ಪ್ರಾರಂಭದಲ್ಲಿ ಹೊಟ್ಟೆಯ ಕ್ಯಾನ್ಸರ್ ಲಕ್ಷಣಗಳು ಸಾಮಾನ್ಯ ಹೊಟ್ಟೆಯ ಸಮಸ್ಯೆಗಳಂತಿರುತ್ತವೆ. ಆದ್ದರಿಂದ ಸರಿಯಾದ ಸಮಯದಲ್ಲಿ ಗುರುತಿಸಲಾಗುವುದಿಲ್ಲ.
ಕ್ಯಾನ್ಸರ್ ಮಾರಣಾಂತಿಕ ಮತ್ತು ಅತ್ಯಂತ ಅಪಾಯಕಾರಿ ಕಾಯಿಲೆ. ಪ್ರತಿ ವರ್ಷ ಲಕ್ಷಾಂತರ ಜನರು ಸಾವನಪ್ಪುತ್ತಿದ್ದಾರೆ. ಕ್ಯಾನ್ಸರ್ ನಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಹೊಟ್ಟೆಯ ಕ್ಯಾನ್ಸರ್ ಒಂದು. ಇದನ್ನು ಕಿಬ್ಬೊಟ್ಟೆಯ ಕ್ಯಾನ್ಸರ್ ಅಥವಾ ಗ್ಯಾಸ್ಟ್ರಿಕ್ ಕ್ಯಾನ್ಸರ್ ಎಂದೂ ಕರೆಯುತ್ತಾರೆ. ಹೊಟ್ಟೆಯಲ್ಲಿ ಗೆಡ್ಡೆಗಳು ಬೆಳೆದಾಗ ಹೊಟ್ಟೆಯ ಕ್ಯಾನ್ಸರ್ ಸಂಭವಿಸುತ್ತದೆ.
ಪ್ರಾರಂಭದಲ್ಲಿ ಸಾಮಾನ್ಯ ಹೊಟ್ಟೆ ನೊವಿನಂತಿರುವ ಈ ಸಮಸ್ಯೆ ಯನ್ನು ಗುರುತಿಸುವಷ್ಟರಲ್ಲಿ ಇದು ದೇಹದ ವಿವಿಧ ಭಾಗಗಳಲ್ಲಿ ಪಸರಿಸಲು ಪ್ರಾರಂಭಿಸುವತ್ತದೆ.
ಈ ಮಾರಣಾಂತಿಕ ಕಾಯಿಲೆಯ ಐದು ಲಕ್ಷಣಗಳು ಇಲ್ಲಿವೆ.
ಹೊಟ್ಟೆಯಲ್ಲಿ ಊತ ಮತ್ತು ತೀವ್ರವಾದ ನೋವು
ಹೊಟ್ಟೆಯಲ್ಲಿ ತೀವ್ರವಾದ ನೋವು ಮತ್ತು ಊತವಿರಬಹುದು. ಯಾವುದೇ ಕಾರಣ ವಿಲ್ಲದೆ ಹೊಟ್ಟೆ ನೋವು ಮುಂದುವರೆದರೆ ತಕ್ಷಣ ಜಾಗರೂಕರಾಗಿ. ನೋವು ಹೊಟ್ಟೆಯಲ್ಲಿರುತ್ತದೆ ಮತ್ತು ಊತವು ಹೊಟ್ಟೆಯ ಮೇಲ್ಭಾಗದಲ್ಲಿರುತ್ತದೆ. ಗಡ್ಡೆಯ ಬೆಳೆದಂತೆ ಹೊಟ್ಟೆಯಲ್ಲಿ ನೋವು ಕೂಡ ಹೆಚ್ಚಾಗುತ್ತದೆ.
