ಧಾರವಾಡ : ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಖಂಡಿಸಿ ನಾಳೆ ನಗರದಲ್ಲಿ ಅಂಜುಮನ್ ಕಾಲೇಜದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸ್ಥಳೀಯ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ತಿಳಿಸಿದರು.
ನಗರದಲ್ಲಿನ ಅಂಜುಮನ್ ಸಂಸ್ಥೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ಸ್ವಯಂ ಪ್ರೇರಿತವಾಗಿ ಮುಸ್ಲಿಂ ವ್ಯಾಪಾರಿಗಳು ನಾಳೆ ತಮ್ಮ ವ್ಯಾಪಾರ ಬಂದ್ ಮಾಡಿ ಮೆರವಣಿಗೆಗೆ ಬೆಂಬಲಿಸಲಿದ್ದಾರೆ ಎಂದರು.ಇದಕ್ಕೆ
ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಕೂಡಾ ನಮಗೆ ಸಾಥ್ ನೀಡಲಿವೆ.
ವ್ಯಾಪಾರಿಗಳು ಕೂಡಾ ನಾಳೆ ನಮ್ಮ ರ್‍ಯಾiiಲಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಬಿವಿಬಿ ಆವರಣದಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಕೊಲೆಗೆ ಖಂಡನೀಯ. ಈಗಾಗಲೇ ಹುಬ್ಬಳ್ಳಿ ಧಾರವಾಡ ಅಂಜುಮನ್ ಸಂಸ್ಥೆ ವತಿಯಿಂದ ಪೊಲೀಸ್ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ಕೊಡಲಾಗಿದೆ. ನೇಹಾ ಕೊಲೆ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇತ್ತ ಓರ್ವ ವಿದ್ಯಾರ್ಥಿ ಕೊಲೆಯಾಗಿದ್ದು,ಆ ವಿದ್ಯಾರ್ಥಿನಿ ನಮ್ಮಲ್ಲೇ ಒಬ್ಬರು ಇದ್ದಂತೆ. ಕಾಲೇಜ್ ಬೇರೆ ಇರಬಹುದು, ಆದರೆ ಆಕೆ ಕೂಡಾ ಒಬ್ಬ ವಿದ್ಯಾರ್ಥಿನಿ. ಕೊಲೆ ಆರೋಪಿಗೆ ತಕ್ಕ ಶಿಕ್ಷೆಯಾಗಲಿ, ತ್ವರಿತ ಗತಿಯಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಶಿಕ್ಷೆಯಾಗಬೇಕು.ಇಂತಹ ಕೃತ್ಯ ಎಸಗುವರಿಗೆ ಎಚ್ಚರಿಕೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ನೇಹಾ ಕೊಲೆ ಪ್ರಕರಣ ಖಂಡಿಸಿ ಶುಕ್ರವಾರದ ಪ್ರಾರ್ಥನೆಯ ವೇಳೆ ನೇಹಾಳ ಆತ್ಮಕ್ಕೆ ಶಾಂತಿ ಕೋರಲಾಗಿದೆ. ಜೊತೆಗೆ ಇಂತಹ ದುಷ್ಕೃತ್ಯದಲ್ಲಿ ತೊಡಗದಂತೆ ಸಮಾಜದ ಯುವಕರಿಗೆ ಬೋಧನೆ ಕೂಡ ಮಾಡಲಾಗಿದೆ
ವಿದ್ಯಾರ್ಥಿಗಳಿಗೆ ಏನಾದರು ಕ್ಯಾಂಪಸನಲ್ಲಿ ಆಗಂದತೆ ನೋಡಿಕೊಳ್ಳಬೇಕಿದೆ. ಹೀಗಾಗಿ ಯಾವುದೇ ಸಮುದಾಯದ ವಿದ್ಯಾರ್ಥಿ ತಪ್ಪು ಮಾಡಿದರೆ ಕ್ರಮ ಕ್ರಮ ಜರುಗಿಸುವ ಕೆಲಸ ಮಾಡಲಿದ್ದೆವೆ. ಇದಕ್ಕಾಗಿ ಸಂಸ್ಥೆಯಲ್ಲಿ ಮಹಿಳಾ ಕಮೀಟಿಯನ್ನು ಅಸ್ತಿತ್ವಕ್ಕೆ ತರಲಾಗಿದ್ದು, ತೊಂದರೆಯಾದ ವಿದ್ಯಾರ್ಥಿನಿಯರು ಆ ಕಮೀಟಿ ಬಳಿ ತಮ್ಮ ಅಹವಾಲು ಸಲ್ಲಿಸಬಹುದು. ತಪ್ಪು ಕಂಟು ಬಂದರೆ ನಂತರ ಆಡಳಿತ ಮಂಡಳಿ ಅಗತ್ಯ ಕ್ರಮ ಜರುಗಿಸಲಿದೆ ಎಂದರು.
