ಹುಕ್ಕೇರಿ:
ಕಾನೂನು ಅರಿವು ನೆರವು
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಹಾಗೂ ಎ. ಎಸ್. ಎನ್. ಎಸ್. ಎಸ್. ಮಹಾತ್ಮಾ ಗಾಂಧೀಜಿ ಕಾನೂನು ಮಹಾ ವಿದ್ಯಾಲಯ ರಾಷ್ಟೀಯ ಸೇವಾ ಘಟಕದವರ ಸಂಯುಕ್ತ ಆಶ್ರಯದಲ್ಲಿ ರಾಷ್ಟೀಯ ಸೇವಾ ವಾರ್ಷಿಕ ವಿಶೇಷ ಶಿಬಿರವನ್ನು ಗ್ರಾಮ ಪಂಚಾಯತ್ ಕಮತನೂರದ ಶ್ರೀ ಅಡವಿಸಿದ್ದೇಶ್ವರ ಮಠದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಏಳು ದಿನಗಳ ಕಾಲ ವಿಶೇಷವಾಗಿ ಶಿಬಿರವನ್ನು ಮಾಡಲಾಗಿದೆ ಗ್ರಾಮದ ಜನರಿಗೆ ಪ್ರತಿ ಒಂದು ಕಾನೂನು ಅರಿವನ್ನು ತಿಳಿಸಲಾಗುವುದು ಕಾನೂನು ಅರಿವು ನೆರವು ಕೃಷಿಯ ಬಗ್ಗೆ ಅರಿವು ಸರ್ಕಾರದ ಸೌಲಭ್ಯಗಳು ಆರೋಗ್ಯದ ಬಗ್ಗೆ ಕಾಳಜಿ ಕುರಿತು ಮತ್ತು ಮೌಲ್ಯ ಶಿಕ್ಷಣದ ಮಹತ್ವ ಮತ್ತು ಪರಿಸರ ಸಂರಕ್ಷಣೆ ಯಾವ ರೀತಿ ತಮ್ಮ ಸಂರಕ್ಷಣೆಯನ್ನು ಮಾಡಿಕೊಳ್ಳಬೇಕು ಎಂದು ಶಿಬಿರದ ಮುಖಾಂತರ ತಿಳಿಸಲಾಗುವುದು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ಶ್ರೀ ಸಿದ್ದ ಬಸವ ದೇವರು ಉತ್ತರಾಧಿಕಾರಿ ಶ್ರೀ ಮನ್ಮಮಹಾರಾಜ ನಿರಂಜನ್ ಜಗದ್ಗುರು ಶೂನ್ಯ ಸಂಪಾದನಾ ಹುಣಸಿಕೊಳ್ಳಮಠ, ಶ್ರೀ ಕುನಾಲರಾಜೀವಗೌಡ ಎಸ್. ಪಾಟೀಲ್, ಶ್ರೀಮತಿ ರಾಜೇಶ್ವರಿ.ವಿ. ಗೋಠಿ, ಶ್ರೀ ರುದ್ರ ಗೌಡಾ . ಅ. ಪಾಟೀಲ್, ಶ್ರೀ ಜ್ಯೋತಿಭಾ .ತ. ಮಗದುಮ್ಮ, ಸಂಜೀವ್ . ವಿ. ಯಕನೇ ಉಪಸ್ಥಿತರಿದ್ದರು.
ವರದಿ: ಶಿವಾಜಿ ಎನ್ ಬಾಲೇಶಗೋಳ