ಚಿಕ್ಕೋಡಿ :-ಲೋಕಸಭಾ ಚುನಾವಣೆ ಹಿನ್ನೆಲೆ, ಮಾಜಿ ಐಎಎಸ್ ಅಧಿಕಾರಿ ಸ್ವತಂತ್ರ ಅಭ್ಯರ್ಥಿಯಾಗಿ ಚಿಕ್ಕೋಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಡೊಳ್ಳು ಬಾರಿಸಿಕೊಂಡು ಕುಣಿತ ದೊಂದಿಗೆ ಸ್ಥಳೀಯ ಗ್ರಾಮ ದೇವರುಗಳ ಆಶೀರ್ವಾದ ಪಡೆದುಕೊಂಡು ಹಣೆಯ ಮೇಲೆ ಭಂಡಾರವನ್ನು ಹಚ್ಚಿಕೊಂಡು ಹೆಗಲಮೇಲೆ ಕಂಬಳಿಯನ್ನು ಹೊತ್ತುಕೊಂಡು ಮೆರವಣಿಗೆ ಮೂಲಕ ಸಾವಿರಾರು ಕಾರ್ಯಕರ್ತರೊಂದಿಗೆ ಆಗಮಿಸಿ ಶಂಭು ಕಲ್ಲೋಳಿಕರವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಿವೃತ್ತ ಐಎಎಸ್ ಅಧಿಕಾರಿಗೆ ಬಾರಿ ಜನ ಬೆಂಬಲವನ್ನು ಕೊಡುತ್ತಿದ್ದಾರೆ ಹಾಗೂ ರಾಷ್ಟ್ರೀಯ ಪಕ್ಷಗಳಿಗೆ ಎಚ್ಚರಿಕೆಯ ಸಂದೇಶ ವಾಗಿದೆ ಏಕೆಂದರೆ ಕೆಲ ಎರಡು ಪಕ್ಷಗಳ ಕಾರ್ಯಕರ್ತರು ಬರಬೇಕಾಗಿತ್ತು ಆದರೆ ಅವರಿಗೆ ಬೆದರಿಕೆ ಒಡ್ಡಿದ್ದಾರೆ ಆಯಾ ಕಾರಣಾಂತರ ದಿಂದ ಬರಲು ಸಾಧ್ಯ ಆಗಿಲ್ಲ ಅವರು ಮತದಾನ ನನಗೆ ಮಾಡುತ್ತೇವೆ ನಿಮ್ಮನ್ನು ಲೋಕಸಭೆ ಚುನಾವಣೆಯಲ್ಲಿ ಬಹುಮತ ನೀಡಿ ಕೇಂದ್ರಕ್ಕೆ ಕಳುಹಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಶಂಬು ಕಲ್ಲೋಳ್ಕರ್ ಎಂಟ್ರಿ ಕೊಟ್ಟ ಪರಿಣಾಮ ಬಾರಿ ಬಿರುಗಾಳಿ ಬೀಸಿದಂತಾಗಿದೆ.
ಇನ್ನು ಕಲ್ಲೋಳಿಕರ ಅಭಿಮಾನಿಗಳು ದಿನದಿಂದ ದಿನಕ್ಕೆ, ಹೆಚ್ಚಾಗುತ್ತಿರುವ ಹಿನ್ನೆಲೆ, ರಾಷ್ಟ್ರೀಯ ಪಕ್ಷಗಳಿಗೆ ನಿದ್ದೆಗೆಡುವಂತೆ ಮಾಡಿದೆ ಕಲ್ಲೋಳಿಕರ ಎಂದರೆ ಜನರಲ್ಲಿ ಅಪಾರ ಪ್ರೀತಿ ಮತ್ತು ಅವರ ಮೃದು ಮುಗ್ಧ ಸ್ವಭಾವಕ್ಕೆ ಜನರು ಕೂಡ ಅದೇ ರೀತಿ ಸ್ಪಂದನೆ ನೀಡುತ್ತಿದ್ದಾರೆ.
