ಬೆಂಗಳೂರು: ರಾಜ್ಯ ಸರ್ಕಾರ ನಿಗದಿ ಪಡಿಸಿ, ಹೊರಡಿಸಲಾಗಿದ್ದಂತ ನಾಡಗೀತೆ ದಾಟಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದಂತ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಈ ಕುರಿಂತೆ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಎಂಬುವರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿಯನ್ನು ತಿಂಗಳಾನು ಗಟ್ಟಲೇ ಹೈಕೋರ್ಟ್ ನ್ಯಾಯಪೀಠವು ವಿಚಾರಣೆ ನಡೆಸಿತು. ಅಲ್ಲದೇ ನಾಡಗೀತೆಯ ದಾಟಿಗೆ ಸಂಬಂಧಿಸಿದಂತೆ ಗಾಯಕರಿಂದ ಕೋರ್ಟ್ ಹಾಲ್ ನಲ್ಲಿಯೇ ಹಾಡಿಸಿ, ವಿಚಾರಣೆ ನಡೆಸಲಾಗಿತ್ತು.
ಇಂದು ಅಂತಿಮವಾಗಿ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡ ನ್ಯಾಯಪೀಠವು, ನಾಡಗೀತೆ ದಾಟಿ ಪ್ರಶ್ನಿಸಿ ಸಲ್ಲಿಸಲಾಗಿದ್ದಂತ ರಿಟ್ ಅರ್ಜಿಯನ್ನು ವಜಾಗೊಳಿಸಿದೆ.
ಅಂದಹಾಗೇ ರಾಜ್ಯ ಸರ್ಕಾರ ಮೈಸೂರು ಅನಂತಸ್ವಾಮಿ ಅವರ ದಾಟಿಯನ್ನು ನಾಡಗೀತೆಗೆ ಕಡ್ಡಾಯಗೊಳಿಸಲಾಗಿತ್ತು. ಕುವೆಂಪು ವಿರಚಿತ ನಾಡಗೀತೆಗೆ ಸಂಗೀತ ಸಂಯೋಜನೆ ಕೂಡ ಮಾಡಲಾಗಿತ್ತು.
ಆದ್ರೇ ಮೈಸೂರು ಅನಂತಸ್ವಾಮಿ ಅವರ ದಾಟಿಗೆ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಆಕ್ಷೇಪಿಸಿ ರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾಯಪೀಠದ ಮುಂದೆ ಸರ್ಕಾರದ ಕ್ರಮವನ್ನು ಎಎಜಿಎಸ್ ಅಹಮದ್ ಪಾಷಾ ಅವರು ಸಮರ್ಥಿಸಿಕೊಂಡಿದ್ದರು.
ಅಂತಿಮವಾಗಿ ಇಂದು ಹೈಕೋರ್ಟ್ ನ್ಯಾಯಪೀಠವು ನಿರ್ಧಿಷ್ಟ ರಾಗದಲ್ಲಿ ನಾಡಗೀತೆ ಕಡ್ಡಾಗೊಳಿಸುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿ, ರಿಟ್ ಅರ್ಜಿಯನ್ನು ವಜಾಗೊಳಿಸಿತು.