ಲೋಕಸಭಾ ಚುನಾವಣೆಯ ಎಲ್ಲ ಹಂತಗಳ ಮತದಾನ ಬಳಿಕ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗವಾಗಿವೆ. ಎಲ್ಲ ಸಮೀಕ್ಷೆಗಳು ಶೇ.99 ರಷ್ಟು ಒಂದೇ ರೀತಿಯಾಗಿ ಹೇಳಿವೆ. ಆದರೆ ಕಾಂಗ್ರೆಸ್ ಇದನ್ನು ಒಪ್ಪದೇ ಸಬೂಬು ಹೇಳುತ್ತಿದೆ ಎಂದು ಬಿಜೆಪಿ ಸೀಟುಗಳು ಗೆಲ್ಲುವ ಬಗ್ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸಮೀಕ್ಷೆಗಳಲ್ಲಿ ಕಾಂಗ್ರೆಸ್ಗೆ ಹಿನ್ನಡೆ ಎಂದು ಹೇಳಿದ್ದು, ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ತಿಳಿಸಿವೆ. ಬಹುತೇಕ ಎಲ್ಲ ಸಮೀಕ್ಷೆಗಳೂ ಒಂದೇ ರೀತಿಯಾಗಿ ಹೇಳಿವೆ. ನಮಗೆ ಎಕ್ಸಿಟ್ ಪೋಲ್ ನಲ್ಲಿ ಸ್ಪಷ್ಟ ಬಹುಮತ ಸಿಕ್ಕಿದೆ.
ಬೆಳಗಾವಿಯಲ್ಲಿ ಹೆಚ್ಚು ಅಂತರದಿಂದ ಗೆಲುವು ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜರನ ಆಶೀರ್ವಾದದಿಂದ ನಾನು ಹೆಚ್ಚು ಮತಗಳ ಅಂತರದಿಂದ ಗೆಲುತ್ತೇನೆ.
ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಭಾರಿಗೆ ಪ್ರಧಾನಿ ಆಗಬೇಕು ಎನ್ನುವುದು ದೇಶದ ಜನರ ಆಶಯವಾಗಿತ್ತು. ಬಿಜೆಪಿಯು 375 ಸೀಟುಗಳು ಇಲ್ಲವೇ 400 ಕ್ಕೂ ಹೆಚ್ಚು ಸ್ಥಾನ ಗೆಲ್ಲಬಹುದು. ಕಳೆದ ಬಾರಿ ಎಕ್ಸಿಟ್ ಪೋಟ್ ಕಾಂಗ್ರೆಸ್ ಪರವಾಗಿ ಹೇಳಿತ್ತು. ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಎಂದಿದೆ
ಸಮೀಕ್ಷೆ ಒಪ್ಪದೇ ಕಾಂಗ್ರೆಸ್ ಏನೆನೋ ಹೇಳುತ್ತಿದೆ. ಸಬೂಬು ಕೊಡುತ್ತಿದೆ ಎಂದು ಕಾಂಗ್ರೆಸ್ಗೆ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದರು. ಸಮೀಕ್ಷೆಗಳಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ಎಲ್ಲಿಯೂ ಹೇಳಿಲ್ಲ. ಕಾಂಗ್ರೆಸ್ ನಾಯಕರು ಅದನ್ನು ಸುಳ್ಳ ಹೇಳುತ್ತಿದಾರೆ. ಕಾಂಗ್ರೆಸ್ ನಾಯಕರಿಗೆ ಸೋಲು ಒಪ್ಪಿಕೊಳ್ಳಲು ಆಗುತ್ತಿಲ್ಲ ಎಂದು ಕುಟುಕಿದರು