ಹಾವೇರಿ:- ಅಕ್ರಮ ಮರಳು ಸಾಗಾಣಿಕೆಯ ತಪಾಸಣೆಗೆ ಮುಂದಾಗಿದ್ದ ಪೊಲೀಸರ ಮೇಲೆ ಹಲ್ಲೆ,ದಿನಾಂಕ 16/3/2021ರಂದು ಮಾನ್ಯೆ ಐಜಿಪಿ ವಲಯ ದಾವಣಗೆರೀರವರ ಕಾರ್ಯಾಲಯದಿಂದ ಹಾವೇರಿ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ ತಡೆಗಟ್ಟುವ ಕುರಿತು ನೇಮಿಸಿದ್ದ ಪೊಲೀಸ್ ಸಿಬ್ಬಂದಿಗಳಾದ ಜೇ ಎಚ್ ರಮೇಶ್ ಮತ್ತು ಸೈಯದ್ ಗಪರ್ ಮತ್ತು ಅಜಗರ್ ಅಲಿ ರವರು ಕರ್ತವ್ಯದ ಮೇಲೆ ಇರುವಾಗ KA 17/ಜೇ 1116 ಸರ್ಕಾರಿ ವಾಹನದಲ್ಲಿ ಅಕ್ರಮ ಮರಳಿನ ಮಾಹಿತಿ ಸಂಗ್ರಹಿಸುವ ಕುರಿತು ಹುಬ್ಬಳ್ಳಿ ರಸ್ತೆಯಲ್ಲಿ ಹೊರಟಿರುವಾಗ ಮೋರ್ ಅಂಗಡಿ ಹತ್ತಿರ ಆರೋಪಿತರಾದ ಎ-1 – ಸುಮನ್ ಪ್ರಭಾಕರ್ ಮತ್ತು A-2 – ಗಣೇಶ್ ರಾಜು ತೆವರಿ ಇವರು ರಸ್ತೆ ಅಡ್ಡಲಾಗಿ ನಿಂತು ಸರ್ಕಾರಿ ವಾಹನಕ್ಕೆ ಕೈಯಿಂದ ಹೋಡಿದಿರುತ್ತಾರೆ
ಆಗ ಪೊಲೀಸ ಸಿಬ್ಬಂದಿಗಳ ವಾಹನ ನಿಲ್ಲಿಸಿ ವಾಹನದಲ್ಲಿದ್ದ ಪೊಲೀಸ ಸಿಬ್ಬಂದಿಗಳೊಂದಿಗೆ ವಾಗ್ವಾದ ಮಾಡಲು ಶುರು ಮಾಡಿದ್ದು ಪೊಲೀಸ ಸಿಬ್ಬಂದಿಗಳು ನಾವು ಕರ್ತವ್ಯದ ಮೇಲಿದ್ದೇವೆ ಅಂದರು ಕೂಡ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ
ಸದರಿ ವಿಷಯವಾಗಿ ಪೊಲೀಸ ಸಿಬ್ಬಂದಿಯಾದ ಜೇ ಎಚ್ ರಮೇಶ್ ದಿನಾಂಕ 17/03/2021 ರಂದು ರಾತ್ರಿ 12-45 ಗಂಟೆಗೆ ಪಿಎಸ್ಐ ಪೀ ಜಿ ನಂದಿ ರವರು ಈ ಪ್ರಕರಣವನ್ನು ದಾಖಲು ಮಾಡಿದ್ದಾರೆ .ಕರಣದ ಮುಂದಿನ ತನಿಖೆ ಶ್ರೀ ಪೀ ಆರ್ ಚನ್ನಗಿರಿ ಪೊಲೀಸ ನಿರೀಕ್ಷಕರು ಹಾವೇರಿ ಶಹರ್ ಪೊಲೀಸ್ ಠಾಣೆರವರು ಕೈಗೊಂಡು ಆರೋಪಿತರು A-1 ಸುಮನ್ ಪ್ರಭಾಕರ್ ಮತ್ತು A-2 ಗಣೇಶ್ ರಾಜು ತೇವರಿ ಸಾ, ಹಾವೇರಿ ಇವರಿಗೆ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಮನ್ಯ ಸಿ ಜೇ ಎಮ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಾತ್ರವನ್ನು ಸಲ್ಲಿಸಿದ್ದು ಮಾನ್ಯ ನ್ಯಾಯಾಲಯದ ಸಿಸಿ ನಂ 99/2021 ನೇ ನೀಡಿ ನ್ಯಾಯಾಲಯ ವಿಚಾರಣೆ ನಡೆಸಿದ್ದು, ಸರ್ಕಾರಿ ಪಬ್ಲಿಕ್ ಪ್ರಜ್ಯೂಕ್ಯೂಟರಾದ ಸುಪಿ ಯಾ ಎಸ್ ಇನಾಂದಾರ್ ಇವರು ನ್ಯಾಯಾಲಯದಲ್ಲಿ ಸದರಿ ಪ್ರಕರಣದಲ್ಲಿಯ ತನಿಖಾ ವಿಷಯಗಣ್ಣೊಳಗೊಂಡು ವಾದ ಮಂಡಿಸಿ ಆರೋಪವನ್ನು ಸಾಬೀತು ಪಡಿಸಿದ್ದರಿಂದ
ಮಾನ್ಯ ನ್ಯಾಯಾಲಯವು ಆರೋಪಿತರಿಗೆ 2 ವರ್ಷ ಜೈಲು ಮತ್ತು ತಲಾ 30000 ರುಗಳ ದಂಡ ವಿದಿಸಿಯೆಂದು ಆದೇಶ ಹೊರಡಿಸಿದೆ.
ವರದಿ =ರಮೇಶ್ ತಾಳಿಕೋಟಿ