ಬೆಳಗಾವಿ: ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ನಡೆದ ಪ್ರೆಸ್ ಮೀಟ್‌ನಲ್ಲಿ ಜಿಲ್ಲಾ ಸಚಿವ ಸತೀಶ್ ಜಾರಕಿಹೊಳಿ, ಇತ್ತೀಚಿನ ಲೋಕಸಭಾ ಚುನಾವಣಾ ಫಲಿತಾಂಶಗಳ ನಂತರ ಕಾಂಗ್ರೆಸ್ ಪಕ್ಷದ ಸುತ್ತಲಿನ ಹಲವಾರು ವಿವಾದಗಳನ್ನು ಪರಿಹರಿಸಿದರು.
ನಾನು ಯಾರನ್ನೂ ಟಾರ್ಗೆಟ್ ಮಾಡಿಲ್ಲ,ಎಂದು ಅವರು ಸ್ಪಷ್ಟಪಡಿಸಿದರು. ನಾನು ಕೆಲವು ವಿಷಯಗಳನ್ನು ಮಾತ್ರ ಪ್ರಸ್ತಾಪಿಸಿದೆ.
ಪ್ರಮುಖವಾಗಿ ಚರ್ಚೆಯಾದ ವಿಷಯವೆಂದರೆ ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಕಮಿಯಾ ಮತಗಳನ್ನು ಪಡೆದಿರುವುದು. ಪ್ರಿಯಾಂಕಾಗೆ ಟಿಕೆಟ್ ಕೊಡಿ, ನಾನು ಅವರಜೊತೆ ನಿಲ್ಲುತ್ತೇನೆ ಎಂದು ಸವದಿ ಹೇಳಿದರೂ, ನಿರೀಕ್ಷಿತ ಮತಗಳು ಬರಲಿಲ್ಲ ಎಂದು ಅವರು ಹೇಳಿದ್ದಾರೆ.
ಬೆಳಗಾವಿಯ ಅಭ್ಯರ್ಥಿ ಮೃಣಾಲ್ ಹೆಬ್ಬಳ್ಕರ್ ಅವರ ಸೋಲಿನ ಕುರಿತು ಮಾತನಾಡಿದ ಜಾರಕಿಹೊಳಿ, ವೈಯಕ್ತಿಕ ಜವಾಬ್ದಾರಿ ವಿಷಯವನ್ನೂ ಒತ್ತಿಹೇಳಿದರು. ಹೆಬ್ಬಾಳ್ಕರ್ ಅವರ ಸೋಲಿಗೆ ಯಾರೂ ಜವಾಬ್ದಾರರಲ್ಲ. ಅವರು ತಮ್ಮ ಜವಾಬ್ದಾರಿಯನ್ನು ತೆಗೆದುಕೊಂಡು ತಾವು ಕೆಲಸ ಮಾಡಬೇಕು,ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಜಾರಕಿಹೊಳಿ, ಈ ಯೋಜನೆಗಳು ಪಕ್ಷದ ಕೆಟ್ಟ ಪ್ರದರ್ಶನಕ್ಕೆ ಕಾರಣ ಎಂಬ ಆರೋಪಗಳನ್ನು ತಳ್ಳಿಹಾಕಿದರು. ಜನರು ಕಾಂಗ್ರೆಸ್ ಗ್ಯಾರಂಟಿಗಳಿಗೆ ನಂಬಿಕೆ ಇಟ್ಟಿದ್ದರು,ಎಂದು ಅವರು ಹೇಳಿದರು.
ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗುವ ಸಾಧ್ಯತೆ ಬಗ್ಗೆ ಮಾತನಾಡಿದ ಜಾರಕಿಹೊಳಿ, ಮುಖ್ಯಮಂತ್ರಿಯಾಗಲು ಇನ್ನೂ ಸಮಯ ಇದೆ,ಎಂದು ನಗು ಮುಖದಲ್ಲಿ ಹೇಳಿದರು. ಸಮಯವೇ ನಿರ್ಧರಿಸಲಿದೆ ಎಂದು ಹೇಳಿದ್ದಾರೆ.
ವರದಿ ಪ್ರತೀಕ ಚಿಟಗಿ