ಬೆಂಗಳೂರುಪೀಣ್ಯ ದಾಸರಹಳ್ಳಿ: -ಪರಿಸರದ ಮಹತ್ವವನ್ನು ಕುರಿತು ಅಧ್ಯಯನದಿಂದ ಮತ್ತು ಸಹಜ ಬಾಳ್ವೆಯಿಂದ ಪರಿಸರ ಸಂರಕ್ಷಣೆ ಮಾಡುತ್ತಾ ಜೀವ ಸಂತತಿಯನ್ನು ಉಳಿಸಿ,ಬೆಳೆಸಲು ಸಾದ್ಯವಾಗುತ್ತದೆ ಎಂದು ಹೆಗ್ಗನಹಳ್ಳಿ ನಿಸರ್ಗ ಶಿಕ್ಷಣ ಸಂಸ್ಥೆಯ ಫೌಂಡರ್ ಕಾರ್ಯದರ್ಶಿ ,ಮಾಜಿ ಪಾಲಿಕೆ ಸದಸ್ಯ ಹಾಗೂ ತೋಟಗಾರಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್ ಎನ್ ಗಂಗಾಧರ್ ತಿಳಿಸಿದರು.
ಅವರು ಹೆಗ್ಗನಹಳ್ಳಿ ನಿಸರ್ಗ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ಜಾಥಾ ಮತ್ತು ಗಿಡ ನೆಟ್ಟು ನೀರು ನುಗ್ಗಿಸುವ ಕಾರ್ಯ ಕ್ರಮ ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕ ಶಿಕ್ಷಕಿಯರ ನೇತೃತ್ವದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು ಪರಿಸರದಲ್ಲಿರುವ ನೆಲ, ಜಲ, ಗಾಳಿ, ಆಹಾರ,ಪಕ್ಷಿ, ಪ್ರಾಣಿ ಪ್ರಬೇಧಗಳಿಗೆ ತನ್ನದೇ ಆದ ಮಹತ್ವವಿದೆ ಮತ್ತು ಪರಿಸರ ಸಂಬಂಧವಿದೆ ಪರಿಸರ ಶುದ್ದವಾಗಿದ್ದಾಗ, ಆಹಾರ,ನೀರು, ಗಾಳಿ, ಶುದ್ದವಾಗಿ ದೊರೆಯುತ್ತದೆ. ಇದು ಜೀವಿಗಳ ಆರೋಗ್ಯಕರ ಬದುಕಿಗೆ ನೆರವಾಗುತ್ತದೆ.
ಪರಿಸರ ಮಲಿನಗೊಂಡಾಗ ಮನುಷ್ಯ ಸೇವಿಸುವ ಗಾಳಿ ನೀರು ಆಹಾರ ಕಲುಷಿತಗೊಂಡು ಅನಾರೋಗ್ಯ ಏರ್ಪಡುತ್ತದೆ ನಾಗರೀಕತೆಗೆ ಜನ್ಮ ಕೊಟ್ಟ ನದಿ ಮೂಲ ಇಂದು ನಾಗರೀಕರಿಂದಲೇ ಮಲಿನಗೊಂಡು ಜೀವ ಪ್ರಬೇಧಗಳ ಅಳಿವಿಗೆ ಕಾರಣವಾಗುತ್ತಿವೆ ಮನುಷ್ಯ ತನ್ನ ಒಳಿತಿಗಾಗಿ ಪ್ರಕೃತಿಕ ಸಂಪನ್ಮೂಲಗಳನ್ನು ದೋಚುತ್ತಿದ್ದಾನೆ ಎಂದು ವಿದ್ಯಾರ್ಥಿಗಳಿಗೆ ಪರಿಸರ ಬಗ್ಗೆ ಜ್ಞಾನ ನೀಡಿ ಎಚ್ ಎನ್ ಗಂಗಾಧರ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಿಸರ್ಗ ಶಾಲಾ ಮುಖ್ಯೋಪಾಧ್ಯಾಯನಿ ಬಿ.ಎಸ್ ಪುಷ್ಪಲತಾ, ಶಾರೀರಿಕ ಶಿಕ್ಷಕ ಚಂದ್ರಶೇಖರ್,ಭರತ್, ಮಾಜಿ ಪಾಲಿಕೆ ಸದಸ್ಯ ಎಚ್ ಎನ್ ಗಂಗಾಧರ್ ಅವರ ಸುಪುತ್ರ ಸ್ವರೂಪ ಗಂಗಾಧರ್, ಯೋಗೇಶ್, ಗೋಪಾಲ್, ವೆಂಕಟೇಶ್, ಶ್ರೀನಿವಾಸ್ ಸೇರಿದಂತೆ ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳು ಪೋಷಕರು ಭಾಗವಹಿಸಿದ್ದರು.
ವರದಿ:- ಅಯ್ಯಣ್ಣ ಮಾಸ್ಟರ್