ಚನ್ನಮ್ಮ ಕಿತ್ತೂರು: ಹೌದು ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ನಿಮಿತ್ಯ ನಿನ್ನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಮಲಪ್ರಭಾ ನದಿ ದಂಡೆಯ ದಾಸ್ತಿಕೊಪ್ಪ ಹಾಗೂ ವೀರಾಪುರ ಗ್ರಾಮಗಳಲ್ಲಿ ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಎರಡು ಗ್ರಾಮಗಳಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರೈತರ ರಾಸುಗಳ ಜೋಡಿ ಮೂಲಕ ಗ್ರಾಮಗಳ ಓಣಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಓಣಿಗಳನ್ನು ಮಾವಿನ ಎಲೆಗಳ ಮೂಲಕ ಶೃಂಗಾರ ಮಾಡಲಾಗಿತ್ತು. ವೀರಾಪುರ ಗ್ರಾಮಕ್ಕೆ ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯಿತಿ ವತಿಯಿಂದ ಕುಡಿಯುವ ನೀರಿನ ಟ್ಯಾಂಕರ್ ಬಸವ ಜಯಂತಿ ದಿವಸ ವಿತರಣೆ ಮಾಡಿದಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಗಪ್ಪ ಪಿಶಿ, ಆಲಿ ಸಾಬ್ ತೆಲಗದೆ ಹಾಗೂ ಮಂಜು ಸಾದುನವರ್ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಅದನ್ನು ಬರಮಾಡಿಕೊಳ್ಳಲಾಯಿತು. ರಾಸುಗಳ ಮೆರವಣಿಗೆಯಲ್ಲಿ ತುಕಾರಂ ಹುಚ್ಚಗೌಡರ ರಾಸುಗಳು ಗಮನ ಸೆಳೆದವು. ಈ ಬಸವ ಜಯಂತಿಯ ಆಚರಣೆ ಬಗ್ಗೆ ದಾಸ್ತಿಕೊಪ್ಪ ಮುಖಂಡರಾದ ತುಕರಾಮ್ ಹುಚ್ಚಗೌಡರ್ ಮಾತನಾಡಿದರು. ಒಟ್ಟಾರೆ ವಿಶ್ವಗುರು ಬಸವ ಜಯಂತಿಯನ್ನು ಎರಡು ಗ್ರಾಮಗಳಲ್ಲಿ ಅದ್ದೂರಿಯಾಗಿ ಮಾಡಲಾಯುತು,
ವರದಿ: ಬಸವರಾಜು