ಇಲಕಲ್ :-ಕಂದಗಲ್ಲ ಯಾವ ನ ಘನ ಕಾರ್ಯ ಸಾಧನೆ ಮಾಡಿದ್ದೇವೆ ಎಂದು ರಾಜ್ಯದ ಜನರ ಮತ ಕೇಳುತ್ತಿದ್ದೀರಿ? ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ್ ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.
ಹುನಗುಂದ ಕ್ಷೇತ್ರದ ಕಂದಗಲ್ಲ ಗ್ರಾಮದಲ್ಲಿ ಆಯೋಜಿಸಿದ್ದಕಂದಗಲ್ಲ ಜಿ .ಪಂ ವ್ಯಾಪ್ತಿಯ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು,ಬರಗಾಲದಿಂದ ತತ್ತರಿಸಿರುವ ಕರ್ನಾಟಕದ ರೈತರ ನೆರವಿಗೆ ಪರಿಹಾರ ಬಿಡುಗಡೆ ಮಾಡದ ನಿಮಗೆ ಮತ ಕೇಳುವ ನೈತಿಕ ಹಕ್ಕೆಲ್ಲಿದೆ ಎಂದು ತರಾಟೆ ತೆಗೆದುಕೊಂಡರು.
ರೈತರ ಸಾಲ ಮನ್ನಾ ಮಾಡಿದ್ದೀರಾ? ಅವರ ಆದಾಯ ದುಪ್ಪಟ್ಟಾಗಿದೆಯಾ? ದಿನಬಳಕೆ ವಸ್ತುಗಳ ಬೆಲೆ ಕಡಿಮೆಯಾಗಿದೆಯಾ? ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿದ್ದೀರಾ? ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮಾ ಮಾಡಿದ್ದೀರಾ ? ಮತ ಕೇಳುವ ಮುನ್ನ ನೀವು ಈ ಪ್ರಶ್ನೆಗಳಿಗೆ ಉತ್ತರ ಕೊಡಬೇಕಲ್ಲವೇ ಎಂದು ಬಿಜೆಪಿ ಮುಖಂಡರನ್ನು ತಾರಾಟೆ ತೆಗೆದುಕೊಂಡು.ಈ ಚುನಾವಣೆಯಲ್ಲಿ ಬಿಜೆಪಿಯ ಯಾವ ಗಾಳಿಯೂ ಇಲ್ಲ.ಕರ್ನಾಟಕದಲ್ಲಿ ಈಗ ಸಿದ್ದರಾಮಯ್ಯ ಅವರ ಗಾಳಿ ಇದೆ, ಕಾಂಗ್ರೆಸ್ ಪಕ್ಷದ ಗಾಳಿ ಇದೆ. ಗದ್ದಿಗೌಡರ ಪರವಾಗಿ ಈ ಬಾರಿ ಯಾವ ಅಲೆಯೂ ಕೆಲಸ ಮಾಡುವುದಿಲ್ಲ ಎಂದರು.
ಯಾವಾಗಲೂ ಅಭಿವೃದ್ಧಿ ಆಧಾರದ ಮೇಲೆ ರಾಜಕಾರಣ ಮಾಡಬೇಕು. ಬಿಜೆಪಿ ಎಂದಿಗೂ ಅಭಿವೃದ್ಧಿ ಮೇಲೆ ರಾಜಕಾರಣ ಮಾಡಿಲ್ಲ. ಅವರಿಗೆ ಸಮಾಜದಲ್ಲಿ ಜಾತಿ ಸಂಘರ್ಷ, ಧರ್ಮ ಸಂಘರ್ಷ ಸೃಷ್ಟಿ ಮಾಡಿ ಸಮಾಜದ ಸ್ವಾಸ್ಥ್ಯ ನಾಶ ಮಾಡಿ ಗೊತ್ತೇ ಹೊರೆತು ಸರ್ವ ಧರ್ಮೀಯರನ್ನು ಒಟ್ಟಿಗೆ ಕರೆದುಕೊಂಡು ಹೋಗುವುದು ಗೊತ್ತಿಲ್ಲ ಎಂದರು.
ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ತತ್ವ ಉಳಿಯಬೇಕಾದರೆ ಬಿಜೆಪಿಯನ್ನು ಕಿತ್ತೊಗೆಯಬೇಕು. 2023ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದಂತೆ ಈ ಚುನಾವಣೆಯಲ್ಲಿ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಮನವಿ ಮಾಡಿದರು.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಿದೆ.ರೈತರ ಸಾಲ ಮನ್ನಾ,ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ ಒಂದು ಲಕ್ಷ ರೂ. ಯುವಕರಿಗೆ ಉದ್ಯೋಗದಂತಹ ಪ್ರಮುಖ ನಿರ್ಣಯ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಮಾತನಾಡಿ, ಈ ಚುನಾವಣೆಯಲ್ಲಿ ಸೋಲು ಖಚಿತ ಎಂಬುದು ಮನವರಿಕೆಯಾಗುತ್ತಿದ್ದಂತೆ ಬಿಜೆಪಿ ನಾಯಕರು ದಿನಕ್ಕೊಂದು ಕಥೆ ಹೇಳಲು ಆರಂಭಿಸಿದ್ದಾರೆ ಎಂದರು.
ಬರಗಾಲದಿಂದ ಅನ್ನದಾತರು ಜೀವನ ನಿರ್ವಹಣೆಗೆ ಕಷ್ಟ ಪಡುತ್ತಿದ್ದಾರೆ. ಈ ರೈತರ ಬವಣೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಣಲಿಲ್ಲ. ಅನ್ನದಾನ ನೆರವಿಗೆ ಬರಬೇಕಾದವರು ಅದಾನಿ, ಅಂಬಾನಿ ಅಂತ ಶ್ರೀಮಂತರ ನೆರವಿಗೆ ನಿಂತರು. ಇದನ್ನು ನಮ್ಮ ರೈತರು ಅರ್ಥಮಾಡಿಕೊಳ್ಳಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್ ತಟಗಾರ್, ಒಬಿಸಿ ಘಟಕದ ಅಧ್ಯಕ್ಷ ವಿಜಯ ಮಹಾಂತೇಶ್ ಗದ್ದನಕೇರಿ ಪ್ರಗತಿಪರ ರೈತರಾದ ಚೆನ್ನಪ್ಪ ಗೌಡ ನಾಡಗೌಡ್ರು,ಹಿರಿಯರಾದ ಸಂಗಣ್ಣ ಓಲೇಕಾರ್, ಸರಸ್ವತಿ ಈಟಿ, ರೆಹಮನ್ ಸಾಬ್ ಬಾಗವನ್, ಮಹಮದ್ ಸಾಬ್ ಭಾವಿಕಟ್ಟಿ, ಮತ್ತಿತರರು ಮಾತನಾಡಿದರು. ಶಾಂತಕುಮಾರ್ ಸುರಪುರ,ವೆಂಕಟೇಶ್, ಮಲ್ಲನಗೌಡ,ಮಹಾಂತೇಶ್ ಕಡಿವಾಲ್, ಬಸವರಾಜ್ ಹಳ್ಳೊಳ್ಳಿ ಮತ್ತಿತರ ಮುಖಂಡರು ವೇದಿಕೆಯಲ್ಲಿದ್ದರು.
ವರದಿ ದಾವಲ್ ಶೇಡಂ