Ad imageAd image

ಸುಳ್ಳು ಮತ್ತು ಅಪಪ್ರಚಾರ ಕಾಂಗ್ರೆಸ್ ನ ಒಂದೆ ನಾಣ್ಯದ ಎರಡು ಮುಖಗಳು: ಸಿಟಿ ರವಿ

Bharath Vaibhav
ಸುಳ್ಳು ಮತ್ತು ಅಪಪ್ರಚಾರ ಕಾಂಗ್ರೆಸ್ ನ ಒಂದೆ ನಾಣ್ಯದ ಎರಡು ಮುಖಗಳು: ಸಿಟಿ ರವಿ
WhatsApp Group Join Now
Telegram Group Join Now

ಬೆಳಗಾವಿ: ಕಾಂಗ್ರೆಸ್ ನವರಿಗೆ ಜಾಣಕುರುಡು ಜಾಣ ಕಿವುಡುಯಿದೆ. ಒಳ್ಳೆಯ ಸಂಗತಿ ಯಾವುದೂ ಕಾಂಗ್ರೆಸ್ ಕಣ್ಣಿಗೆ ಬೀಳಲ್ಲ. ಸುಳ್ಳು ಮತ್ತು ಅಪಪ್ರಚಾರ ಕಾಂಗ್ರೆಸ್ ನ ಒಂದೆ ನಾಣ್ಯದ ಎರಡು ಮುಖಗಳು. ಸುಳ್ಳಿನಿಂದಲೇ ಕಾಂಗ್ರೆಸ್ ಬದುಕಿದೆ. ಕಾಂಗ್ರೆಸ್ಗೆ ಸುಳ್ಳೇ ಆಕ್ಸಿಜನ್ ಇದ್ದಂಗೆ. ಸುಳ್ಳು ಇಲ್ಲದಿದ್ದರೆ ಕಾಂಗ್ರೆಸ್ ಸತ್ತು ಹೋಗುತ್ತದೆ. ಸುಳ್ಳನ್ನೇ ಉಸಿರಾಗಿಸಿಕೊಂಡು ಅವರು ಬದುಕಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ನಗರದ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ ಪ್ರಜ್ವಲ್ ರೇವಣ್ಣ ಪ್ರಕರಣ ಚುನಾವಣೆಗೆ ಪರೋಕ್ಷವಾಗಿ ಸಣ್ಣ ಪ್ರಮಾಣದ ಪ್ರಭಾವ ಬೀರುತ್ತದೆ. ಆದರೆ ಕಾಂಗ್ರೆಸ್ ಇದನ್ನು ಇಡಿ ಎನ್ ಡಿಎ ಅಪರಾಧ ಎಂಬ ಥರ ಬಿಂಬಿಸುವ ಪ್ರಯತ್ನ ಮಾಡುತ್ತಿದೆ. ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಅವರು, ಪ್ರಾಥಮಿಕ ತನಿಖೆ ನಂತರ ಸತ್ಯಾಸತ್ಯತೆ ಹೊರ ಬರುತ್ತದೆ. ಸರ್ಕಾರವೇ ಎಸ್ ಐ ಟಿ ರಚನೆ ಮಾಡಿದೆ, ತನಿಖೆಯಾಗಲಿ. ಮಹಿಳಾ ನ್ಯಾಯಾಧೀಶ ತಂಡದಿಂದ ತನಿಖೆಯಾದರೆ ಆದಷ್ಟು ಬೇಗನೆ ಸತ್ಯಾಸತ್ಯತೆ ಹೊರ ಬರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಹೆಚ್ ಡಿಕೆ ಹೇಳಿಕೆಯನ್ನು ಒಪ್ಪುತ್ತೇವೆ , ಈ ನೆಲದ ಕಾನೂನು ಒಬ್ಬರಿಗೊಂದು ಇನ್ನೊಬ್ಬರಿಗೊಂದು ಇಲ್ಲ. ಎಲ್ಲರಿಗೂ ಒಂದೇ ರೀತಿ ಅಪ್ಲೈ ಆಗುತ್ತೆ. ತನಿಖೆಗೂ ಮುಂಚೆ ನಾವು ಯಾರನ್ನೂ ಅಪರಾಧಿ ಎಂದು ಘೋಷಣೆ ಮಾಡುವಂತಿಲ್ಲ. ತನಿಖೆ ನಂತರ ಸತ್ಯ ಏನು ಅನ್ನೋದು ಹೊರಬರುತ್ತೆ. ದೂರುದಾರರ ದೂರಿನಲ್ಲಿನ ಹೇಳಿಕೆ ಪ್ರಕಾರ, ಇದು ನಾಲ್ಕೈದು ವರ್ಷದ ಹಿಂದಿನ ಘಟನೆ. ನಾಲ್ಕೈದು ವರ್ಷದ ಹಿಂದೆ ಜನತಾದಳ ಕಾಂಗ್ರೆಸ್ ಜೊತೆ ಇತ್ತು ಅನ್ನೋದು ಇವರು ಮರೆತಿದ್ದಾರೆ. ತನಿಖೆ ಆಗಲಿ, ಸತ್ಯ ಏನೆಂಬುದು ಹೊರಬರಲಿ ಎಂದು ಹೇಳಿದರು.