ಹೊಟ್ಟೆಯಲ್ಲಿ ಉಬ್ಬುವಿಕೆಯ ಸಮಸ್ಯೆ
ಆಹಾರ ಪದ್ದತಿಯ ಏರುಪೇರಿನಿಂದ ಹೊಟ್ಟೆಯಲ್ಲಿ ಉಬ್ಬುವಿಕೆಯ ಸಮಸ್ಯೆ ಉಂಟಾಗುತ್ತದೆ. ಇದು ಸಾಮಾನ್ಯವೂ ಆಗಿರಬಹುದು. ಆದರೆ ಉಬ್ಬುವುದು ಹೆಚ್ಚಿನ ಅವಧಿಯವರೆಗೆ ಆಗುತ್ತಿದ್ದರೆ ಅದು ಹೊಟ್ಟೆಯ ಕ್ಯಾನ್ಸರ್ ಲಕ್ಷಣವಿರಬಹುದು. ಯಾವಾಗಲೂ ಹೊಟ್ಟೆ ಉಬ್ಬುವುದು ಅನುಭವವಾದರೆ ಅದನ್ನು ನಿರ್ಲಕ್ಷಿಸಬೇಡಿ. ತಕ್ಷಣ ತಪಾಸಣೆ ಮಾಡಿಸಿ ಹೊಟ್ಟೆ ಉಬ್ಬರಕ್ಕೆ ನಿಖರವಾದ ಕಾರಣ ತಿಳಿದುಕೊಳ್ಳಬೇಕು.
ಎದೆಯಲ್ಲಿ ಸುಡುವ ಸಂವೇದನೆ
ಎದೆಯಲ್ಲಿ ಸುಡುವ ಅನುಭವವಾಗುವುದು ಮತ್ತು ನೋವು ಕೂಡ ಹೊಟ್ಟೆ ಕ್ಯಾನ್ಸರ್ನ ಲಕ್ಷಣ. ಹೊಟ್ಟೆಯಲ್ಲಿ ಕ್ಯಾನ್ಸರ್ ಇದ್ದಾಗ ಜೀರ್ಣಕ್ರಿಯೆ ಕುಂಠಿತವಾಗುತ್ತದೆ. ಇದು ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್ ಸಮಸ್ಯೆಗಳನ್ನು ಪ್ರಚೋದಿಸಬಹುದು. ಇದು ದೀರ್ಘಕಾಲದವರೆಗೆ ಮುಂದುವರಿದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ವಾಂತಿ ಮತ್ತು ವಾಕರಿಕೆ ಭಾವನೆ
ಯಾವಾಗಲೂ ವಾಂತಿ ಮತ್ತು ವಾಕರಿಕೆ ಅನುಭವ ಆಗುತ್ತಿದ್ದರೆ, ಅದು ಹೊಟ್ಟೆಯ ಕ್ಯಾನ್ಸರ್ ಆಗಿರಬಹುದು. ಕಳಪೆ ಜೀರ್ಣಕ್ರಿಯೆಯಿಂದಾಗಿ ಇದು ಸಂಭವಿಸುತ್ತದೆ. ಕ್ಯಾನ್ಸರ್ ಮುಂದುವರೆದಂತೆ, ಸಮಸ್ಯೆಯೂ ಹೆಚ್ಚಾಗುತ್ತದೆ. ಅಂತಹ ಲಕ್ಷಣಗಳು ಕಂಡುಬಂದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಮಲದಿಂದ ರಕ್ತ ಬೀಳುವುದು
ಹೊಟ್ಟೆಯ ಕ್ಯಾನ್ಸರ್ನ ಇದ್ದಲ್ಲಿ, ಮಲದಲ್ಲಿ ರಕ್ತ ಕಾಣಿಸಿಕೊಳ್ಳಬಹುದು. ಇದನ್ನು ನಿರ್ಲಕ್ಷಿಸಬಾರದು, ಇಲ್ಲದಿದ್ದರೆ ಪರಿಸ್ಥಿತಿಯು ಗಂಭೀರವಾಗಬಹುದು. ತಕ್ಷಣ ವೈದ್ಯರ ಬಳಿಗೆ ಹೋಗಿ ಪರೀಕ್ಷಿಸಬೇಕು, ಇದರಿಂದ ಸಮಸ್ಯೆ ಪ್ರಾರಂಭವಾಗುವ ಮೊದಲು ಅದನ್ನು ತೊಡೆದುಹಾಕಬಹುದು.