ಚಿಕ್ಕೋಡಿ :- ಏಪ್ರಿಲ್ 14 ರಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ವೇಳೆ ಅಂಬೇಡ್ಕರ್ ಅವರ ಭಾವಚಿತ್ರ ಒಡೆದು ಹಾಕಿ, ಭಗವಾನ ಗೌತಮ್ ಬುದ್ಧ ರವರ ಮೂರ್ತಿಯನ್ನು ಹೊಡೆದು ಹಾಕಿರುತ್ತಾರೆ ಅಲ್ಲದೇ ದಲಿತರ ಮನೆಗಳಿಗೆ ಹೊಕ್ಕಿ ಹಾನಿ ಮಾಡಿರುತ್ತಾರೆ.
ಚಿಕ್ಕೋಡಿ ತಾಲೂಕಿನ ಶೇಮನೆವಾಡಿ ಗ್ರಾಮದ ದಲಿತರ ಮನೆಗಳಿಗೆ ನುಗ್ಗಿ ಮನಬಂದಂತೆ ಕಲ್ಲುಗಳಿಂದ, ಹಾಗೂ ಕಟ್ಟಿಗೆಗಳಿಂದ ಥಳಿಸಿದ್ದಲದೆ ಮಹಿಳೆಯರ ಒಳ ಬಟ್ಟೆಗಳನ್ನು ಹರಿದು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಹಾಗೂ ಮಹಿಳೆಯರನ್ನು ಅತ್ಯಾಚಾರ ಎಸಗುವುದಾಗಿ ಚಾಲೆಂಜ್ ಮಾಡಿ ಉಟ್ಟುಕೊಂಡು ಸೀರೆ ಗಳನ್ನು ಹರಿದುಹಾಕಿದ ಗೂಂಡಾಗಳು ಅವರ ಮೇಲೆ ಗಂಭೀರ ಹಲ್ಲೆ ನಡೆಸಿರುತ್ತಾರೆ ಎಂದು ಗ್ರಾಮಸ್ಥರು ಮಾಧ್ಯಮದವರಿಗೆ ಹೇಳಿಕೆಯನ್ನು ನೀಡಿದ್ದಾರೆ.
ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳು ಪರಾರಿಯಾಗಿದ್ದಾರೆ ಈ ವರೆಗೆ ಪೋಲೀಸರು ಅವರನ್ನು ಬಂದಿಸಿಲ್ಲದ ಕಾರಣ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೂ ನ್ಯಾಯ ಕೊಡಿಸಬೇಕು ನ್ಯಾಯ ಸಿಗದೇ ಇದ್ದರೇ ಉಪಾವಾಸ ಸತ್ಯಾಗ್ರಹ ಮಾಡುತ್ತೇವೆ.
ಅಲ್ಲದೇ ರಾಜ್ಯಾದ್ಯಂತ ಉಗ್ರವಾದ ಹೋರಾಟ್ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿರುತ್ತಾರೆ ಹೌದು ಇದು ಚಿಕ್ಕೋಡಿ ತಾಲೂಕಿನ ಶಮನವಾಡಿ ಗ್ರಾಮದಲ್ಲಿ ಏಪ್ರಿಲ್ 14 ರಂದು ನಡೆದ ಘಟನೆ ಬೌದ್ಧ ಸಮುದಾಯದವರ ಮೇಲೆ ಸಮಾಜಘಾತಕ ಬೇರೆ ಸಮುದಾಯದ ಮುಖಂಡರು ಹಲ್ಲೆ ನಡೆಸಿದ್ದರು.
