ಧಾರವಾಡ:- ಉಪ್ಪಿನ ಬೆಟಗೇರಿ ಗ್ರಾಮದ ಶ್ರೀ ಗುರು ವೀರೂಪಾಕ್ಷೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕುಮಾರಿ ಕಾವೇರಿ ಬಸವರಾಜ ಗಾಣಿಗೇರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 91.2% A+ ಪ್ರತಿಷತ ಅಂಕಗಳನ್ನು ಪಡೆದು ಶಾಲೆಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾಳೆ.

ಹಾಗೂ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ.
ತಂದೆ ಬಸವರಾಜ ಗಾಣಿಗೇರ ಆಶಯದಂತೆ ಮಗಳು ಉತ್ತಮ ಅಂಕ ಪಡೆದುಕೊಂಡಿರುವದು ಪಾಲಕರಿಗೆ ಹಾಗೂ ಶಾಲೆಗೆ ಬಹಳ ಹರ್ಷ ತಂದಿದೆ.
ವರದಿ: ವಿನಾಯಕ ಗುಡ್ಡದಕೇರಿ




