Ad imageAd image

ಎಚ್. ಆಂಜನೇಯ ಅವರಿಗೆ ವಿಧಾನ ಪರಿಷತ್ ಗೆ ಆರಿಸಿ ಕಳಿಸಲು ಕಾಂಗ್ರೆಸ್ ವರಿಷ್ಠರಿಗೆ ಮಲ್ಲು ಹಲಗಿ ಒತ್ತಾಯ

Bharath Vaibhav
ಎಚ್. ಆಂಜನೇಯ ಅವರಿಗೆ ವಿಧಾನ ಪರಿಷತ್ ಗೆ ಆರಿಸಿ ಕಳಿಸಲು ಕಾಂಗ್ರೆಸ್ ವರಿಷ್ಠರಿಗೆ ಮಲ್ಲು ಹಲಗಿ ಒತ್ತಾಯ
WhatsApp Group Join Now
Telegram Group Join Now

ಯಾದಗಿರಿ:- ಬರುವ ಜೂನ್ 17 ಕ್ಕೆ ನಿವೃತ್ತಿ ತೆರವು ಆಗಲಿರುವ 11 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಇ ಬಾರಿ ಒಂದು ಸ್ಥಾನವನ್ನು ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಎಚ್ ಆಂಜನೇಯ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕು ಎಂದು ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ (ಎಂ.ಆರ್.ಎಚ್.ಎಸ್) ಜಿಲ್ಲಾ ಕಾರ್ಯದರ್ಶಿ ಹಾಗೂ ಕುರಕುಂದಾ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಮಲ್ಲು ಹಲಗಿ ಕುರಕುಂದಾ ಒತ್ತಾಯಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಲ್ಲಿ ಅವರ ಅಭಿಮಾನಿಗಳಿದ್ದು ಸರ್ವ ಜನಾಂಗದ ಸರ್ವೋತ್ತಮ ನಾಯಕ ಬಡವರ ಬೆಳಕಾದ ಎಚ್ ಆಂಜನೇಯ ಅವರನ್ನು ನಂಬಿಕೊಂಡಿರುವ ಕೋಟಿಗಟ್ಟಿಲೆ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತ ಬಂದಿದ್ದಾರೆ.

ಕಳೆದ 2023 ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಎಚ್ ಆಂಜನೇಯ ಅವರ ಕಠಿಣ ಪರಿಶ್ರಮ ಕಾರಣವಾಗಿದೆ. ಕಳೆದು ವಿಧಾನ ಸಭಾ ಚುನಾವಣೆಯಲ್ಲಿ ಕಾಣದ ಕೈಗಳ ಕೆಲ ಕುತಂತ್ರದಿಂದ ಅವರಿಗೆ ಕಡಿಮೆ ಅಂತರದಲ್ಲಿ ಸೋಲಾಯಿತು. ಇ ಸೋಲು ಇಡಿ ರಾಜ್ಯದ ಕೋಟಿಗಟ್ಟಿಲೆ ಇರುವ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ತುಂಬಾ ನೋವಾಗಿದೆ

ಆದರೂ ಸೋಲಿಗೆ ಅಂಜದೆ ಹುಮ್ಮಸ್ಸಿನಿಂದ ಪ್ರತಿಯೊಂದು ಕಾಂಗ್ರೆಸ್ ಪಕ್ಷದ ಸಭೆ ಸಮಾರಂಭಗಳ ಚಟುವಟಿಕೆಗಳಲ್ಲಿ ಭಾಗಿಯಾಗುತ್ತ ನಿರಂತರ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ ಅವರು 2024 ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ತುಂಬಾ ತಿರುಗಾಡಿ ಪ್ರಚಾರ ಮಾಡಿ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಹಗಲಿರುಳು ಶ್ರಮಿಸಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಬರಬೇಕು ಎಂದು ದುಡಿದಿದ್ದ ಅವರು ಅಧಿಕಾರ ಇದ್ದರೂ ಇಲ್ಲದಿದ್ದರೂ ಸದಾಕಾಲವೂ ಎಲ್ಲಾ ಜಾತಿ ಜನಾಂಗದ ಸರ್ವ ಜನಾಂಗದವರ ಮತ್ತು ರೈತರ ಬಡವರ ಕಷ್ಟ ಆಲಿಸಿ, ಪರಿಹಾರ ನೀಡಿ ಬಡವರ ಏಳಿಗೆಗಾಗಿ ಶ್ರಮಿಸಿ ಸಹಾಯ ಮಾಡುವ ನಾಯಕತ್ವ ಗುಣ ಹೊಂದಿದ್ದಾರೆ.

ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಸೇವಕರಾಗಿ ಮತ್ತು ಇವರು ನಗರ ಸಭಾ ಸದಸ್ಯರಾಗಿ, ಕಾಂಗ್ರೆಸ್ ಪಕ್ಷದ ವಿವಿಧ ಜಿಲ್ಲಾ ಘಟಕಗಳ ಪದಾಧಿಕಾರಿಗಳಾಗಿ ಮತ್ತು ಕೆಪಿಸಿಸಿ ಉಪಾಧ್ಯಕ್ಷರಾಗಿ, ಪ್ರಾಮಾಣಿಕವಾಗಿ ನಿಷ್ಠೆಯಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವರಾದ ಸಂದರ್ಭದಲ್ಲಿ ಅವರು ಯಾವುದೇ ಜಾತಿ ಭೇದ ಮಾಡದೆ ಸರ್ವ ಜನಾಂಗದವರಿಗೆ, ವಿದ್ಯಾರ್ಥಿಗಳಿಗೆ, ರೈತರಿಗೆ ಸಹಾಯ ಸಹಕಾರ ನೀಡಿ ಮತ್ತು ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನಪ್ರಿಯ ನಾಯಕರಾಗಿ ಬೆಳೆದ ಇವರು ಕಾಂಗ್ರೆಸ್ ಪಕ್ಷವೇ ನಮ್ಮ ಉಸಿರು, ನಮ್ಮ ತಾಯಿ ಎಂದು ನಂಬಿರುವ ಮಾಜಿ ಸಚಿವರಾದ ಎಚ್ ಆಂಜನೇಯ ಅವರ ಸೇವೆಯನ್ನು ಗುರುತಿಸಿ ಎಮ್ಮೆಲ್ಸಿ ಸ್ತಾನ ನೀಡಬೇಕು ಮತ್ತು ಹಿಂದೆ ಕೆಪಿಸಿಸಿ ಘಟಕದಲ್ಲಿ ಪಕ್ಷ ಸಂಘಟನೆ ಮಾಡಿದವರಿಗೆ ಕೆಪಿಸಿಸಿ ಕೋಟಾದಡಿ ವಿಧಾನ ಪರಿಷತ್ ಸ್ಥಾನವನ್ನು ಪರಿಗಣಿಸಬೇಕು ಎಂದು ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ ಅವರು ತಿಳಿಸಿದ್ದರು.

ಅಲ್ಲದೇ ದಲಿತ ಆದಿವಾಸಿ ಹಿಂದುಳಿದವರ ಬಗ್ಗೆ ರಾಹುಲಗಾಂದಿ ಅವರು ಹೆಚ್ಚು ಕಳಕಳಿ ಹೊಂದಿದ್ದು ಈ ನಿಟ್ಟಿನಲ್ಲಿ ಇ ಬಾರಿ ವಿಧಾನ ಪರಿಷತ್ ಸ್ಥಾನವನ್ನು ಮಾಜಿ ಸಚಿವರಾದ ಎಚ್ ಆಂಜನೇಯ ಅವರಿಗೆ ನೀಡಿದರೆ ಮುಂದೆ ಬರುವ ತಾಲ್ಲೂಕು ಪಂಚಾಯತ ಮತ್ತು ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ತುಂಬಾ ಸಹಾಯವಾಗುತ್ತದೆ. ಇ ಸಂಬಂಧ ಕಾಂಗ್ರೆಸ್ ಪಕ್ಷದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಅವರು, ಡಿಸಿಎಂ ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಸಹ ಆಂಜಿನೇಯ ಅವರಿಗೆ ಪರಿಷತ್ ಗೆ ಪ್ರವೇಶ ಮಾಡಲು ಟಿಕೇಟ್ ನೀಡಲು ಮುಂದಾಗಬೇಕೆಂದು ಮುಖಂಡರಾದ ಎಂಆರ್‌ಎಚ್‌ಎಸ್ ಮಾಜಿ ಜಿಲ್ಲಾದ್ಯಕ್ಷ ಹಣಮಂತ ಲಿಂಗೇರಿ, ಎನ್.,ಎಸ್.ಯು.ಐ ರಾಜ್ಯ ಪ್ರ. ಕಾರ್ಯದರ್ಶಿ ಸಂಜುವಕುಮಾರ ಕಾವಲಿ, ತಾಲ್ಲೂಕು ಅಧ್ಯಕ್ಷ ಸಿದ್ದು ಕಂದಳ್ಳಿ, ಮಾದಿಗ ಮೀಸಲಾತಿ ಹೋರಾಟ ಸಮಿತಿ(ಎಂಆರ್‌ಎಚ್‌ಎಸ್) ವಡಗೇರಿ ತಾಲ್ಲೂಕು ಅಧ್ಯಕ್ಷ ಹಣಮಂತ ಮಾಲಳ್ಳಿ, ಮರಲಿಂಗ ಹೊಂಟೂರ್, ಸುರೇಶ ಹಾಲಗೇರಿ, ಬೆಂಜಮಿನ್ ಶಿವನೂರ, ಕುಮಾರ್ ತುಮಕೂರ, ಹಣಮಂತ ಒಡಕರ್ ಇನ್ನಿತರರು ಒತ್ತಾಯಿಸಿದ್ದಾರೆ.

ವರದಿ:-ಪ್ರತೀಕ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!