ಬೆಂಗಳೂರು: ಕರ್ನಾಟಕದಿಂದ ಉತ್ತರಾಖಂಡದ ಡೆಹ್ರಾಡೂನ್ ಗೆ ಚಾರಣಕ್ಕೆ ತೆರಳಿದ್ದಂತ 9 ಕನ್ನಡಿಗರು ಹವಾಮಾನ ವೈಪರಿತ್ಯದಿಂದ ದುರ್ಮರಣಕ್ಕೆ ಒಳಗಾಗಿದ್ದಾರೆ ಅಂತ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ನಾನು ಈಗ ಡೆಹ್ರಾಡೂನ್ ನ ರಾಜ್ಯ ಅತಿಥಿ ಗೃಹದಲ್ಲಿರುವ 8 ಜನರ ಗುಂಪನ್ನು ಭೇಟಿಯಾಗಿ ಸಂವಾದ ನಡೆಸಿದ್ದೇನೆ.
ಅವರೆಲ್ಲರೂ ಸಾಮಾನ್ಯ ಆರೋಗ್ಯದಲ್ಲಿದ್ದಾರೆ. ಹವಾಮಾನಕ್ಕೆ ಒಳಪಟ್ಟು ಇನ್ನೂ ಐದು ಜನರು ಡೆಹ್ರಾಡೂನ್ ತಲುಪಲಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ವಿವಿಧ ಅಧಿಕಾರಿಗಳೊಂದಿಗೆ ನಾನು ಚರ್ಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಹವಾಮಾನ ವೈಪರಿತ್ಯದ ಕಾರಣಕ್ಕಾಗಿ ಕರ್ನಾಟಕದ 9 ಮಂದಿ ಸಾವನ್ನಪ್ಪಿದ್ದಾರೆ. ಎಲ್ಲಾ 9 ಶವಗಳನ್ನು (ಪ್ರಸ್ತುತ ಉತ್ತರಕಾಶಿಯಲ್ಲಿ 5 ಮತ್ತು ಇನ್ನೂ ಚಾರಣ ಮಾರ್ಗದಲ್ಲಿ 4) ಡೆಹ್ರಾಡೂನ್ಗೆ ಸಾಗಿಸಲು ನಾವು ಸ್ಥಳೀಯ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಸಾಧ್ಯವಾದಷ್ಟು ಬೇಗ ಶವಗಳನ್ನು ಬೆಂಗಳೂರಿಗೆ ಸಾಗಿಸಲು ನಾವು ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.