ಬೆಂಗಳೂರು: ಪಿಎಸ್ಐ, ಪಿಡಿಒ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಡೆಸುವ ನೇಮಕಾತಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಇಂಜಿನಿಯರ್ ಮತ್ತು ಗ್ರೂಪ್ ಸಿ 64 ಹುದ್ದೆಗಳಿಗೆ ಆಗಸ್ಟ್ 11ರಂದು ನೇಮಕಾತಿ ಪರೀಕ್ಷೆ ನಡೆಯಲಿದೆ.
ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ ಸಹಾಯಕ ಲೆಕ್ಕಿಗ ಸೇರಿದಂತೆ 36 ಹುದ್ದೆಗಳಿಗೆ ಜುಲೈ 12, 13, 14 ರಂದು ಪರೀಕ್ಷೆ ನಡೆಯಲಿದೆ.
ಬಿಎಂಟಿಸಿಯಲ್ಲಿ 2,500 ನಿರ್ವಾಹಕರ ಹುದ್ದೆಗಳಿಗೆ ಸೆಪ್ಟಂಬರ್ 1ರಂದು ಪರೀಕ್ಷೆ ನಡೆಯಲಿದೆ.402 ಪಿಎಸ್ಐ ಹುದ್ದೆಗಳಿಗೆ ಸೆಪ್ಟೆಂಬರ್ 22ರಂದು ಪರೀಕ್ಷೆ ನಡೆಯಲಿದೆ.
ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಯ 1 ಸಾವಿರ ಹುದ್ದೆಗಳಿಗೆ ಅಕ್ಟೋಬರ್ 27ರಂದು ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.