ಸಚಿವ ಶಿವರಾಜ್ ತಂಗಡಿಗಿಗೆ ಪ್ರಜಾಪ್ರಭುತ್ವದ ಅರ್ಥ ಗೊತ್ತಿಲ್ಲ. ಮೋದಿ ಮೋದಿ ಅಂದೋರಿಗೆ ಕಪಾಳಕ್ಕೆ ಹೊಡೀರಿ ಅಂತಾರೆ. ತಂಗಡಿಗಿಗೆ ಒಂದೊಂದು ಸಲ ತಾನು ಕಿಮ್ ಜಾಂಗ್ ಅನ್ನಿಸಿಬಿಡುತ್ತೆ. ಪ್ರಜಾಪ್ರಭುತ್ವದಲ್ಲಿ ಮತದಾರರೇ ಪ್ರಭುಗಳು. ಇದನ್ನು ತಂಗಡಗಿ ಮರೆತು ಬಿಟ್ಟಿದ್ದಾರೆ ಕಾಂಗ್ರೆಸ್ ಶಾಸಕ ರಾಜು ಕಾಗೆ ಪ್ರಧಾನಿ ಮೋದಿಯವರು ಸತ್ತರೆ ಬೇರೆ ಪ್ರಧಾನಿ ಇಲ್ಲವಂತೆ ಹೇಳುತ್ತಾರೆ ಮತ್ತು ಕರೆಂಟ್ ಕಟ್ ಅಂಥಹಾ ಮಾಡುತ್ತೇವೆ ಹೆದರಿಸುತ್ತಾರೆ ,ಡಿಸಿಎಂ ಡಿಕೆಶಿಯವರು ಬೆಂಗಳೂರಿನ ಅರ್ಪಾಟ್ ಮೆಂಟ್ ನ ಜನರಿಗೆ ನೀರಿನ ವ್ಯವಸ್ಥೆ ,ಚರಂಡಿ ವ್ಯವಸ್ಥೆ ಸ್ಥಗಿತ ಗೊಳಿಸುತ್ತೇವೆ ಎಂದು ಹೆದರಿಸುತ್ತಾರೆ‌ ಬೆಳಗಾವಿಯ ಪ್ರಭಾವಿ ಸಚಿವರು ತಮ್ಮ ಪಕ್ಷದ ವ್ಯಯಕ್ತಿಕ ಪ್ರಚಾರ ಅಂಗನವಾಡಿ ಕಾರ್ಯಕರ್ತರಿಗೆ ಬೆದರಿಕೆ ಹಾಕಿ ಅಧಿಕಾರ ದರ್ಪದಿಂದ ಪ್ರಚಾರಕ್ಕೆ ಬಳಸಿ ಕೊಳ್ಳುತ್ತೀದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

ಶಾಸಕ ಲಕ್ಷ್ಮಣ ಸವದಿ ನನ್ನ ಸ್ನೇಹಿತ ಅವನ ಜೊತೆಗೆ ಒಡನಾಟ ಜಾಸ್ತಿವಿದೆ ಬಿಜೆಪಿ ಪಕ್ಷ ಅವರನ್ನು ಸೋತರು ಕೂಡಾ ಡಿಸಿಎಂ ಮಾಡಿತ್ತು , ಅವರಲ್ಲಿ ರಾಷ್ಟ್ರ ಪ್ರೇಮ ವಿದೆ ಅದನ್ನು ಒಪ್ಪುತ್ತೇನೆ , ರಾಷ್ಟ್ರ ಪ್ರೇಮವನ್ನು ಕಾಂಗ್ರೆಸ್ ಪಕ್ಷಕ್ಕೆ ಹೇಳಿ ಕೊಡಲ್ಲಿ , ಭಾರತ ಮಾತಕೀ ಜೈ ಅನ್ನುಲು ಖರ್ಗೆ ಅನುಮತಿ ಕೇಳುವುದು ಸೂಕ್ತವಲ್ಲ ಕಾಂಗ್ರೆಸ ನವರು ಅವನ ಮುಖಕ್ಕೆ ಮೊನಕೈಗೆ ತುಪ್ಪ ಸವರಿದ್ರು , ಲಕ್ಷ್ಮಣ ಸವದಿಯವರ ಒಂದು ವರ್ಷದ ಹಿಂದಿನ ಭಾಷಣ ಹಾಕಿದ್ರೆ , ಸವದಿಯವರಿಗೆ ಮುಜುಗರ ಆಗುತ್ತದೆ , ನಾನು ಅವರು ಬಿಜೆಪಿ ಯಲ್ಲಿ ಇದ್ದಾಗ, ಅವರ ಮನೆಯಲ್ಲಿ ಇದ್ದು ಊಟ ಮಾಡಿದ್ದೇನೆ , ನನ್ನ ಸ್ನೇಹಿತನಿಗೆ ಹಾಗೇ ಮುಜುಗರ ಆಗದಂತೆ ಎಚ್ಚರಿಕೆ ವಹಿಸಲಿ. ಮುಂದಿನ ದಿನಗಳಲ್ಲಿ ಒಳ್ಳೆಯ ನಿರ್ಧಾರ ತೆಗದುಕೊಳ್ಳಲ್ಲಿ ಎಂದು ಹೇಳಿದ್ದರು

ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ವಕ್ತಾರ ಎಂ.ಬಿ ಜೀರಲಿ, ಬಿಜೆಪಿ ಜಿಲ್ಲಾದ್ಯಕ್ಷ ಸುಭಾಷ್ ಪಾಟೀಲ್, ಎಫ್ ಎಸ್ ಸಿದ್ದನಗೌಡ, ಹನಮಂತ ಕೊಂಗಾಲಿ ಸೇರಿ ಹಲವರು ಇದ್ದರು .

ವರದಿ : ಪ್ರತೀಕ್ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!