ಹೆರಿಗೆಯ ನಂತರ ಹಾರ್ಮೋನುಗಳ ಅಸಮತೋಲನ ವಾಗುತ್ತವೆ. ನವಜಾತ ಶಿಶುವಿನ ಆರೈಕೆಯ ಜವಾಬ್ಧಾರಿಯು ಹೆಚ್ಚಾಗುತ್ತದೆ. ದೇಹದ ಬದಲಾವಣೆ ಅರಿವೂ ಇರುವುದಿಲ್ಲ. ಇಂತಹ ಕಾರಣಗಳಿಂದ, ಈ ಅವಧಿಯು ಅವರಿಗೆ ತುಂಬಾ ಕಷ್ಟಕರವಾಗಿದೆ. ಆದ್ದರಿಂದ ನೀವು ಮಾತೃತ್ವವನ್ನು ಆನಂದಿಸಲು ಕೆಲವು ಸಲಹೆಗಳು ಕೆಳಗಿನಂತಿವೆ.
ತಪ್ಪುಗಳು ವೈಫಲ್ಯವಲ್ಲ
ಹೆರಿಗೆಯ ನಂತರ ಮಗುವನ್ನು ಆರೈಕೆ ಮಾಡುವುದು, ಮಗುವನ್ನು ಶುಚಿಯಾಗಿಡುವುದು ಒಂದು ಪ್ರಮುಖ ಕೆಲಸವಾಗಿರುತ್ತದೆ. ಇದರಿಂದ ಒತ್ತಡವನ್ನು ಹೆಚ್ಚಿಸಿಕೊಳ್ಳುತ್ತಾಳೆ. ಕೆಲ ತಪ್ಪುಗಳಾಗುವುದು ಸಹಜ. ಆದರೆ ನಿಮ್ಮ ದಿನಚರಿಯನ್ನು ಮೊದಲಿನಂತೆ ಅನುಸರಿಸಲು ಪ್ರಯತ್ನಿಸಿ. ಮಗು ಅಳುತ್ತಿದ್ದರೆ ಶಾಂತಗೊಳಿಸಲು ಸಾಧ್ಯವಾಗದಿದ್ದರೆ, ಅದು ನಿಮ್ಮ ವೈಫಲ್ಯವೆಂದು ಭಾವಿಸಬೆಡಿ. ನಿಧಾನವಾಗಿ ಮಗುವನ್ನು ನಿಭಾಯಿಸುವ ಸಮಯಾಕಾಶ ಸ್ವತಃ ಕೊಟ್ಟುಕೊಳ್ಳಿ.
ಮಗು ನೋಡಿಕೊಳ್ಳುವವರಿದ್ದರೆ ಅವರ ಜೊತೆ ಜವಾಬ್ದಾರಿ ಹಂಚಿಕೊಳ್ಳಿ
ಮನೆಯಲ್ಲಿ ಬೆರೆ ಯಾರೋ ಮಗುವನ್ನು ನೋಡಿಕೊಳ್ಳುತಿದ್ದರೆ. ಕೆಲವು ಹೊಸ ತಾಯಿಯರು ತಮ್ಮ ಮಗು ತಮಗಿಂತ ಹೆಚ್ಚು ಅವರನ್ನು ಹಚ್ಚಿಕೊಂಡರೆ ಎಂಬ ಚಿಂತೆಗಿಡಾಗುತ್ತಾರೆ. ಆದರೆ, ಮಗುವಿಗೆ ಯಾವತ್ತೂ ತಾಯಿಯೇ ಮೊದಲಾಗಿರುತ್ತಾಳೆ. ಮಗುವನ್ನು ಆಡಿಸಲು ಮನೆ ಮಂದಿಗೆಲ್ಲ ಅವಕಾಶ ಕೊಡಿ.
ಬಾಣಂತನ
ಹಿರಿಯರಿಂದ ಚೆನ್ನಾಗಿ ಬಾಣಂತನ ಮಾಡಿಸಿಕೊಳ್ಳಿ. ವಿಶೇಷವಾಗಿ ಮಸಾಜ್, ಸ್ನಾನ ನಿಮ್ಮ ಒತ್ತಡ ಕಡಿಮೆ ಮಾಡುತ್ತವೆ. ಬಾಣಂತನ ಮುಗಿದ ನಂತರ ಯಾರೂ ನಿಮಗೆ ಮಸಾಜ್ ಮಾಡುವುದಾಗಲೀ, ಸ್ನಾನ ಮಾಡಿಸಲಾಗಲೀ ಬರುವುದಿಲ್ಲ. ಹಾಗಾಗಿ, ಯಾವಾಗ ಎಲ್ಲ ಕಾಳಜಿ ವಹಿಸುತ್ತಾರೋ, ಅದನ್ನು ಪೂರ್ಣ ಮನಸ್ಸಿನಿಂದ ಆನಂದಿಸಿ.
ಉದ್ವೇಗವು ನಿಮ್ಮನ್ನು ಆವರಿಸಲು ಬಿಡಬೇಡಿ
ತನ್ನ ಮಗುವಿನೊಂದಿಗೆ ಸಮಯ ಕಳೆಯುವಾಗ ಸಂತೋಷವಾಗಿರುತ್ತಾಳೆ. ಆದರೆ ಕೆಲವು ವಿಷಯಗಳ ಬಗ್ಗೆ ಯೋಚಿಸುವಾಗ ಅವಳು ಒತ್ತಡಕ್ಕೊಳಗಾಗುತ್ತಾಳೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ವೈದ್ಯರು ಅಥವಾ ಸ್ನೇಹಿತರೊಂದಿಗೆ ಮಾತನಾಡಿ, ಇದು ನಿಮಗೆ ಒತ್ತಡದಿಂದ ದೂರವಿರಲು ಸಹಾಯ ಮಾಡುತ್ತದೆ. ಈ ಸಮಯದಲ್ಲಿ ಚೆನ್ನಾಗಿ ನಿದ್ದೆ ಮಾಡಲು ಪ್ರಯತ್ನಿಸಿ. ಮಗು ಮಲಗಿದಾಗ ಮಲಗಿಬಿಡಿ.
ಗರ್ಭಾವಸ್ಥೆಯಿಂದ ಹೆರಿಗೆಯವರೆಗೆ ದೇಹದಲ್ಲಿ ಬದಲಾವಣೆಗಳು ಸಹಜ.. ತೂಕ ತುಂಬಾ ಹೆಚ್ಚಾಗುತ್ತದೆ, ಇದರಿಂದಾಗಿ ಸೌಂದರ್ಯವು ಕಡಿಮೆಯಾಗುತ್ತದೆ ಮತ್ತು ಆರೋಗ್ಯವೂ ಹದಗೆಡುತ್ತದೆ. ಅದರ ಬಗ್ಗೆ ಸ್ವಲ್ಪವೂ ಯೋಚಿಸಬೇಡಿ. ಮಗು ಹಾಲು ಕುಡಿದಂತೆಲ್ಲ ಸಾಕಷ್ಟು ತೂಕ ಕಡಿಮೆಯಾಗುತ್ತಾ ಹೋಗುತ್ತದೆ.