ನಿಡಗುಂದಿ:- ರೈತರಿಗೆ ಬರ ಪರಿಹಾರ ಮಂಜೂರು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನಿಡಗುಂದಿ ತಾಲ್ಲೂಕು ಘಟಕ ಪದಾಧಿಕಾರಿಗಳು ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಆನಂದ ಹಡಗಲಿ, ಸಕಾಲಕ್ಕೆ ಮಳೆಯಾಗದೆ ಬರ ಆವರಿಸಿದ್ದರಿಂದ ಬಿತ್ತಿದಬೆಳೆಗಳು ಕೈ ಸೇರದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ಸರ್ಕಾರ ನಿಡಗುಂದಿ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿ ಈಗಾಗಲೇ ಬರ ಪರಿಹಾರ ಮಂಜೂರು ಮಾಡಿದೆ.ಆದರೆ ಅನೇಕ ರೈತರಿಗೆ ಬರ ಪರಿಹಾರ ಹಣ ಬಂದಿಲ್ಲ. ಇದು ರೈತರಿಗೆ ತೊಂದರೆ ಆಗಿದೆ,ನಿಡಗುಂದಿ ಪಟ್ಟಣದಲ್ಲಿ ರೈತರಿಗೆ ಬರ ಪರಿಹಾರ ಮಂಜೂರು ಮಾಡುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ತಾಲ್ಲೂಕಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ,ಕರವೇ ಜಿಲ್ಲಾ ಉಪಾಧ್ಯಕ್ಷ ಸತೀಶ ನರಸರೆಡ್ಡಿ, ಶಿವಾನಂದ ಜಿಲ್ಲಾ ಹೊನ್ಯಾಳ, ಕಾರ್ಯದರ್ಶಿ ರಮೇಶ ನರಸರೆಡ್ಡಿ, ಆನಂದ ಭೋವಿವಡ್ಡರ,ಸಂತೋಷ ಕಡಿ, ಮುರುಗೆ ಗಣಾಚಾರಿ, ವಿರೇಶ ತೋಟ, ಶಿವು ಬಣಗಾರ, ಮಲ್ಲನಗೆ ಪಾಟೀಲ, ಪ್ರದೀಪ ಮಮದಾಪೂ, ವಿಜಯ ಚಿನಿವಾಲರ, ಮಂಜು ದಲಬಂಜನ, ಬಸನಗೌಡ ಪಾಟಿಲ ಇದ್ದರು.
ವರದಿ :ಅಲಿ ಮಕಾನದಾರ