ಮುತ್ನಾಳ:ಹೌದು ಕೇದಾರ ಪೀಠದ ಶಾಖಾ ಮಠಗಳಾದ ಮುತ್ನಾಳ, ಬೆಟಸೂರ ಮಠಗಳ ಪೀಠಾಧ್ಯಕ್ಷರಾದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ಗರಡಿಯಲ್ಲಿ ಪಳಗಿದ್ದ ಕಿರಿಯ ಶ್ರೀಗಳಾದ ಶ್ರೀ ನೀಲಕಂಠ ಶಿವಾಚಾರ್ಯ ಸ್ವಾಮೀಜಿಯವರು ಅನಾರೋಗ್ಯದಿಂದ ಬೆಳಗಾವಿಯ ವಡಗಾವ್ ನ ದೊಡ್ಡಮನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಲಿಸದೇ ಕೊನೆ ಉಸಿರು ಎಳೆದಿದ್ದು, ನಿನ್ನೆ ಮುತ್ನಾಳ ಗ್ರಾಮದ ಮಠದ ಭೂಮಿಯಲ್ಲಿ ಅಪಾರವಾದ ಭಕ್ತಾದಿಗಳ ಶೋಕ ಸಾಗರದಲ್ಲಿ ಶಿವೈಕ್ಯರಾದರು. ಈ ಹಿಂದೆ ಇವರ ಅಪಾರವಾದ ಆಧ್ಯಾತ್ಮಿಕ ಜ್ಞಾನವನ್ನು ಮೆಚ್ಚಿ ಮಹಾರಾಷ್ಟ್ರ ದ ನಾಂದೇಡ್ ಮಠದ ಶ್ರೀಗಳಾಗಿ ಕಾರ್ಯ ನಿರ್ವಹಿಸಿದ್ದರು. ಕಳೆದ 3 ವರ್ಷಗಳಿಂದ ಮುತ್ನಾಳ ಮಠದಲ್ಲೇ ಇದ್ದು , ಸ್ಥಳೀಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಶಿವ ನಾಮ ಸ್ಮರಣೆಯನ್ನು ತಬಲ ಗಳ ಮೂಲಕ ನುಡಿಸುತ್ತಿದ್ದ ಸಂಗೀತಗಳು ತುಂಬಾ ಹೆಸರುವಾಸಿಯಾಗಿದ್ದರು. ನಿನ್ನೆ ಮುತ್ನಾಳ ಗ್ರಾಮದ ಪ್ರತಿ ಓಣಿಗಳಲ್ಲಿ ಅಪಾರವಾದ ಭಕ್ತಾದಿಗಳ ಸಮ್ಮುಖದಲ್ಲಿ ಇವರ ಪವಿತ್ರ ಮೃತ ದೇಹವನ್ನು ಮೆರವಣಿಗೆ ಮಾಡಿ ಅಂತ್ಯ ಕ್ರಿಯೆಯನ್ನು ವಿಧಿ ವಿಧಾನಗಳ ಮೂಲಕ ಎಲ್ಲಾ ಪೂಜ್ಯ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ದರೆಯಲ್ಲಿ ವಿಲೀನಗೊಂಡರು. ಈ ಸಂದರ್ಭದಲ್ಲಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಸವದತ್ತಿ ಮತ್ತು ಹೂಲಿ ಹಾಗೂ ದೊಡ್ಡವಾಡ, ಹುಲಿಕಟ್ಟಿ, ಅರಳಿಕಟ್ಟಿ, ಜಾಲಿಕೊಪ್ಪ ಸ್ವಾಮೀಜಿಗಳು, ಶಾಸ್ತ್ರೀಗಳು ಉಪಸ್ಥಿತರಿದ್ದರು.
ವರದಿ: ಬಸವರಾಜು.