ಬೆಂಗಳೂರು: –ಪೀಣ್ಯ,ದಾಸರಹಳ್ಳಿ ಸಮೀಪದ ಲಗ್ಗೆರೆಯ ಪಾರ್ವತಿನಗರದಲ್ಲಿ ಶ್ರೀ ದುಗ್ಗಲಮ್ಮ ಹಿರಿಯ ನಾಗರೀಕರ ಸಂಘದ ವತಿಯಿಂದ ಅಭಿಷೇಕ್ ಎಲೆಕ್ಟ್ರಿಕಲ್ಸ್ ಸರ್ವೀಸ್ ನ ಮಾಲೀಕರು ಹಾಗೂ ಸಮಾಜ ಸೇವಕರಾದ ಪಿ ಕೃಷ್ಣಯ್ಯ, ಎಂ ರಮೇಶ್, ಬಿ ರಾಮಯ್ಯ, ಪೊಲೀಸ್ ಇಲಾಖೆ ನಿವೃತ್ತ ನೌಕರರಾದ ಜಿ ಭೈರೇಗೌಡ್ರು, ಗುಬ್ಬಿಗುಡು ಸಿ ಕೃಷ್ಣಮೂರ್ತಿ, ನಿವೃತ್ತ ಪೊಲೀಸ್ ಅಧಿಕಾರಿ ಜಗದೀಶಪ್ಪ, ಪುಟ್ಟಸ್ವಾಮಿ, ಎನ್.ಟಿ ನಾಗರಾಜ್, ಸುಬ್ರಮಣಿ, ವಿ ಶ್ರೀನಿವಾಸ್, ಕೆ ಮುರಾರಪ್ಪ, ಶ್ರೀನಿವಾಸ್, ಗೋವಿಂದಪ್ಪ, ಪಿ.ಹೆಚ್ ಚಿಕ್ಕಹುಚ್ಚಯ್ಯ, ಎಸ್.ಹೆಚ್ ಹುಚ್ಚಪ್ಪ ರವರ ನೇತೃತ್ವದಲ್ಲಿ ಶ್ರೀ ರಾಮ ನವಮಿ ಆಚರಣೆ ಹಾಗೂ ಬೋರ್ ವೆಲ್ ಉದ್ಘಾಟನೆಯನ್ನು ಅದ್ದೂರಿಯಾಗಿ ನೆರವೇರಿಸಲಾಯಿತು.
ಶ್ರೀರಾಮ ನವಮಿಯ ಪ್ರಯುಕ್ತ ನೆರೆದಿದ್ದ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತು.ಈ ವೇಳೆ ಮಾತನಾಡಿದ ಅಭಿಷೇಕ್ ಎಲೆಕ್ಟ್ರಿಕಲ್ಸ್ ಸರ್ವೀಸ್ ನ ಮಾಲೀಕರು ಹಾಗೂ ಸಮಾಜ ಸೇವಕರಾದ ಪಿ ಕೃಷ್ಣಯ್ಯ, ‘ನಮ್ಮ ಹಿಂದೂ ಹಬ್ಬಗಳನ್ನು ಆಚರಿಸುವುದರಿಂದ ನಮ್ಮ ಸಂಸ್ಕೃತಿಯನ್ನು ಕಾಪಾಡುವ ಮೂಲಕ ಜನರೆಲ್ಲರೂ ಭಾವೈಕ್ಯತೆಯಿಂದ ಬಾಳಲು ಸಹಕಾರವಾಗುತ್ತದೆ. ಹಾಗೆಯೇ ಬೋರ್ ವೆಲ್ ಉದ್ಘಾಟನೆಯಿಂದ ಸ್ಥಳೀಯರಿಗೆ ನೀರಿನ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ’, ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜು ವೇಣುಗೋಪಾಲ್ , ಲೋಕೇಶ್ ಟೆಂಟ್ ಹೌಸ್ , ಸಿದ್ದಗಂಗಯ್ಯ ವಿನಾಯಕ ಗ್ಯಾರೇಜ್ ಪಾರ್ವತಿನಗರದ ಮುಖಂಡರು, ವ್ಯಾಪಾರಸ್ಥರು ಶ್ರೀ ದುಗ್ಗಲಮ್ಮ ಹಿರಿಯ ನಾಗರೀಕರ ಸಂಘದ ಪದಾಧಿಕಾರಿಗಳು ಸಮಸ್ತ ಬಂಧು ಭಗನಿಯರು ಉಪಸ್ಥಿತರಿದ್ದರು.
ವರದಿ:- ಅಯ್ಯಣ್ಣ ಮಾಸ್ಟರ್