ಬಾಗಲಕೋಟೆ :-ಲೋಕಸಭಾ ಚುನಾವಣೆಯ ಬಾಗಲಕೋಟೆ ಮತಕ್ಷೇತ್ರದ ಕಾಂಗ್ರೆಸ್ ನ ಅಭ್ಯರ್ಥಿ ಯುವನಾಯಕಿ ಸಂಯುಕ್ತಾ ಶಿವಾನಂದ ಪಾಟೀಲ ಇಂದು ಕಿಕ್ಕಿರಿದ ಜನಸ್ತೋಮದ ಜೊತೆಗೆ ಪಕ್ಷದ ಕಚೇರಿಯಿಂದ ಸಾಗಿದ ಮೆರವಣಿಗೆ ಕೆರೂಡಿ ಆಸ್ಪತ್ರೆ ರಸ್ತೆಯಿಂದ ಸಾಗುತ್ತಾ ಪ್ರಮುಖ ರಸ್ತೆ ಬಸವೇಶ್ವರ ಸರ್ಕಲ್ ಗೆ ಬಂದು ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಹೂಮಾಲೆ ಹಾಕಿ ನಮಿಸಿದರು. ನಂತರ ವಲ್ಲಭಭಾಯಿ ಚೌಕದ ವರೆಗೆ ಸಾಗಿತು.
ಮೆರವಣಿಗೆಯಲ್ಲಿ ಮಗಳು ಸಂಯುಕ್ತ ಪರ ತಾಯಿ ಭಾಗ್ಯಶ್ರೀ ಹಾಗೂ ಸಹೋದರಿ ತೆರೆದ ಕಾರಿನಲ್ಲಿ ನಿಂತು ಮತದಾರರಿಗೆ ಕೈ ಮುಗಿಯುತ್ತ ಮತ ಯಾಚನೆ ಮಾಡುತ್ತಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಸಂಯುಕ್ತಾ ಪಾಟೀಲರ ತಂದೆ ಸಚಿವ ಶಿವಾನಂದ ಪಾಟೀಲರು ವಲ್ಲಭಬಾಯಿ ಚೌಕದಿಂದ ಮುಖ್ಯರಸ್ತೆಯವರೆಗೆ ನಡೆದುಕೊಂಡು ಜನರಲ್ಲಿಗೆ ಹೋಗಿ ಕೈ ಮುಗಿದು ಮಗಳು ಸಂಯುಕ್ತಾ ಳಿಗೆ ಆಶೀರ್ವಾದ ಮಾಡುವಂತೆ ಕೇಳಿದರು.
ಬಿ ಜೆ ಪಿ ನಿನ್ನೆಯಷ್ಟೇ ನಾಮಪತ್ರ ಸಲ್ಲಿಸಿತ್ತು ಅದನ್ನು ಮೀರಿಸಿ ಜನಸಾಗರ ಜಮಾವನೆಗೊಂಡಿದ್ದು ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಿತು ಎನ್ನಬಹುದು.ಬಾಗಲಕೋಟೆ ಹೊಸ ಅಧ್ಯಾಯಕ್ಕೆ ನನಗೆ ಅವಕಾಶ ಮಾಡಿ ಕೊಡಿ ನಿಮ್ಮ ಮನೆ ಮಗಳಿಗೆ ಆಶೀರ್ವಾದ ಮಾಡಿ ಎಂದು ಕೈ ಅಭ್ಯರ್ಥಿ ಸಂಯುಕ್ತ ಪಾಟೀಲ ಮತ ಯಾಚನೆ ಮಾಡಿದರು.
ಮೆರವಣಿಗೆಯ ತೆರೆದ ವಾಹನದಲ್ಲಿ ಸಚಿವ ಸತೀಶ ಜಾರಕಿಹೊಳಿ, ಅಭ್ಯರ್ಥಿ ಸಂಯುಕ್ತಾ ಪಾಟೀಲ, ಎಸ್. ಆರ್ ಪಾಟೀಲ,ಶಾಸಕ ಜೆ. ಟಿ. ಪಾಟೀಲ, ಮಾಜಿ ಸಚಿವೆ ಉಮಾಶ್ರೀ, ಆರ್. ಬಿ. ತಿಮ್ಮಾಪೂರ, ಎಚ್. ವಾಯ್ ಮೇಟಿ, ಎಚ್. ಕೆ ಪಾಟೀಲ್, ಶಾಸಕ ಭೀಮಸೇನ್ ಚಿಮ್ಮನಕಟ್ಟಿ, ಮಹೇಶ್. ಎಸ್. ಹೊಸಗೌಡರ, ರಕ್ಷಿತಾ ಭರತಕುಮಾರ ಈಟಿ, ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ಎಸ್. ಜಿ. ನಂಜಯ್ಯನಮಠ,ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ನಂತರ ಅಭ್ಯರ್ಥಿ ಸಂಯುಕ್ತಾ ಪಾಟೀಲ ಚುನಾವಣೆ ಅಧಿಕಾರಿ ಜಿಲ್ಲಾಧಿಕಾರಿ ಕಛೇರಿಗೆ ತೆರಳುವ ಸಂದರ್ಭದಲ್ಲಿ ಡಾ! ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಾಮಪತ್ರ ಸಲ್ಲಿಸಲು ಹೋದರು. ನಾಮಪತ್ರ ಸಲ್ಲಿಸಲು ಜೊತೆಯಲ್ಲಿ ಮುಖಂಡರಾದ ಎಸ್. ಆರ್ ಪಾಟೀಲ್, ಮಾಜಿ ಸಚಿವೆ ಉಮಾಶ್ರೀ, ಶ್ರೀಮತಿ ವೀಣಾ ಕಾಶಪ್ಪನವರ, ಶಾಸಕ ಆನಂದ್ ನ್ಯಾಮಗೌಡ್ರ ಜೊತೆಗಿದ್ದು ನಾಮಪತ್ರ ಸಲ್ಲಿಸಿದರು.
ವರದಿ:- ರಾಜೇಶ್. ಎಸ್. ದೇಸಾಯಿ