ಐಗಳಿ : –ಅಥಣಿ ತಾಲೂಕಿನ ಐಗಳಿ ಗ್ರಾಮದ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಪಾಸ್ ಆದ ದಲಿತ ವಿಧ್ಯಾರ್ಥಿಗಳಿಗೆ ಗ್ರಾಮದ ಪ್ರತಿಷ್ಠಿತವಾದ ಸಿ ಕೆ ಜಿ ಪೊಂಡೇಶನ್ ವತಿಯಿಂದ ಸತ್ಕಾರ ಸಮಾರಂಭ ಹಾಗೂ ಗೌರವ ಧನ ನೀಡುವ ಕಾರ್ಯಕ್ರಮ ಶುಕ್ರವಾರ ಡಾ ಬಿ ಆರ್ ಅಂಬೇಡ್ಕರ್ ಸಭಾ ಭವನದಲ್ಲಿ ನಡೆಯಿತು.
2023-24 ಸಾಲಿನಲ್ಲಿ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತೀರ್ಣರಾದ ಶ್ರೇಯಸ್ ಕಾಂಬಳೆ, ಪುನೀತ ಸಿಂಗಿ, ಪ್ರಿಯಾಂಕ ಗದಾಡಿ .ಆದಿತ್ಯ ಕಾಂಬಳೆ ರಾಹುಲ ಗದಾಡೆ ವಿಠ್ಠಲ ಮಾದರ ಅಕ್ಷಯ ಮಾದರ ಬಸವರಾಜ ಮಾದರ ಸಂಪತ್ತ ಮಾದರ ರಾಧಿಕಾ ಸಿಂಗಿ ರುತಿಕಾ ಗದಾಡೆ ಪ್ರತೀಕ ಗದಾಡೆ ರೀನಾ ಜಮಖಂಡಿ ಪೂರ್ಣಿಮಾ ಕಾಂಬಳೆ ಕೀರ್ತಿ ಕಾಂಬಳೆ ಕಾವ್ಯಾಂಜಲಿ ಕಾಂಬಳೆ ವಿಧ್ಯಾರ್ಥಿಗಳಿಗೆ ಎರಡು ಸಾವಿರೂ. ಸಹಾಯ ಧನ ಹಾಗೂ ಸತ್ಕಾರ ಮಾಡಿ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಐಪಿಎಸ್ ಅಧಿಕಾರಿ ರವೀಂದ್ರ ಗಡಾದೆ ಅವರು ಭಾಗಿಯಾಗಿ ಮಾತನಾಡಿ ವಿಧ್ಯಾರ್ಥಿಗಳು ತಮ್ಮ ಜೀವನದಲ್ಲಿ ನಿರ್ದಿಷ್ಟ ವಾದ ಗುರಿಯನ್ನು ಇಟ್ಟುಕೊಂಡು ಕನಸು ಕಾಣಬೇಕು ನಮ್ಮ ಗುರಿ ಮುಟ್ಟುವವರಗೆ ಹಗಲಿರುಳು ಪ್ರಯತ್ನ ಪಡಬೇಕು. ನಾವು ಮಲಗಿದ್ದಾಗ ಕಾಣುವ ಕನಸು ವ್ಯರ್ಥವಾಗುತ್ತದೆ.
ನಾವು ಕಾಣುವ ಕನಸು ನಮಗೆ ನಿದ್ದೆ ಹತ್ತಬಾರದು . ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಇವು ನಮ್ಮ ಜೀವನದ ಮೊದಲ ಮೆಟ್ಟಿಲುಗಳು ಹುಟ್ಟಿದ ಮಗು ಅಂಬೆಗಾಲು ಇಟ್ಟು ಮೇಲೆಕ್ಕೇರಿದ ಹಾಗೇ. ಈ ಅವಧಿಯಲ್ಲಿ ವಿಧ್ಯಾರ್ಥಿಗಳು ನನಗೆ ಕಡಿಮೆ ಅಂಕ ಬಂತ್ತು ಎಂದು ಕುಗ್ಗದೆ ಹೆಚ್ಚು ಅಂಕ ಬಂತ್ತು ಎಂದು ಹಿಗ್ಗದೆ ನಮ್ಮ ಮುಂದಿನ ನಿರ್ದಿಷ್ಟವಾದ ಗುರಿಕಡೆ ಗಮನವಿರಬೇಕು.
ಗುರಿ ಇಲ್ಲದ ವ್ಯಕ್ತಿಯ ಏನೇನೂ ಸಾಧಿಸಲು ಸಾಧ್ಯವಿಲ್ಲ . ಈಗಿನ ಹೆಣ್ಣುಮಕ್ಕಳು IAS IPS KAS ಹಾಗೂ ರಾಜಕೀಯ ರಂಗದಲ್ಲಿ ಮುಂದೆ ಇದ್ದಾರೆ. ನಾವು ಎಷ್ಟೇ ಕಲಿತರು ನಮಗೆ ಮನಕೆಲಸ ತಪ್ಪಿದಲ್ಲ ಎಂದು ತಳಿಯಬಾರದು ನೀವು ಕೂಡಾ ಒಂದು ನಿರ್ದಿಷ್ಟವಾದ ಗುರಿಯನ್ನು ಇಟ್ಟುಕೊಂಡು ಓದಬೇಕು ಎಂದು ವಿಧ್ಯಾರ್ಥಿಗಳಿಗೆ ಕವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಸಿ.ಕೆ.ಜಿ ಪೊಂಡೇಶನ್ ಅಧ್ಯಕ್ಷರು ಸಮಾಜದ ಹಿರಿಯರಾದ ಕಾಶಿನಾಥ ಗದಾಡೆ ರಾಮಪ್ಪ ಕಾಂಬಳೆ ಮಾಜಿ ಗ್ರಾ ಪಂ. ಅಧ್ಯಕ್ಷ ಕುಮಾರ ಸಿಂಗಿ. ಪ್ರಕಾಶ ಕಾಂಬಳೆ ರವಿ ದೂಡ್ಡಮನಿ ಅಪ್ಪಸಾಬ ಸಿಂಗಿ ಸಂಜು ನಾಗರಾಳೆ ಸಂದೀಪ ಕಾಂಬಳೆ ಅರುಣ ಕಾಂಬಳೆ ಮುಂತಾದವರು ಉಪಸ್ಥಿತಿ ಇದ್ದರು ವರ್ಷಾ ಗಡಾದೆ ಅವರು ವಿಧ್ಯಾರ್ಥಿನಿಗಳಿಗೆ ಸತ್ಕಾರ ಮಾಡಿದರು . ಮಹಾತೇಶ ಕಾಂಬಳೆ ಶಿಕ್ಷಕರು ಸ್ವಾಗತಿಸಿ ವಂದಿಸಿದರು..
ವರದಿ;- ಆಕಾಶ ಮಾದರ