳಲ್ಲಿ ಭಾರತವು ಕೂಡ ಒಂದಾಗಿದೆ ಎಂದರೆ ಅದಕ್ಕೆ ಕಾರಣ ನರೇಂದ್ರ ಮೋದಿಯವರು ಮತ್ತು ಅವರ ಜನಪರ ಆಡಳಿತ ಎಂದರು.

ಇದೇ ಸಂದರ್ಭದಲ್ಲಿ ಚಿತ್ರದುರ್ಗ ಲೋಕಸಭಾ ಅಭ್ಯರ್ಥಿಯಾದ ಗೋವಿಂದ ಕಾರಜೋಳ ಮಾತನಾಡಿ ಮುಂದಿನ ಪ್ರಧಾನಿ ನರೇಂದ್ರ ಮೋದಿ ಆಗಬೇಕು ಎಂಬ ಕನಸು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ 140 ಕೋಟಿ ಜನರು ಹಂಬಲಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಇಂತಹ ನಾಯಕರು ಯಾರಿದ್ದಾರೆ ಯಾವ ಹುಚ್ಚರೂ ಕೂಡ ರಾಹುಲ್ ಗಾಂಧಿಯನ್ನು ಪ್ರಧಾನಮಂತ್ರಿ ಸ್ಥಾನದಲ್ಲಿ ನೋಡಲು ಒಪ್ಪುವುದಿಲ್ಲ. 400 ಸ್ಥಾನ ಗೆದ್ದು ಪ್ರಧಾನಿಯಾಗಿರುವ ಮೋದಿಯ ಜೊತೆ ನಾನಿರಬೇಕು ಅಥವಾ 30 ಸ್ಥಾನ ಗೆದ್ದು ವಿರೋಧ ಸ್ಥಾನದಲ್ಲಿರುವ ಕಾಂಗ್ರೆಸ್ ಬೇಕು ಯೋಚಿಸಿ ನಿರ್ಧರಿಸಿ ಮತನೀಡಿ ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ತಿಪ್ಪೇಸ್ವಾಮಿ ಮಾತನಾಡಿ ಕಾಂಗ್ರೆಸ್ ಸರ್ಕಾರವು ದಿವಾಳಿ ಅಂಚಿನಲ್ಲಿದೆ ಎಸ್ಸಿ ಎಸ್ಟಿ ದುಡ್ಡನ್ನು ತಂದು ಬೀಟ್ ಭಾಗಕ್ಕೆ ಕೊಡುತ್ತಾರೆ ನಾಚಿಕೆಯಾಗಬೇಕು ಕಾಂಗ್ರೆಸ್ ಪಕ್ಷಕ್ಕೆ ರೈತರ ದುಡ್ಡನ್ನು ಕೂಡ ಕಾಂಗ್ರೆಸ್ ಪಕ್ಷ ಬೀಟ್ ಭಾಗ್ಯಕ್ಕೆ ನೀಡಿದ್ದಾರೆ ಎಂದೂ ತರಾಟೆಗೆ ತೆಗೆದುಕೊಂಡರು.

ಇದೇ ಸಂದರ್ಭದಲ್ಲಿ ಕೆ ಆರ್ ಪುರಂ ಶಾಸಕರಾದ ಬೈರತಿ ಬಸವರಾಜ್ ಮತ್ತು ವಿಧಾನ ಪರಿಷತ್ ಸದಸ್ಯರಾದ ಕೆ ಎಸ್ ನವೀನ್ ತಮ್ಮ ಅನಿಸಿಕೆಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ರವಿಕುಮಾರ್ ಎ ಮುರಳಿ ಮಂಜುನಾಥ್ ಈ ರಾಮರೆಡ್ಡಿ ಕರಿಬಸಪ್ಪ ಜೆಡಿಎಸ್ ವೀರಭದ್ರಪ್ಪ ರಾಮದಾಸ್ ಅರೇವಣ್ಣ ಪರಮೇಶ್ವರಪ್ಪ ಜಿಂಕಲ್ ಬಸವರಾಜ್ ತಿಪ್ಪೇಸ್ವಾಮಿ ಚಿದಾನಂದ ಸನ್ಮಾರಣ್ಣ ಓಬಳೇಶ ಇನ್ನು ಹಲವಾರು ಬಿಜೆಪಿ ಮುಖಂಡರು ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿದ್ದರು.

ವರದಿ : ಪಿಎಂ ಗಂಗಾಧರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!