ಹುಬ್ಬಳ್ಳಿ: -ನಗರದಲ್ಲಿ ದಿನೇ ದಿನೆ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಲೇ ಇದ್ದು, ನೇಹಾ ಹತ್ಯೆ ಮಾಸುವ ಮುನ್ನವೇ ಅಂಜಲಿಯ ಕೊಲೆಯಾಗಿದೆ. ಇದು ಜನರನ್ನು ಭಯಭೀತಗೊಳಿಸಿದೆ. ಮಕ್ಕಳನ್ನು ಹೊರಗಡೆ ಬಿಡಲು ಹೆದರುವಂತಾಗಿದೆ ಎಂದು ಸಮಾಜ ಸೇವಕ ರಾಜು ನಾಯಕವಾಡಿ ಕಳವಳ ವ್ಯಕ್ತಪಡಿಸಿದ್ದಾರೆ.
ಒಂದು ತಿಂಗಳ ಹಿಂದಷ್ಟೇ ಕಾಲೇಜು ಕ್ಯಾಂಪಸ್ ಒಳಗಡೆಯೇ ನೇಹಾಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದು ಕಣ್ಣ ಮುಂದೆಯೇ ಇದೆ. ಎusಣiಛಿe ಈoಡಿ ಟಿehಚಿ ಬರಹವನ್ನು ಇದೀಗ ಅಂಜಲಿಗೂ ನೀಡುವಂತಾಗಿದೆ. ಈ ಹಿಂದೆಯೇ ನೇಹಾ ಕೊಲೆಯಾದಾಗ ಸರ್ಕಾರ ಅಪರಾಧಿಗೆ ತಕ್ಕಶಾಸ್ತಿ ಮಾಡಿದ್ದರೆ
ಇಂದು ಅಂಜಲಿ ಕೊಲೆಯಾಗುತ್ತಿರಲಿಲ್ಲ. ಅಪರಾಧಿಗಳಲ್ಲಿ ಪೊಲೀಸರು, ಕಾನೂನು ಭಯ ಇಲ್ಲವಾಗಿದೆ. ಇದನ್ನು ನೋಡಿದರೆ ಜನರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಹೀಗಾಗಿ ಕೂಡಲೇ ಸರ್ಕಾರ ಮುಂದೆ ಇಂತಹ ಘಟನೆಗಳಾಗದಂತೆ ತಪ್ಪಿತಸ್ಥ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇನ್ನೊಮ್ಮೆ ಇಂತಹ ಕೃತ್ಯಕ್ಕೆ ಅಪರಾಧಿಗಳು ಕೈಹಾಕಲು ಹಿಂದೆ ಮುಂದೆ ನೋಡಬೇಕು ಆ ತರಹ ಕಠಿಣ ಶಿಕ್ಷೆ ನೀಡಬೇಕೆಂದು ನಾಯಕವಾಡಿ ಒತ್ತಾಯ ಮಾಡಿದ್ದಾರೆ.
ವರದಿ:- ಸುಧೀರ್ ಕುಲಕರ್ಣಿ