ವಿದ್ಯಾರ್ಥಿನಿಯರಿಗೆ ರಕ್ಷಣೆ ಕೊಡುವ ಉದ್ದೇಶದಿಂದ ಕಾಲೇಜ್ ಪ್ರವೇಶ ಪಡೆಯುವ ವೇಳೆಯೇ ವಿದ್ಯಾರ್ಥಿಗಳ ಬಳಿ ಬರೆಯಿಸಿಕೊಳ್ಳಲಾಗುವುದು ಎಂದರು.
ಕೆಲವರು ಸ್ಟೇಟಸ್ ಇಟ್ಟುಕೊಂಡವರ ಬಗ್ಗೆ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಜಸ್ಟಿಸ್ ಫಾರ್ ಲವ್ ಎಂದು ಹಾಕಿಕೊಂಡಿದ್ದಾರೆ. ಅದರ ಬಗ್ಗೆ ನಾವು ಗಮನಹರಿಸಿದ್ದು, ಅಂತಹ ಸಮಾಜ ವಿರೋಧಿ ಮತ್ತು ಕಾನೂನುಬಾಹಿರ ಕೃತ್ಯಕ್ಕೆ ಸಮುದಾಯದ ಬೆಂಬಲ ನೀಡಲ್ಲ ಎಂಬ ಸಂದೇಶ ರವಾನಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಸಂಸ್ಥೆಯ ಪದಾಧಿಕಾರಿಗಳಾದ ಬಶೀರಅಹ್ಮದ ಜಾಗೀರದಾರ, ಪ್ರೊ.ಎಸ್.ಎ.ಸರಗೀರೋ, ರಫೀಕಅಹ್ಮದ ಶಿರಹಟ್ಟಿ, ಮಹ್ಮದಶಫಿ ಕಳ್ಳಿಮನಿ, ಇರ್ಷಾದ ಬಿಸ್ತಿ, ಮಹಮ್ಮದಅಲಿ ಗೂಡುಬಾಯಿ ಇತರರರು ಸುದ್ದಿಗೋಷ್ಠಿಯಲ್ಲಿದ್ದರು.
ಕೊಠಡಿಗೆ ಹೆಸರು..
ಕೊಲೆಯಾದ ವಿದ್ಯಾರ್ಥಿನಿ ನೇಹಾ ಹಿರೇಮಠ ನಮ್ಮ ಮಗಳು ಮತ್ತು ಸಂಸ್ಥೆಯ ವಿದ್ಯಾರ್ಥಿನಿಯೇ ಇದ್ದಂತೆ. ಹೀಗಾಗಿ ಅಮಾಯಕಿ ನೇಹಾಳ ನೆನಪು ಚಿರಸ್ಥಾಯಿ ಆಗಬೇಕು ಎಂಬ ಸದುದ್ದೇಶದಿಂದ ಕಾಲೇಜಿನ ಕೊಠಡಿಯೊಂದಕ್ಕೆ ನೇಹಾಳ ಹೆಸರಿಡಲು ಆಡಳಿತ ಮಂಡಳಿ ತೀರ್ಮಾನಿಸಿದೆ.
ಸುಧೀರ್ ಕುಲಕರ್ಣಿ