ಹಾವೇರಿ:- ಬಂಕಾಪುರ: ಪಿಎಸ್ಐ ಶರಣಪ್ಪ H ರವರು ಬಂಕಾಪುರ ಪೋಲಿಸ್ ಠಾಣೆಯ ಆವರಣದಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿ ಪರಿಸರ ಕಾಳಜಿಯು ಕೇವಲ ಪರಿಸರ ದಿನದಂದು ಮಾತ್ರ ಸೀಮಿತವಾಗಬಾರದು
ನಾವು ಎಷ್ಟು ಸಾಧ್ಯವೋ ಅಷ್ಟು ಗಿಡಮರಗಳನ್ನು ಬೆಳೆಸುವ ರಕ್ಷಿಸುವ ಕಾರ್ಯವಾಗ ಬೇಕು ಗಿಡ ಮರಗಳಿಂದ ಶುದ್ಧ ಗಾಳಿ ಮತ್ತು ನೀರು ಪಡೆಯಲು ಸಾದ್ಯ ನಮ್ಮ ಸುತ್ತ ಮುತ್ತಲಿನ ವಾತಾವರಣ ತಂಪು -ತಂಪಾಗಿರಲು ಹಸಿರಿನ ವಾತಾವರಣ ತುಂಬಾ ಅವಶ್ಯಕ ಪರಿಸರ ಸಂರಕ್ಷಣೆ ಕೆಲಸ ಕೇವಲ ಅರಣ್ಯ ಸಿಬ್ಬಂದಿಗೆ ಮಾತ್ರ ಸೀಮಿತ ಎಂಬ ಭ್ರಮೆಯಿಂದ ಹೊರ ಬರಬೇಕು
ಗಿಡಮರ ಉಳಿಸಿ ಮುಂದಿನ ಪೀಳಿಗೆಗೆ ಬಿಟ್ಟು ಹೋಗುವ ಜವಾಬ್ದಾರಿ ಎಲ್ಲ ಜನಸಾಮಾನ್ಯರ ಕರ್ತವ್ಯವಾಗಿದೆ ವಾಹನ ನಿಲ್ಲಿಸಲು ನೆರಳಿಗಾಗಿ ಗಿಡಮರ ಹುಡುಕುವ ನಾವು ಪರಿಸರದ ಅಗತ್ಯ ಎಷ್ಟು ಇದೆ ಎಂಬುದನ್ನು ಬಲ್ಲವರಾಗಿದ್ದರೂ ಅಭಿವೃದ್ಧಿ ನೆಪದಲ್ಲಿ ಅರಣ್ಯ ನಾಶಕ್ಕೆ ಕೈ ಜೋಡಿಸುತ್ತಿರುವುದು ವಿಪರ್ಯಾಸ ಸಂಗತಿಯಾಗಿದೆ ಪರಿಸರ ಇದ್ದರೆ ಮಾತ್ರ ನಮ್ಮ ನಿಮ್ಮೆಲ್ಲರ ಉಳಿಗಾಲ ಇಲ್ಲವಾದರೆ ಬಿಸಿಲಿನ ತಾಪಕ್ಕೆ ಸುಟ್ಟು ಸುಣ್ಣವಾಗಬೇಕಾದಿತು
ಹನಿ ಹನಿ ಕೂಡಿದರೆ ಹಳ್ಳ ಸಸಿ ಸಸಿ ಕೂಡಿದರೆ ಹಸಿರು ನಾವೆಲ್ಲರೂ ಪರಿಸರದ ಉಳಿವಿಗಾಗಿ ನಮ್ಮಿಂದ ಅಳಿಲು ಸೇವೆ ಮಾಡೋಣ ಎಂದು ಹೇಳಿದರು .ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು ಎಲ್ಲರೂ ಸಸಿಗಳಿಗೆ ಮಣ್ಣು ಎಳೆದು ನೀರು ಹಾಕಿ ಪರಿಸರ ಘೋಷಣೆ ಕೂಗಿದರು
ವರದಿ:- ರಮೇಶ ತಾಳಿಕೋಟಿ