ಬಾಗಲಕೋಟೆ:-ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ, ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರು ಗುರುವಾರ ಇಲ್ಲಿನ ಭೋವಿ ಪೀಠಕ್ಕೆ ಭೇಟಿ ನೀಡಿ ಹಲವು ಮಠಾಧೀಶರ ಆಶೀರ್ವಾದ ಪಡೆದರು.
ಹರಿಹರ ಪಂಚಮಸಾಲಿಪೀಠದ ಜಗದ್ಗುರು ಶ್ರೀವಚನಾನಂದ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಇಮ್ಮಡಿ ಶ್ರೀ ಸಿದ್ದರಾಮ ಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ ಮತ್ತಿತರ ಹರಗುರು ಚರಮೂರ್ತಿಗಳು ಸಚಿವ ಶಿವಾನಂದ ಪಾಟೀಲ, ಮತ್ತು ಸಂಯುಕ್ತ ಪಾಟೀಲ ಅವರನ್ನು ಶಾಲು ಹೊದಿಸಿ ಆಶೀರ್ವದಿಸಿದರು.
ಇದೇ ಸಂದರ್ಭದಲ್ಲಿ ಸಚಿವ ಶಿವಾನಂದ ಪಾಟೀಲ,ಶಾಸಕ ಎಚ್. ವಾಯ್. ಮೇಟಿ,
ಭೀಮಸೇನ.ಬಿ.ಚಿಮ್ಮನಕಟ್ಟಿ, ಪ್ರಕಾಶ್ ತಪಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ರಕ್ಷಿತಾ.ಭರತಕುಮಾರ.ಈಟಿ
ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರನ್ನು ಇಮ್ಮಡಿ ಶ್ರೀ ಸಿದ್ದರಾಮ ಸ್ವಾಮೀಜಿ ಸನ್ಮಾನಿಸಿ ಆಶೀರ್ವದಿಸಿದರು. ಹರಿಹರ ಪಂಚಮಸಾಲಿಪೀಠದ ಜಗದ್ಗುರು ಶ್ರೀವಚನಾನಂದ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ ಉಪಸ್ಥಿತರಿದ್ದರು.
ವರದಿ:-ರಾಜೇಶ್. ಎಸ್. ದೇಸಾಯಿ