ಅಥಣಿ:- ತಂಶಿ ಗ್ರಾಮದ ಪ್ರತಿ ವರ್ಷದಂತೆ ದಿನಾಂಕ ಗುರುವಾರ 6/6/2024 ರಿಂದ 46ನೇ ಜಾತ್ರಾ ಮಹೋತ್ಸವ ಪ್ರಾರಂಭವಾಗಿದೆ.
ಈ ಗ್ರಾಮದ ಸುತ್ತುಮುತ್ತಲಿನ ಸುತ್ತಮುತ್ತಲಿನ ಗ್ರಾಮಗಳಾದ ದೇವನೂರ, ಮಲಬಾದ, ಬೆಳ್ಳಿಗೇರ, ಬ್ಯಾಡ್ರಟ್ಟಿ ,ಚಮಕೇರಿ, ಗುಂಡೇವಾಡಿ, ಕಿರಣಗಿ, ಪ್ರಾರ್ಥನ ಹಳ್ಳಿ, ಶಿವನೂರ, ಕಲ್ಲುಶಿ, ಜಂಬಗಿ, ಸoಬರ್ಗಿ, ನಾಗನೂರ, ಪಿ. ಏ. ಖಿಳೆಗಾoವ, ಅಜೂರ, ಅನಂತಪುರ, ಬಾಗಲಕೋಟೆ, ವಿಜಯಪುರ, ಹಾಗೂ ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗಲಿ, ಮಿರಾಜ, ಈ ಎಲ್ಲ ನಗರ ಹಾಗೂ ಗ್ರಾಮದ ಭಕ್ತರು ಈ ಜಾತ್ರೆಗೆ ಆಗಮಿಶಿ ಈ ಜಾತ್ರೆಯನ್ನು ಅತಿ ವಿಜ್ರನ ವಿಜೃಂಭನೆಯಿಂದ ಮಾಡಲಾಗುತ್ತದೆ.
ಇನ್ನು ಈ ಜಾತ್ರೆಯ ಕಾರ್ಯಕ್ರಮಗಳು ಈ ರೀತಿಯಾಗಿ ಜರುಗುತ್ತವೆ ದಿನಾಂಕ 6 ರಂದು ಮುಂಜಾನೆ ರುದ್ರಾಭಿಷೇಕ,ಹೋಮ್, ಎಲ್ಲ ವಿಧಿ ವಿಧಾನಗಳಿಂದ ಜರುಗುವುದು, ಮುಂಜಾನೆ ಐದು ಗಂಟೆಗೆ ಎಲ್ಲ ಭಕ್ತರಿಂದ ಆಗ್ರಾಣಿ, ನಂದಿಗಂಧ, ದೇವಸ್ಥಾನದವರೆಗೆ ದೀಡ್ ನಮಸ್ಕಾರ.9 ಗಂಟೆಗೆ ದುರ್ಗಾ ದೇವಿಯ ಪಾಲಿಕೆ ಅಗ್ರಾಣಿ ನದಿಗೆ ಹೋಗಿ ಪೂಜೆ ಮಾಡಲಾಗುವುದು 11 ಗಂಟೆಗೆ ದಿವ್ಯ ಪಲ್ಲಕ್ಕಿಯನ್ನು ವಿವಿಧ ಓಣಿಗಳಿಗೆ ಹೋದ ನಂತರ ದತ್ತಾತ್ರೇಯ ದೇವಸ್ಥಾನದವರೆಗೆ ಆಗಮಿಸಿ ಗ್ರಾಮದ ಗೌಡರಿಂದ ದಿವ್ಯ ಉಡಿ ತುಂಬುವ ಕಾರ್ಯಕ್ರಮ ನಡೆಯುವುದು.
ಮಧ್ಯಾಹ್ನ 1 ಗಂಟೆಗೆ ಏರುಗಾರಿಕೆ ಹಾಗೂ ದೇವಿಯ ಹರಕೆ ನುಡಿಗಳು ರಾತ್ರಿ ಹನ್ನೊಂದು ಗಂಟೆಗೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗ್ಲೀಶ್ವರ್ ಗ್ರಾಮದ ಸಿದ್ದಮ್ಮ ಮನುಗುಳಿ, ಸಂಗೀತಾ ಬಾಗಲಕೋಟಿ, ಶಿವವ್ವಾ ಸುತ್ತಾಲ ಗುಡ್ರಾ, ಹಾಗೂ ಸಂಗಡಿಗಳಿಂದ ಚೌಡಕಿ ಪದಗಳನ್ನು ಅಚಿತ್ರ ವಿಚಿತ್ರ ನೃತ್ಯ ಮತ್ತು ಕುಣಿತದಿಂದ ಜರಗುವುದು.ಈ ಜಾತ್ರಾ ಮಹೋತ್ಸವದಲ್ಲಿ ಜಾತ್ರಾ ಕಮಿಟಿಯ ಮಂಡಳಿ ಹಾಗೂ ಸರ್ವ ಸಮಸ್ತ ಭಕ್ತರಿಂದ ಈ ಜಾತ್ರೆ ಜರುಗುವುದು.
ವರದಿ:- ರಾಜು ಮುಂಡೆ