ಬೆಂಗಳೂರು: –ಪೀಣ್ಯ,ದಾಸರಹಳ್ಳಿ ಕ್ಷೇತ್ರದ ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಯ ದ್ವಾರಕಾನಗರದಲ್ಲಿ ಚಾನ್ ಕೀ ಮಾರ್ಷಲ್ ಆರ್ಟ್ಸ್ ನ ಕೇಂದ್ರ ಕಚೇರಿಯನ್ನು ಗ್ರ್ಯಾಂಡ್ ಮಾಸ್ಟರ್ ರಮೇಶ್ ಬಾಲಕೃಷ್ಣ, ಚಾನ್ ಕೀ ಟ್ರಸ್ಟ್ ನ ಉಪಾಧ್ಯಕ್ಷ ಡಾ. ಮುರಳಿ ಟಿ.ವಿ, ಚಲನಚಿತ್ರ ನಟರು, ನಿರ್ಮಾಪಕ ನಿರ್ದೇಶಕ ಹಾಗೂ ಚಾನ್ ಕಿ ಮಾರ್ಷಲ್ ಆರ್ಟ್ಸ್ ನ ತರಬೇತಿದಾರ ಡಾ. ಚಾಮರಾಜ ಮಾಸ್ಟರ್, ಶ್ರೀನಿವಾಸ ಮಂಜುನಾಥ ಫೌಂಡೇಶನ್ ನ ಅಧ್ಯಕ್ಷರಾದ ಡಾ. ಎಸ್ ಮಂಜುನಾಥ್(ಎಬಿಬಿ ಮಂಜಣ್ಣ) ರವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಗ್ರ್ಯಾಂಡ್ ಮಾಸ್ಟರ್ ರಮೇಶ್ ಬಾಲಕೃಷ್ಣ ಗುರು ಶಿಷ್ಯರ ಬಾಂಧವ್ಯದ ಬಗ್ಗೆ ಚಾನ್ ಕಿ ಸಂಸ್ಥೆಯ ನಡೆದು ಬಂದ ಹಾದಿಯ ಬಗ್ಗೆ ಸವಿವರವಾಗಿ ತಮ್ಮ ಸವಿ ನೆನಪುಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ದೀಪ ಬೆಳಗಿಸಿ ಮಾತನಾಡಿದ ಶ್ರೀನಿವಾಸ ಮಂಜುನಾಥ ಫೌಂಡೇಶನ್ ನ ಅಧ್ಯಕ್ಷ ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಾ. ಎಸ್ ಮಂಜುನಾಥ್(ಎಬಿಬಿ ಮಂಜಣ್ಣ), ‘ಮಾರ್ಷಲ್ ಆರ್ಟ್ಸ್ ಕಲಿತವರು ಬೇರೆವರಿಗಿಂತಲೂ ಸ್ವಲ್ಪ ವಿಭಿನ್ನವಾಗಿಯೇ ಕಾಣುತ್ತಾರೆ, ಏಕೆಂದರೆ ಈ ಆಟದಲ್ಲಿ ಯೋಚನಾ ಶಕ್ತಿ, ಮಾನಸಿಕ ಸದೃಢತೆ, ದೈಹಿಕ ಬಲ, ಕಲಾತ್ಮಕವಾದ ತಂತ್ರಗಳು ಎಲ್ಲವನ್ನೂ ಹೊಂದಿರುವಂತಹ ಏಕೈಕ ಆಟವಾಗಿದೆ ಎಂದರೆ ತಪ್ಪಾಗುವದಿಲ್ಲ’
ಎಂದು ತಿಳಿಸಿದ ಅವರು ಮುಂದೆ ಇಂತಹ ಸಂಸ್ಥೆಗಳು ಕ್ಷೇತ್ರದಾದ್ಯಂತ ತೆರೆಯುವುದರ ಮುಖಾಂತರ ತಮ್ಮ ಸೇವೆಯನ್ನು ಇಡೀ ಕ್ಷೇತ್ರಕ್ಕೆ ವಿಸ್ತರಿಸುವಂತೆ ಹಾಗೂ ನಮ್ಮ ರಾಷ್ಟ್ರಕ್ಕೆ ಈ ನಾಡಿಗೆ ಸತ್ಪ್ರಜೆಗಳನ್ನು ನೀಡುವಂತೆ ಸಂಸ್ಥೆಯ ಮುಖ್ಯಸ್ಥ ಚಂದ್ರಶೇಖರ್ ಮತ್ತು ಕೃಷ್ಣ ಮಾಸ್ಟರ್ ರವರಲ್ಲಿ ಮನವಿ ಮಾಡಿಕೊಂಡರು.
ಜೊತೆಗೆ ನೂರಾರು ವಿದ್ಯಾರ್ಥಿಗಳು, ಪೋಷಕರು, ಸುತ್ತಲಿನ ನಾಗರೀಕರು ಭಾಗವಹಿಸಿ ಸಮಾರಂಭಕ್ಕೆ ಹೆಚ್ಚಿನ ಮೆರುಗು ತಂದರು. ಈ ಕಾರ್ಯಕ್ರಮದುದ್ದಕ್ಕೂ ಹನುಮ ವೇಷದಾರಿಯೂ ಸಾರ್ವಜನಿಕರನ್ನು ನೆರೆದಿದ್ದ ಸುತ್ತಲ ನಾಗರಿಕರನ್ನು ಗಮನ ಸೆಳೆದು ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
ಅತಿಥಿಗಳಾಗಿ ಆರ್.ಸಿ ಚಂದ್ರಶೇಖರ್, ಖ್ಯಾತ ಸಂಗೀತ ನಿರ್ದೇಶಕ ಸತೀಶ್ ಆರ್ಯನ್, ನೃತ್ಯ ನಿರ್ದೇಶಕ ನಾಗರಾಜ್, ಫೈರೋಜ್ ಎಂ, ಟೈಕ್ವಾಂಡು ಕರಾಟೆ ಸಂಸ್ಥೆಯ ಉಪಾಧ್ಯಕ್ಷ ಕೃಷ್ಣಮೂರ್ತಿ, ಕರಾಟೆ ಮಾಸ್ಟರ್ ಮಂಜುನಾಥ್, ಶಿವಪ್ಪ, ನೃತ್ಯ ಶಿಕ್ಷಕರಾದ ಸಂತೋಷ್ ಕುಮಾರ್ ಸೇರಿದಂತೆ ಚಾನ್ ಕಿಯ ಪದಾಧಿಕಾರಿಗಳು ಸರ್ವ ಸದಸ್ಯರು ಪಾಲ್ಗೊಂಡಿದ್ದರು.
ವರದಿ:-ಅಯ್ಯಣ್ಣ ಮಾಸ್ಟರ್