Ad imageAd image

ಈದ್ಗಾ ಮೈದಾನ ಉಳಿಸಿಕೊಳ್ಳಲು ಪಾರಿಶ್ವಾಡ ಭಾಗದ ಮುಸ್ಲಿಂ ಸಮುದಾಯದಿಂದ ಒಗ್ಗಟ್ಟಿನ ಹೋರಾಟ

Bharath Vaibhav
ಈದ್ಗಾ ಮೈದಾನ ಉಳಿಸಿಕೊಳ್ಳಲು ಪಾರಿಶ್ವಾಡ ಭಾಗದ ಮುಸ್ಲಿಂ ಸಮುದಾಯದಿಂದ ಒಗ್ಗಟ್ಟಿನ ಹೋರಾಟ
WhatsApp Group Join Now
Telegram Group Join Now

ಬೆಳಗಾವಿ:- ಖಾನಾಪುರ ತಾಲ್ಲೂಕಿನ ಗಡಿ ಗ್ರಾಮ ಪಾರಿಶ್ವಾಡ ಗ್ರಾಮದ ಈದ್ಗಾ ಮೈದಾನವನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದರಿಂದ ಸದರಿ ಅದನ್ನು ಖಂಡಿಸಿ ಅದನ್ನು ಉಳಿಸಿ ಕೊಳ್ಳಲು ಪಾರಿಶ್ವಾಡ ಭಾಗದ ಸಮಸ್ತ ಮುಸ್ಲಿಂ ಸಮುದಾಯ ಇಂದು ಖಾನಾಪುರ ರಸ್ತೆಯಲ್ಲಿರುವ ಸರ್ವೇ 21 ರಲ್ಲಿರುವ ನಾಲ್ಕು ವರೆ ಎಕರೆ ಈದ್ಗಾ ಮೈದಾನದಲ್ಲಿ ಇಂದು ಮುಸ್ಲಿಂ ಸಮುದಾಯದ ಧಾರ್ಮಿಕ ಸ್ಥಾನವನ್ನು ಖಾಸಗಿ ವ್ಯಕ್ತಿಗಳು ತಮ್ಮ ಪರಬಾರೆಗೆ ದಾಖಲೆಗಳನ್ನು ಸೃಷ್ಟಿಸಿಕೊಂಡಿರುವುದನ್ನು ಖಂಡಿಸಿ ಇಂದು ಸಮಸ್ತ ಮುಸ್ಲಿಂ ಸಮುದಾಯದ ಮುಖಂಡರು ಬೃಹತ್ ಪ್ರತಿಭಟನೆ ಹಮ್ಮಿಕೊಂಡು,ಸ್ಥಳಕ್ಕೆ ಆಗಮಿಸಿದ ಖಾನಾಪುರ ತಹಶೀಲ್ದಾರ್ ಅಧಿಕಾರಿಗಳಿಗೆ ಈದ್ಗಾ ಮೈದಾನವನ್ನು ಉಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಗೌಸ್ ಸನದಿ, ಅನ್ವರ್ ಸನದಿ, ಬಾಬಲಾಲ್ ಬೆಪಾರಿ, ಬಶೀರ್ ನಂದಗುಡಿ,ಮುನ್ನಾ ಗುರೇ ಖಾನ್, ಮನುಸೂರ್ ಅತ್ತಾರ, ಬುದ್ದೆ ಸಾಬ್ ಬೇಪಾರಿ, ಯಾಸಿನ್ ತುರುಮುರಿ ಸೇರಿದಂತೆ ಹಲವಾರು ಜನ ಉಪಸ್ಥಿತರಿದ್ದರು.

 ವರದಿ:-ಬಸವರಾಜು

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!