ರಾಮನಗರ: ಜಿಲ್ಲೆಯಲ್ಲಿ ಈಜಲು ಕಲ್ಲಿನ ಹೊಂಡಕ್ಕೆ ತೆರಳಿದ್ದಂತ ಮೂವರು ಮಕ್ಕಳು ನೀರುಪಾಲಾಗಿರೋ ಘಟನೆ ನಡೆದಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಬೆಟ್ಟದ ಮೇಲಿರುವಂತ ತಗ್ಗು ಪ್ರದೇಶದಲ್ಲಿ ನೀರು ನಿಂತಿತ್ತು.ಈ ನೀರಿನಲ್ಲಿ ಈಜಾಡೋದಕ್ಕಾಗಿ ಮೂವರು ಮಕ್ಕಳು ತೆರಳಿದ್ದರು. ಹೀಗೆ ಈಜಲು ತೆರಳಿದ್ದಂತ ಮೂವರು ಮಕ್ಕಳು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಈ ವಿಷಯ ತಿಳಿದು ಸ್ಥಳಕ್ಕೆ ಆಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ, ಮೂವರು ಮಕ್ಕಳ ಮೃತದೇಹವನ್ನು ಹುಡುಕಿ ಹೊರ ತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂದಹಾಗೇ ನಿನ್ನೆಯಷ್ಟೇ ಹಾಸನದ ಅಲೂರಿನ ಮುತ್ತಿಗೆ ಗ್ರಾಮದಲ್ಲಿ ಬೇಸಿಗೆ ರಜೆ ನಿಮಿತ ನಾಲ್ವರು ಮಕ್ಕಳು ಈಜಾಡುವ ಸಲುವಾಗಿ ಕೆರೆಗೆ ಹೋಗಿ, ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಮೃತ ಮಕ್ಕಳನ್ನು ಜೀವನ್, ಸಾತ್ವೀಕ್, ವಿಶ್ವ, ಪೃಥ್ವಿ ಎಂಬುದಾಗಿ ಗುರುತಿಸಲಾಗಿತ್ತು. ಈ ಘಟನೆ ಬೆನ್ನಲ್ಲೇ ಇಂದು ರಾಮನಗರದಲ್ಲಿ ಮೂವರು ಮಕ್ಕಳು ನೀರುಪಾಲಾಗಿದ್ದಾರೆ.