ಬೆಳಗಾವಿ: –ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ತಪ್ಪದೆ ಮತ ಚಲಾಯಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮನವಿ ಮಾಡಿದ್ದಾರೆ.
ಬೆಳಗಾವಿ ಲೋಕಸಭೆ ಚುನಾವಣೆಯ ಅಂಗವಾಗಿ ಉತ್ತರ ವಿಧಾನಸಭಾ ಕ್ಷೇತ್ರದ ಶಿವಬಸವ ನಗರ ಹಾಗೂ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಹಿಂಡಲಗಾದ ಟೀಚರ್ಸ್ ಕಾಲೋನಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಪರ ಅವರು ಪ್ರಚಾರ ಮಾಡಿದರು. ಈ ಬಾರಿ ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮೃಣಾಲ ಹೆಬ್ಬಾಳಕರ್ ಗೆ ಮತ ನೀಡಿ ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕು.
ಮೃಣಾಲ ಸದಾ ನಿಮ್ಮ ಜೊತೆಗೇ ಇದ್ದು, ನಿಮ್ಮ ಕೆಲಸಗಳನ್ನು ಮಾಡಲಿದ್ದಾನೆ. ಲೋಕಸಭೆಯಲ್ಲೂ ಗಟ್ಟಿಯಾದ ಧ್ವನಿ ಎತ್ತಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾನೆ. ಹಾಗಾಗಿ ಬೆಳಗಾವಿಯ ಮನೆ ಮಗ ಮೃಣಾಲ ಹೆಬ್ಬಾಳಕರ್ಅವರ ಗುರುತಾಗಿರುವ ಹಸ್ತಕ್ಕೆ ಮತ ನೀಡಬೇಕು ಎಂದು ವಿನಂತಿಸಿದರು.
ಶಾಸಕ ರಾಜು ಸೇಠ್ ಮಾತನಾಡಿ, ಮೃಣಾಲ ಹೆಬ್ಬಾಳಕರ್ ಅತ್ಯಂತ ಸುಸಂಸ್ಕೃತ ಯುವಕನಾಗಿದ್ದು, ಸದಾ ನಮ್ಮ ಕೈಗೆ ಸಿಗುವ ವ್ಯಕ್ತಿಯಾಗಿದ್ದಾನೆ. ಕೆಲಸ ಮಾಡುವ ಉತ್ಸಾಹವಿದೆ. ವಿದ್ಯಾವಂತನಾಗಿದ್ದು, ಜಿಲ್ಲೆಯ ಅಭಿವೃದ್ಧಿಯ ಕನಸಿದೆ. ಹಾಗಾಗಿ ಅವನಿಗೆ ಮತ ನೀಡಿ ಆಯ್ಕೆ ಮಾಡಬೇಕು ಎಂದು ವಿನಂತಿಸಿದರು.ಈ ಸಮಯದಲ್ಲಿ ಅನೇಕ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ವರದಿ ಪ್ರತೀಕ ಚಿಟಗಿ