ಪ್ರಮುಖ ಆರೋಪಿಗಳಾದ ದೀಪಕ್ ಬಾಳ ಸಾಹೇಬ್ ಖೋತ್, ಚೇತನ್ ಬಾಳ ಸಾಹೇಬ್ ಕೋತ್, ಸಚಿನ್ ಬಾಳ ಸಾಹೇಬ ಕೋತ್, ಧೀರಜ್ ಬರತ್ ಹೋತ್, ತುಷಾರ್ ಶಿಂದೆ, ಕುಂತು ಸಿರಗುಪ್ಪಿ, ಜಿತು ಅನ್ನ ಸಾಬ್ ಬೆಂಡವಾಡೆ , ಬಾಹುಬಲಿ ನಾಗಾಂವೆ, ರೋಹನ ದಡ್ಡಿ,ಸುಮಿತ ಶಾಮಾ ನರೂಟೆ, ಧೀರಜ್ ಭರತ್ ಖೋತ, ಶೀತಲ ಅಂಬರೀಶ ಖೋತ(ಅಮ್ಮಣ್ಣವರ್), ಅಜೀತ ಗಡೆಪ್ಪಖೋತ , ಶುಭಂ ಕೋರುಚೇ, ನೀತಿನ ತಪಕಿರೆ, ಸೀನಪ್ಪ ಗುಂಡು ಸೋಮನಖೋತ, ಸುನೀಲ ಡಂಗ, ಉದಯ ಶಿಂದೆ,ತಾತ್ಯಾಸಾಹೇಬ ಬೇಂಡವಾಡೆ, ಕುಮಾರ ದಾದಾ ಮಗದುಮ, ರಾಜ ಧನಪಾಲ ಬೇಂಡವಾಡೇ,(ನಾಗಾಂವೆ) ಇವರೆಲ್ಲರೂ ಗೂಂಡಾಗಳು ಕುಡಿಕೊಂಡು ಸಂಗಮತವಾಗಿ ದಲಿತ ಸಮಾಜವನ್ನು ನಾಶಪಡಿಸುವ ಉದ್ದೇಶದಿಂದ ಊರಲ್ಲಿದಂಗೆ ಮಾಡಿರುತ್ತಾರೆ
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆಯನ್ನು ಭಾರತದೊಂದಿಗೆ ವಿಶ್ವದಾದ್ಯಂತ ಆಚರಿಸಲಾಯಿತು.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೆಲಸ ಒಂದು ಜಾತಿಗಾಗಿ ಅಲ್ಲ ಇಡೀ ಭಾರತ ದೇಶಕ್ಕಾಗಿ ಸ್ವತಂತ್ರ ಭಾರತದ ಸಂವಿಧಾನವನ್ನು ಬರೆದಿದ್ದಕ್ಕಾಗಿ ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ಭಾರತೀಯನಿಗೆ ಬಾಬಾಸಾಹೇಬರು ಕೃತಜ್ಞರಾಗಿದ್ದಾರೆ.
ಈ ಪರವಾಗಿ ರೂನ್ಗಳನ್ನು ಮರುಪಾವತಿಸಲಾಗದಿದ್ದರೂ ನಾವು ಅವರ ಪವಿತ್ರ ಆಲೋಚನೆಗಳಿಂದ ಬದುಕಬೇಕು. ಸಮಾಜದಲ್ಲಿ ಮಹಾಪುರುಷರ ಚಿಂತನೆಗಳು ಮುರಿದು ಬೀಳುತ್ತವೆ ಎಂಬಂತೆ ಸಮಾಜಘಾತುಕರು ವರ್ತಿಸಿದ ನಿದರ್ಶನಗಳು ಸಾಕಷ್ಟಿವೆ.
ಮತ್ತು ಅದೇ ರೀತಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಶಮನೇವಾಡಿ ಗ್ರಾಮದಲ್ಲಿ ಅ.14ರಂದು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ನಡೆಯುತ್ತಿದ್ದ ವೇಳೆ ಇಲ್ಲಿನ ಬೌದ್ಧ ಸಮುದಾಯದವರ ಮೇಲೆ ಏಕಾಏಕಿ ದಾಳಿ ನಡೆಸಿ ಜಾತಿ ಸಂಪ್ರದಾಯ ಇಂದಿಗೂ ಇದೆ ಎಂದು ಅರಿವು ಮೂಡಿಸಲಾಗಿದೆ.
ಈ ಯುಗದಲ್ಲಿ ಜೀವಂತವಾಗಿದೆ ಈ ಸತ್ಯಾಸತ್ಯತೆಯನ್ನು ಪರಿಶೀಲಿಸಲು ನಮ್ಮ ಮಾದ್ಯಮ ತಂಡ ಶಮನೇವಾಡಿ ತಲುಪಿ ವಾಸ್ತವ ಸ್ಥಿತಿ ಅವಲೋಕಿಸಿತು ಸಮುದಾಯದವರ ಪ್ರತಿಕ್ರಿಯೆಯನ್ನು ಇಲ್ಲಿ ನೋಡೋಣ.
ವರದಿ ರಾಜು ಮುಂಡೆ