ಹುಬ್ಬಳ್ಳಿ : ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದು ಇಂದು ಹುಬ್ಬಳ್ಳಿಯಲ್ಲಿ ಮುಸ್ಲಿಂ ಧರ್ಮಗುರುಗಳಾದ ಸೈಯದ್ ತಾಜುದ್ದೀನ ಪೀರಾ, ಮೌಲಾನಾ ಜಹಿರುದ್ದೀನ ಖಾಜಿ ನೇತ್ರತ್ವದಲ್ಲಿ ನೂರಕ್ಕೂ ಹೆಚ್ಚು ಮುತವಲ್ಲಿಗಳು, ಅಂಜುಮನ್ ಪದಾಧಿಕಾರಿಗಳು, ಸಮಾಜದ ಗಣ್ಯರು ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಘಟನೆ ಆಘಾತಕಾರಿಯಾಗಿದ್ದು ಆರೋಪಿಗೆ ಕಠಿಣ ಶಿಕ್ಷೆ ಆಗುವಂತೆ ಒತ್ತಾಯಿಸಿದರಲ್ಲದೇ ಇಂತಹ ಪ್ರಕರಣಗಳ ಇತ್ಯರ್ಥಕ್ಕೆ ಫಾಸ್ಟಟ್ರಾಕ್ ನ್ಯಾಯಾಲಯ ಸ್ಥಾಪಿಸಬೇಕು ಎಂದು ಮುಸ್ಲಿಂ ಮುಖಂಡರು ಒತ್ತಾಯಿಸಿದ್ದಾರಲ್ಲದೇ ಯಾವ ವಕೀಲರು ಹಂತಕನ ಪರ ವಕಾಲತ್ತು ವಹಿಸಬಾರದು ಅಲ್ಲದೇ ಮುಸ್ಲಿಂ ವಕೀಲರಾರೂ ಭಾಗವಹಿಸದಂತೆ ಮನವಿ ಮಾಡಿದ್ದಾರೆ.
ನೇಹಾ ಕೊಲೆ ಖಂಡಿಸಿ ನಾಳೆ ಶಹಾ ಬಜಾರ ಸೇರಿದಂತೆ ಪ್ರಮುಖ ವಾಣಿಜ್ಯ ಸಂಕೀರ್ಣಗಳನ್ನು ಬಂದ್ ಮಾಡಲು ಸಹ ನಿರ್ಣಯಿಸಲಾಗಿದ್ದು ನಾಳೆ ಸಾಯಂಕಾಲ ಅಂಜುಮನ್ ಸಮೂಹ ಸಂಸ್ಥೆಗಳ ವಿದ್ಯಾರ್ಥಿನಿಯರು ಮೇಣಬತ್ತಿ ಮೆರವಣಿಗೆ ನಡೆಸಲು ಮುಂದಾಗಿದ್ದಾರೆ.
ಅಂಜುಮನ್ ಅಧ್ಯಕ್ಷ ಎ.ಎಂ.ಹಿಂಡಸಗೇರಿ, ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಪಾಲಿಕೆ ಸದಸ್ಯ ಆರೀಪ ಭದ್ರಾಪುರ, ಇಲಿಯಾಸ್ ಮನಿಯಾರ್, ಮುಖಂಡರಾದ ಶಿರಾಜ ಅಹ್ಮದ ಕುಡಚಿವಾಲೆ, ಮೊಹಮ್ಮದ ಕೋಳೂರ ಸೇರಿದಂತೆ ಸಮಾಜದ ಪ್ರಮುಖರು ಈ ಸಂದರ್ಭದಲ್ಲಿ ಇದ್ದರು. ಧಾರವಾಡದಲ್ಲಿ ನಾಳೆ ನಡೆಯಲಿರುವ ಮೌನ ಮೆರವಣಿಗೆಯಲ್ಲೂ ಇಲ್ಲಿನ ಮಸ್ಲಿಂ ಮುಖಂಡರು, ಅಂಜುಮನ್ ಪದಾಧಿಕಾರಿಗಳು ಪಾಲ್ಗೊಳ್ಳುವ ಸಾಧ್ಯತೆಗಳಿವೆ.
ಸುಧೀರ್ ಕುಲಕರ್ಣಿ