ಬೆಳಗಾವಿ: -ಹಿಂದೆಂದಿಗಿಂತಲೂ ದೇಶದ ಯುವಜನರೆ ನಿರುದ್ಯೋಗ ಎದುರಿಸುತ್ತಿರುವುದಕ್ಕೆ ಕಾರಣ ಕಾಂಗ್ರೆಸ್ ಸರ್ಕಾರ ಮತ್ತು ಖಾಸಗಿಕರಣ ಗೊಳಿಸಿದ ಬಿಜೆಪಿ ಎಂದು ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದರು.
ನಗರದಲ್ಲಿ ಮಂಗಳವಾರ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಕಟುವಾಗಿ ಟೀಕಿಸಿ ದೇಶದ ಶಿಕ್ಷಣ ವ್ಯವಸ್ಥೆಗಳು ಬಹುಪಾಲ ಶ್ರೀಮಂತರ ಹಿಡಿತದಲ್ಲಿ ಇವೆ. ಸರ್ಕಾರಿ ಶಾಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಸಹ ಖಾಸಗಿ ಸಂಸ್ಥೆಗಳಂತೆ ವ್ಯಾಪಾರಿ ಕೇಂದ್ರಗಳಾಗುತ್ತಿವೆ. ಯವುದೇ ಅನುದಾನ ವಿಲ್ಲದೆ ವಿದ್ಯಾರ್ಥಿನಿಲಯಗಳು ಸೊರಗಿವೆ. ಎಸ್ ಸಿ, ಎಸ್ ಟಿ ಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಡಿಮೆಯಾಗಿಲ್ಲ. ಸಣ್ಣ ರೈತರು ತಮ್ಮ ಬೆಳೆಗಳನ್ನು ಕನಿಷ್ಠ ಬೆಲೆ ಕೋರಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.
ಬೆಲೆ ಏರಿಕೆಯಿಂದ ಜನ ಉಟಕ್ಕಾಗಿ ಪರದಾಡುವಂತಾಗಿದೆ. ಅಪೌಷ್ಟಿಕತೆಯಿಂದ ಮಕ್ಕಳ ಸಾವಿನ ಸಂಖ್ಯೆ ಹೆಚ್ಚಾಗಿದೆ ಹಾಗಾದ್ರೆ ಇಲ್ಲಿಯ ತನಕ ಈ ಸರ್ಕಾರಗಳು ಮಾಡಿದ್ದಾದರೂ ಏನು?
ಮೇಲ್ಜಾತಿಯ ಒಡೆತನದ ಕಂಪನಿಗಳಿಂದ ರಾಷ್ಟ್ರೀಯ ಪಕ್ಷಗಳು ದೇಣಿಗೆ ಪಡೆಯುತ್ತಿವೆ. ಈಗ ಅದಾನಿಗಳು ಭ್ರಷ್ಟಾಚಾರದ ಮೂಲವಾಗಿ ನಿಂತಿದೆ. ದೇಶದಲ್ಲಿ ಬೆಲೆ ಏರಿಕೆ ಒಂದು ದೊಡ್ಡ ಬಹುದೊಡ್ಡ ಸವಾಲಾಗಿ ನಿಂತಿದೆ. ಜನ ಒಂದು ಕಡೆ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆ, ಜಿಎಸ್ಟಿ ತೆರೆಗೆ ವಸೂಲು ಮಾಡ್ತಾ ಇದೆ. ಈ ಎಲ್ಲಾ ಕಾರಣದಿಂದಾಗಿ ಜನ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಬೆಸತ್ತು ಹೋಗಿದ್ದಾರೆ.
ಇದೆ ವೇಳೆ ಬಿ ಎಸ್ ಪಿ ರಾಜ್ಯಾಧ್ಯಕ್ಷ ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣ ಕುರಿತು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡರು ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮೌನ ಏಕೆ? ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳಿಗೆ ಸಮಪಾಲು ಸಮ ಬಾಳು ಸಿಗಬೇಕು ಅನ್ನುವುದೇ ಈ ಒಕ್ಕೂಟ ವ್ಯವಸ್ಥೆ ಬಂದು ನಿಯಮವಾಗಿದೆ.
ವಿಧಾನಾತ್ಮಕವಾಗಿ ಬೇರೆ ರಾಜ್ಯಗಳು ಸಮಸ್ಯೆಗಳು ಬಂದರೆ ಅದಕ್ಕೆ ಪರಿಹಾರ ನೀಡುವ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿರುತ್ತದೆ. ಆದರೆ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಬರಹ ಪರಿಹಾರ ನೀಡಲು ತಾರತಮ್ಯ ಮಾಡುತ್ತಿರುವುದು ಸ್ಪಷ್ಟವಾಗಿ ಕಣ್ಣಿಗೆ ಕಾಣುತ್ತಿದೆ. ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನಂತರ ಬರ ಪರಿಹಾರ ಬಿಡುಗಡೆ ಮಾಡಿರುವುದು ಒಂದು ವಿಪರ್ಯಾಸವೇ ಸರಿ. ಎಂದು ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ಕರ್ನಾಟಕದ ಹಿರಿಯ ರಾಜಕಾರಣಿ ವಿ. ಶ್ರೀನಿವಾಸ್ ಪ್ರಸಾದ್ ಅವರ ನಿಧನಕ್ಕೆ ಬಿ ಎಸ್ ಪಿ ಪಕ್ಷ ಶೊಕ ವ್ಯಕ್ತಪಡಿಸಿತು.ಈವೇಳೆ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಶೋಕ ಅಪ್ಪುಗೋಳ, ಬಿ ಎಸ್ ಪಿ ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.
ವರದಿ ಪ್ರತೀಕ ಚಿಟಗಿ