Ad imageAd image

ಮೊಬೈಲ್ ಕಸಿದುಕೊಂಡಿದ್ದಕ್ಕೆ ತಂಗಿ, ತಂದೆ-ತಾಯಿಯನ್ನು ಕೊಲೆಗೈದ 16 ವರ್ಷದ ಬಾಲಕ

Bharath Vaibhav
ಮೊಬೈಲ್ ಕಸಿದುಕೊಂಡಿದ್ದಕ್ಕೆ ತಂಗಿ, ತಂದೆ-ತಾಯಿಯನ್ನು ಕೊಲೆಗೈದ 16 ವರ್ಷದ ಬಾಲಕ
WhatsApp Group Join Now
Telegram Group Join Now

ಮೊಬೈಲ್ ಕಸಿದುಕೊಂಡಿದ್ದಕ್ಕೆ ತಂದೆ-ತಾಯಿ ಹಾಗೂ ತಂಗಿಯನ್ನು 16 ವರ್ಷದ ಬಾಲಕ ಕೊಲೆಗೈದ ಭೀಕರ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ.ಬ್ರೆಜಿಲ್ ರಾಜಧಾನಿ ಸಾವೊಪಾಲೊದಲ್ಲಿ ಶುಕ್ರವಾರ ಈ ಆಘಾತಕಾರಿ ಘಟನೆ ನಡೆದಿದ್ದು, ಕೊಲೆಗೈದ ನಂತರ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ ಬಾಲಕ, ಶವಗಳ ಜೊತೆ ದಿನ ಕಳೆದಿದ್ದಾನೆ.

ಅತಿಯಾಗಿ ಮೊಬೈಲ್ ಬಳಸುತ್ತಿದ್ದ ಮನೆಯವರು ವಾದ ಮಾಡಿದ್ದಾರೆ. ವಾಗ್ವಾದ ವಿಕೋಪಕ್ಕೆ ತಿರುಗಿದ್ದು, ಬಾಲಕ ಮೂವರ ಮೇಲೆ ಗುಂಡು ಹಾರಿಸಿ ಕೊಲೆಗೈದಿದ್ದಾನೆ.

ತಂದೆ ಬಳಿ ಇದ್ದ ಸರ್ವಿಸ್ ಗನ್ ಇಟ್ಟುಕೊಂಡಿದ್ದೆ. ಮೊಬೈಲ್ ಕಿತ್ತುಕೊಂಡಿದ್ದರಿಂದ ಸಿಟ್ಟಿನಿಂದ ತಂದೆಯ ಬೆನ್ನಿಗೆ ಗುಂಡು ಹಾರಿಸಿದೆ. ನಂತರ ಮೇಲಂತಸ್ತಿನಲ್ಲಿದ್ದ 16 ವರ್ಷದ ತಂಗಿ ಮುಖದ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡಿನ ಸದ್ದು ಕೇಳಿ ಬಂದ ತಾಯಿ ಮೇಲೂ ಗುಂಡು ಹಾರಿಸಿ ಕೊಲೆಗೈದಿದ್ದಾನೆ ಎಂದು ಸ‍್ಥಳೀಯ ಪೊಲೀಸರು ತಿಳಿಸಿದ್ದಾರೆ.

ತಂದೆಗೆ 57 ವರ್ಷ ಹಾಗೂ ತಾಯಿಗೆ 50 ವರ್ಷ ಆಗಿತ್ತು. ಕೊಲೆಗೆ ಕಾರಣ ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಅಸಮಾಧಾನವೋ ಅಥವಾ ಆತ ಮಾನಸಿಕ ಅಸ್ವಸ್ಥನೊ ಎಂಬುದನ್ನು ತಿಳಿಯಲು ವೈದ್ಯಕೀಯ ಪರೀಕ್ಷೆ ಮಾಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!