ಚಿಂಚೋಳಿ:- ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲೇಪೇಟ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವರ ಪ್ರಭಾವಳಿ ವೀರಭದ್ರೇಶ್ವರ ದೇವಸ್ಥಾನದಿಂದ ಸಂಗಮೇಶ್ವರ ದೇವಸ್ಥಾನದವರೆಗೆ ಅಲ್ಲಿಂದ ತೇರಿನ ಮೈದಾನದವರೆಗೆ ಪ್ರಮುಖ ಬೀದಿ ಬೀದಿಗಳಲ್ಲಿ
ಪ್ರಭಾವಳಿಯನ್ನು ಎರಡು ಓಣಿಯ ಜನರು ತಮ್ಮ ಬಲಬಲವನ್ನು ತೋರಿಸಿಕೊಳ್ಳುತ್ತಾ ಹಳ್ಳಿಕೇರಿ ಮತ್ತು ಹೊಸಕೇರಿ ಯುವಕರು ಆ ಪ್ರಭಾವಳಿಯವನ್ನು ಶಕ್ತಿಪ್ರದರ್ಶನ ಮಾಡುತ್ತಾರೆ
ಕುಂಭ ಕಳಸವನ್ನು ಶ್ರೀ ಮಲ್ಲು ದೇಸಾಯಿ ಅವರ ಮನೆಯಿಂದ ಮೆರವಣಿಗೆ ಮೂಲಕ ತಮ್ಮ ಕುಟುಂಬಸ್ಥರು ದೇವಸ್ಥಾನದಿಂದ ತೇರಿನ ಮೈದಾನದವರಿಗೆ ಕುಂಭಕಾಳಸವನ್ನು ತೆಗೆದುಕೊಂಡು ಅಗ್ಗಿ ತುಳಿಯಕ್ಕೆ ಬರುತ್ತಾರೆ ಹಾಗೂ ವೀರಭದ್ರೇಶ್ವರ ದೇವರು ಮದುಮಗ ವಾಗಿ ಹರದುರ್ ಗುಲಾಬ್ ಅವರ ಮನೆಯಿಂದಲೇ ತೇರಿನ ಮೈದಾನದವರೆಗೆ ಅವರ ಕುಟುಂಬದವರು ಸಹ ಅಗ್ನಿ ಸ್ಪರ್ಶಕ್ಕೆ ಬರುತ್ತಾರೆ
ಹೀಗೆ ಪ್ರಮುಖ ಮುಖಂಡರು ಈ ಒಂದು ಪ್ರಭಾವಳಿ ಮೆರವಣಿಗೆಯಲ್ಲಿ ಭಾಗಿಯಾಗುತ್ತಾರೆ.
ಹಾಗೂ ಗ್ರಾಮಸ್ಥರು ಕೂಡ ತಮ್ಮ ಹರಕೆಯನ್ನು ತೀರಿಸಿಕೊಳ್ಳುವ ಹಲವಾರು ರೀತಿಯಲ್ಲಿ ಅನ್ನಸಂತರ್ಪಣೆಯನ್ನು ಮಾಡುತ್ತಾರೆ ದಿ.ಗಂಗಮ್ಮ ವೀರಶೆಟ್ಟಿ ಸ್ಮರಣಾರ್ಥವಾಗಿ ಮೊಮ್ಮಗನಾದ ಶರಣು ಸೋಲಾಪುರವರು ಬಂದಂತ ಭಕ್ತರಿಗೆ ಅನ್ನದಾಹಸೋಗವನ್ನು ಸುಮಾರು ವರ್ಷಗಳಿಂದ ಮಾಡಿಕೊಂಡು ಬಂದಿರುತ್ತಾರೆ ಹೀಗೆ ಹಲವಾರು ಭಕ್ತರು ಹರಿಕೆಯನ್ನು ತೀರಿಸಿಕೊಳ್ಳುತ್ತಾರೆ
ವರದಿ ಸುನೀಲ್ ಸಲಗರ