ನಿನ್ನೆ ನಾಮಪತ್ರ ಸಲ್ಲಿಸಲು ಸಾವಿರಾರು ಜನರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಶಂಭು ಕಲ್ಲೋಳಿಕರ ಯಾವುದೆ ಕಾರಣಕ್ಕೂ ನಾಮ ಪತ್ರ ಹಿಂದಕ್ಕೆ ಪಡೆಯುವುದಿಲ್ಲ ಚಿಕ್ಕೋಡಿ ಜಿಲ್ಲೆ ಆಗಬೇಕೆಂಬ್ ಸುಮಾರು ದಿನಗಳ ಕನಸನ್ನು ನನಸಾಗಿಸಲು ನನಗೆ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿ ಚಿಕ್ಕೋಡಿ ಜಿಲ್ಲೆ ಮಾಡುವೆ ಅದಕ್ಕಾಗಿ ಮುಂದಿನ ಹೋರಾಟ ನಡೆಸಿ ಜಿಲ್ಲೆಯನ್ನಾಗಿಸುತ್ತೇನೆ ಹಾಗೂ ಈ ಕ್ಷೇತ್ರದಲ್ಲಿ ಶಿಕ್ಷಣ, ವಿವಿಧ ಸರ್ಕಾರಿ ಕಚೇರಿಗಳನ್ನು ತರುವೆ ಹೈಟೆಕ್ ಆಸ್ಪತ್ರೆ ಸೇರಿದಂತೆ ರೈತರಿಗೆ ಕೃಷಿಗೆ ಅನುಕೂಲವಾಗುವಂತೆ ನದಿಗಳಿಗೆ ನೀರನ್ನು ತರುವೆ ಹೈಟೆಕ್ ಪದ್ಧತಿಯ ಹಲವಾರು ವರ್ಷಗಳಿಂದ ಆಗದೆ ಇರುವ ಕಾಮಗಾರಿಗಳನ್ನು ಪೂರ್ತಿ ಗೊಳಿಸುವೆ ನನಗೆ ಲೋಕಸಭೆಯ ಎಲ್ಲಾ ಜನರ ಗುರು ಹಿರಿಯರ ಆಶೀರ್ವಾದ ಇದೆ ನನ್ನ ಗೆಲವು ನಿಶ್ಚಿತ ಎಂದು ವಿರೋಧ ಪಕ್ಷಗಳ ವಿರುದ್ಧ ಮಾದ್ಯಮದವರ ಪ್ರಶ್ನೆಗೆ ಉತ್ತರವನ್ನು ನೀಡಿ ಬೆವರಿಳಿಸಿದರು
ಹಾಗೂ ಜನರಲ್ಲಿರುವ ಬೇಡಿಕೆಗಳ ಈಡೇರಿಕೆಗಾಗಿ ರಾತ್ರಿ ಹಗಲು ಶ್ರಮಿಸುವುದಾಗಿ ಸಮಾಜ ಸೇವೆ ಮಾಡುತ್ತೇನೆ ನಮ್ಮ ಕ್ಷೇತ್ರ ಅಭಿವೃದ್ಧಿ ಕಾರ್ಯಗಳಿಗೆ ಎಂದಿಗೂ ಹಿಂದೆ ಸರಿಯುವುದಿಲ್ಲ ಪ್ರಾಮಾಣಿಕ ಪ್ರಯತ್ನ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಕೆಲಸಗಳನ್ನು ಕಾರ್ಯಗಳನ್ನು ಮಾಡಲು ಅವಕಾಶ ನೀಡಿ ಮತ್ತು ನನಗೆ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿ ಎಂದು ಜನರಲ್ಲಿ ವಿನಂತಿಸಿದರು ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದ ಮುಂದೆ ಹೇಳಿಕೆ ನೀಡಿ.
ನಂತರ ಯಾವ ರೀತಿಯಾಗಿ ಇನ್ನಿತರ ಕೆಲಸ ಕಾರ್ಯಗಳನ್ನು ಮಾಡುವ ಬಗ್ಗೆ ಕೋರ್ಟ್ ನ್ಯಾಯವಾದಿಗಳ ದಪ್ತರ ಹಾಲಿನಲ್ಲಿ ತಮ್ಮ ಪ್ರಣಾಳಿಕೆಯನ್ನು ಬಿಡಿಸಿ ಹೇಳಿದ್ದಾರೆ ಬನ್ನಿ ಏನೇನು ಆಶ್ವಾಸನೆ ನೀಡಿದ್ದಾರೆ ಎಂದು ನೋಡಿ.
ವರದಿ:-ರಾಜು ಮುಂಡೆ