ಬೆಂಗಳೂರು:- ಪೀಣ್ಯ ದಾಸರಹಳ್ಳಿ ಕಳೆದ ವರ್ಷ ವಿಧಾನ ಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯಿಂದ ಮಗ ಸೌಂದರ್ಯ ಮಂಜಪ್ಪ ರವರ ಮಗ ಕೀರ್ತನ್ ಕುಮಾರ್ ಮಂಜಪ್ಪ ಸೌಂದರ್ಯ ಸ್ಪರ್ಧಿಸಿ ಅಲ್ಪ ಮತ ಪಡೆದು ಭಾರಿ ಸೋಲಿನ ರುಚಿ ಪಡೆದಂತೆ ಆಯಿತು.
ಬಾಗಲಗುಂಟೆ ವಾರ್ಡಿನ ವ್ಯಾಪ್ತಿಗೆ ಬರುವ ಸಿಡೆದಹಳ್ಳಿಯಲ್ಲಿರುವ ಮಂಜಪ್ಪ ಸೌಂದರ್ಯ ಅವರ ಸ್ವಗೃಹದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಆರ್ ಮಂಜುನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ, ಮಾಜಿ ಶಾಸಕ ಆರ್ ಮಂಜುನಾಥ್, ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ವಾಜೀದ್, ಉಸ್ತುವಾರಿ ಮೋಹನ್, ಸ್ಥಳಿಯ ನಗರ ಸಭಾ ಮಾಜಿ ಅಧ್ಯಕ್ಷ ಕೆ.ಸಿ ಅಶೋಕ್, ಮಾಜಿ ಪಾಲಿಕೆ ಸದಸ್ಯ ಕೆ ನಾಗಭೂಷಣ್ ಇವರುಗಳ ಸಮಕ್ಷಮದಲ್ಲಿ ಆಮ್ ಆದ್ಮಿ ಪಾರ್ಟಿಯ ಹಿರಿಯ ನಾಯಕ ಮಂಜಪ್ಪ ಸೌಂದರ್ಯ ಹಾಗೂ ಅವರ ಸುಪುತ್ರ ಹಾಗೂ ಆಮ್ ಆದ್ಮಿ ಪಾರ್ಟಿ ಪರಾಜಿತ ಅಭ್ಯರ್ಥಿ ಕೀರ್ತನ್ ಕುಮಾರ್ ಮಂಜಪ್ಪ ಹಾಗೂ ಆಮ್ ಆದ್ಮಿ ಪಾರ್ಟಿಯ ಮುಖಂಡರು ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳ ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಇದೆ ವೇಳೆ ಮಂಜಪ್ಪ ಸೌಂದರ್ಯ ಮಾತನಾಡಿ ಆಮ್ ಆದ್ಮಿ ಪಾರ್ಟಿ ಭ್ರಷ್ಟಾಚಾರ ರಹಿತ ಆಡಳಿತ ಮಾಡುತ್ತದೆ ಎಂಬ ಆಶಾಭಾವನೆಯಿಂದ ಆಮ್ ಆದ್ಮಿ ಪಾರ್ಟಿ ಸೇರಿಕೊಂಡೆವು ಆದರೆ ಭ್ರಷ್ಟಾಚಾರ ವಿರುದ್ಧ ಹೊರಾಡಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಪಾರ್ಟಿಯ ಮುಖಂಡರೇ ಪ್ರಸ್ತುತ ಭ್ರಷ್ಟಾಚಾರ ಮಾಡಿ ತಿಹಾರ್ ಜೈಲಿನಲ್ಲಿ ರುವುದು ವಿಪರ್ಯಾಸ ಆದ್ದರಿಂದ ಆಮ್ ಆದ್ಮಿ ಪಾರ್ಟಿ ತೊರೆದು ಕಾಂಗ್ರೆಸ್ ಸೇರಿದ್ದೇವೆ ನಾನು ಈ ಹಿಂದೆ ಕಾಂಗ್ರೆಸ್ ಪಾರ್ಟಿಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದೇನೆ.
ಕಾಂಗ್ರೆಸ್ ಪಕ್ಷ ನನ್ನ ಮಾತೃ ಪಕ್ಷ ಅದಕ್ಕಾಗಿ ಕಾಂಗ್ರೆಸ್ ಸೇರಿದ್ದೇನೆ ಎಂದು ಮಂಜಪ್ಪ ಅವರು ತಮ್ಮ ಮನದಾಳದ ಮಾತುಗಳು ಮಾದ್ಯಮದರ ಜೊತೆಗೆ ಹಂಚಿಕೊಳ್ಳುವ ಮೂಲಕ ಮುಂದೆ ಬಿಜೆಪಿ ಸೋಲಿಸಬೇಕು ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ಅವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ ಏಕೈಕ ವ್ಯಕ್ತಿ ಎಂದರೆ ತಪ್ಪಾಗಲಾರದು ರಾಜೀವ್ ಗೌಡ ಈಗಾಗಲೇ ಸಂಸತ್ತಿನಲ್ಲಿ ಹೆಸರಾಗಿರುವ ರಾಜಕಾರಣಿ ರಾಜೀವ್ ಗೌಡ ಇವರನ್ನು ಪ್ರಚಂಡ ಬಹುಮತಗಳಿಂದ ಗೆಲ್ಲಿಸುವ ಹೊಣೆ ನಮ್ಮೇಲ್ಲರಲ್ಲಿದೆ ಎಂದು ಮಾಜಿ ಶಾಸಕ ಆರ್ ಮಂಜುನಾಥ್ ಕಾರ್ಯಕರ್ತರಿಗೆ ಕರೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಮೈಕೆಲ್ ಬಾಬು,ಕೆಪಿಸಿಸಿ ಸದಸ್ಯೆ ಜಯಂತಿ ಭಗವಾನ್, ಕೇಶವ್, ಕಾಂಗ್ರೆಸ್ ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಇದ್ದರು.
ವರದಿ:- ಅಯ್ಯಣ್ಣ ಮಾಸ್ಟರ್