ಅತೀಯಾದ ಸಕ್ಕರೆ ಸೇವನೆಯಿಂದ ತೂಕ ಹೆಚ್ಚಾಗುವುದು, ಮೂತ್ರಪಿಂಡಕ್ಕೆ ಹಾನಿಕರ ಅಷ್ಟೆ ಅಲ್ಲ ಲೈಂಗಿಕ ಜೀವನಕ್ಕೂ ಮಾರಕ ವಾಗಿದೆ.
ಸಕ್ಕರೆಯಕ್ತ ಆಹಾರಗಳು ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುತ್ತವೆ. ಹೆಚ್ಚಿನ ಸಕ್ಕರೆ ಸೇವನೆಯು ಉರಿಯೂತ, ಅಪಧಮನಿಗಳ ಗೋಡೆಗಳನ್ನು ದಪ್ಪವಾಗಿಸುವ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುವ ಮೂಲಕ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.
ಅತಿಯಾದ ಸಕ್ಕರೆ ಸೇವನೆಯಿಂದ ಬಾಯಿಯಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ ಬೆಳವಣಿಗೆಯಾಗುತ್ತವೆ. ಹಲ್ಲಿನ ಆರೋಗ್ಯದ ಮೇಲು ನಕಾರಾತ್ಮಕ ಪರಿಣಾಮ ಬೀರುತ್ತದೆ. ವಸಡು ಕಾಯಿಲೆಗೆ ಕಾರಣವಾಗುತ್ತದೆ ಎಂದು ದೆಹಲಿ ಮೂಲದ ದಂತವೈದ್ಯೆ ಸೋನಾಲಿ ಖುರಾನಾ ಹೇಳಿದ್ದಾರೆ.
ಲೈಂಗಿಕ ಜೀವನಕ್ಕೆ ಸಕ್ಕರೆ ಮಾರಕ
ಸಕ್ಕರೆ ಕರಗಿಸಲು ಯಕೃತ್ತು ಅಧೀಕ ಶ್ರಮ ಪಡಬೇಕಾಗುತ್ತದೆ. ಯಕೃತ್ತನ್ನು ಅಸ್ವಸ್ಥಗೊಳಿಸುತ್ತದೆ. ಕೊಬ್ಬಿನ ಯಕೃತ್ತಿನಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹೃದ್ರೊಗದ ಆರೋಗ್ಯಕ್ಕೂ ಸಕ್ಕರೆ ಸೇವನೆ ಒಳ್ಳೆಯದಲ್ಲ.
ಹೆಚ್ಚು ಸಕ್ಕರೆ ಸೇವನೆ ಮೇದೋಜ್ಜೀರಕ ಗ್ರಂಥಿಯು ಅಧಿಕಾವಧಿ ಕೆಲಸ ಮಾಡುತ್ತದೆ, ಇದು ಮಧುಮೇಹಕ್ಕೆ ಕಾರಣವಾಗಬಹುದು. ಸಕ್ಕರೆಯು ಮೂತ್ರಪಿಂಡಗಳನ್ನು ಹಾನಿಗೊಳಿಸುತ್ತದೆ. ಇದರಿಂದ ಮೂತ್ರಪಿಂಡದ ರಕ್ತ ಸ್ವಚ್ಛಗೊಳಿಸುವ ಕಾರ್ಯ ಕಷ್ಟವಾಗುತ್ತದೆ. ಪುರುಷರು ಹೆಚ್ಚಿನ ಸಕ್ಕರೆ ಸೇವಿಸಿದರೆ ನಿಮಿರುವಿಕೆಗೆ ಅಗತ್ಯವಾದ ರಕ್ತದ ಹರಿವಿನ ಸಮಸ್ಯೆಗೆ ಕಾರಣವಾಗಬಹುದು. ಹೀಗಾಗಿ ನೀವು ಎಷ್ಟು ಸಕ್ಕರೆ ಸೇವಿಸುತ್ತೀರಿ ಎಂಬುದರ ಬಗ್ಗೆ ಜಾಗರೂಕರಾಗಿರಬೇಕು.
ಕಡಿಮೆ ಸಕ್ಕರೆ ಸೇವನೆಗೆ ಸಲಹೆಗಳು:
-ಸಕ್ಕರೆ ಪಾನೀಯ ಬದಲು ನೀರು ಕುಡಿಯಿರಿ.
-ಸಕ್ಕರೆ ತಿಂಡಿಗಳ ಬದಲಿಗೆ ಹಣ್ಣುಗಳನ್ನು ಸೇವಿಸಿ.
-ಸಕ್ಕರೆಯ ತಿಂಡಿಗಳ ಬದಲು ಬೆಲ್ಲ, ಹನಿ, ಬೆಣ್ಣೆ ಮೊದಲಾದ ನೈಸರ್ಗಿಕ ಸಿಹಿಯನ್ನು ಬಳಸಿ.
-ತಾಜಾ ಪದಾರ್ಥಗಳ ಬಳಕೆಯಿಂದ ಸಿಹಿ ಪದಾರ್ಥಗಳನ್ನು ತಯಾರಿಸಿ.