ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ 293 ಸ್ಥಾನಗಳಿಸಿದ ಬಿಜೆಪಿ ನೇತೃತ್ವ ಎನ್.ಡಿ.ಎ. ಮೈತ್ರಿಕೂಟ ಮೂರನೇ ಬಾರಿಗೆ ಅಧಿಕಾರಕ್ಕೇರಲಿದೆ.
ಮೈತ್ರಿಕೂಟದ ನಾಯಕರಾದ ನರೇಂದ್ರ ಮೋದಿ ಇಂದು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೋದಿ ಪ್ರಮಾಣವಚನ ಸ್ವೀಕರಿಸುವರು.ಇದರೊಂದಿಗೆ ಜವಾಹರಲಾಲ್ ನೆಹರು ನಂತರ ಸತತ ಮೂರನೇ ಬಾರಿಗೆ ಪ್ರಧಾನಿಯಾಗ ಕೀರ್ತಿಗೆ ಮೋದಿ ಭಾಜನರಾಗಲಿದ್ದಾರೆ. ಮೂರು ಬಾರಿ ಸತತವಾಗಿ ಪ್ರಧಾನಿಯಾದ ಏಕೈಕ ಕಾಂಗ್ರೆಸ್ಸೇತರ ನಾಯಕ ಎಂಬ ಕೀರ್ತಿಯನ್ನು ಪಡೆದುಕೊಳ್ಳಲಿದ್ದಾರೆ.
2014 ಮತ್ತು 2019ರಲ್ಲಿ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆದಿತ್ತು. ಮಿತ್ರ ಪಕ್ಷಗಳ ಬಲ ಸೇರಿ ಎನ್.ಡಿ.ಎ. ಮೈತ್ರಿಕೂಟ 300ರ ಗಡಿ ದಾಟಿತ್ತು. ಈ ಬಾರಿ ಬಿಜೆಪಿ 240 ಸ್ಥಾನ ಪಡೆದುಕೊಂಡಿದೆ.