ಮೊಳಕಾಲ್ಮುರು:- ಲೋಕಸಭಾ ಚುನಾವಣೆಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಹೆಚ್ಚು ಮತ ನೀಡಿದ್ದೆ ಆದಲ್ಲಿ ನಾನು ಈ ಬಾರಿ ಮಂತ್ರಿಯಾಗುತ್ತೇನೆ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ತಮ್ಮ ಮನದ ಇಂಗಿತ ವ್ಯಕ್ತಪಡಿಸಿದರು.
ರಾಂಪುರ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಜನರನ್ನು ಉದ್ದೇಶಿಸಿ ಮಾತನಾಡಿದ ಅವರು ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದೀರಿ, ಮಂತ್ರಿಯಾಗಲು ಸ್ವಲ್ಪ ಅಂತರದಲ್ಲಿ ಇದ್ದೇನೆ.ನೀವು ಮನಸ್ಸು ಮಾಡಿದ್ದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅತ್ಯಧಿಕ ಮತ ನೀಡಿದ್ದೆ ಆದಲ್ಲಿ ನನ್ನ ಶಕ್ತಿ ಏನೆಂಬುವುದು ವರಿಷ್ಠರ ಗಮನಕ್ಕೆ ತಲುಪುತ್ತದೆ.ಕಾಂಗ್ರೆಸ್ ಪಕ್ಷದ ವರಿಷ್ಟರೇ ತೀರ್ಮಾನಿಸಿ ಸಚಿವ ಸ್ಥಾನ ನೀಡಲಿದ್ದಾರೆ.ನಾನು ಮಂತ್ರಿಯಾದರೆ, ಎಲ್ಲರಿಗೂ ಅನುಕೂಲ ಆಗಲಿದೆ ನಿಮ್ಮ ಸಹಕಾರ ಮುಖ್ಯ ಎಂದು ಹೇಳಿದರು.
2018ರಲ್ಲಿ ಬಿಜೆಪಿಯವರು ಮಂತ್ರಿ ಮಾಡ್ತೀವಿ ಅಂತ ನನ್ನನ್ನು ಬಿಜೆಪಿ ಪಕ್ಷಕ್ಕೆ ಕರೆದುಕೊಂಡು ಹೋದರು, ಕೂಡ್ಲಿಗಿ ಕ್ಷೇತ್ರದಿಂದ ಬಿಜೆಪಿ ಪಕ್ಷದ ಶಾಸಕನಾಗಿ ಆಯ್ಕೆಯಾದೆ. ಆದ್ರೆ ಸರ್ಕಾರ ಇರುವವರೆಗೂ ನಾನು ಯಾವತ್ತೂ ಕೂಡ ನನಗೆ ಇಂತಹ ಹುದ್ದೆ ನೀಡಿ ಎಂದು ನಾನು ಕೇಳಿಲ್ಲ.ಹೆಗಲಿಗೆ ಬಿಜೆಪಿಯ ಶಾಲು ಹಾಕುತ್ತಿದ್ದರು
ಆದರೆ ನಾನು ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದೆ ದೇಹ ಬಿಜೆಪಿಯಲ್ಲಿದ್ದರೂ ನನ್ನ ಹೃದಯ ಮಾತ್ರ ಕಾಂಗ್ರೆಸ್ ನಲ್ಲಿ ಇತ್ತು. ಏಳು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನನಗೆ ಈ ಬಾರಿ ಮಂತ್ರಿ ಆಗುವ ಅವಕಾಶ ಇದೆ.7ಸ್ಟಾರ್ ಎಂಎಲ್ ಎ ಎಂಬುವುದು ಜನರು ಕೊಟ್ಟ ಬಿರುದು, ನನ್ನ ಹಿರಿತನವನ್ನು ಗುರ್ತಿಸಿ ಕಾಂಗ್ರೆಸ್ ಪಕ್ಷ ಗುರ್ತಿಸಲಿದೆ, ಲೋಕಸಭೆ ಚುನಾವಣೆಯ ನಂತರ ಜನರ ನಿರೀಕ್ಷೆಯಂತೆ ನನಗೆ ಸರ್ಕಾರದಲ್ಲಿ ಉನ್ನತ ಸ್ಥಾನಮಾನ ದೊರೆಯಲಿದೆ ಎಂದರು.
ವರದಿ ಪಿಎಂ ಗಂಗಾಧರ