ಚಿಕ್ಕೋಡಿ:-ಇವತ್ತು ಭಾರತೀಯ ಜನತಾ ಪಕ್ಷ ಚಿಕ್ಕೋಡಿ ಜಿಲ್ಲೆಯ ಜಿಲ್ಲಾ ಅಧ್ಯಕ್ಷರಾದ ಶ್ರೀ ಸತೀಶ್ ಅಪ್ಪಾಜಿಗೋಳ ಇವರ ನೇತೃತ್ವದಲ್ಲಿ ಕರ್ನಾಟಕದ ಜನತೆಗೆ ಬೆಲೆ ಏರಿಕೆಯ ಬರೆ ನೀಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ ಮಾಡಲಾಯಿತು
ಲೋಕಸಭೆ ಚುನಾವಣೆಯಲ್ಲಿ ಕನ್ನಡಿಗರು ಬಿಜೆಪಿಗೆ ಮತ ಹಾಕಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಹೊರಟಿದೆ ಈ ಜನವಿರೋಧಿ ಕಾಂಗ್ರೆಸ್ ಸರ್ಕಾರ ಅದಲ್ಲದೆ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿರುವ ಸಿಎಂ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ ಮತ್ತು ಡೀಸೆಲ್ ಬೆಲೆ 3.50 ರೂ. ಹೆಚ್ಚಳ ಮಾಡಿ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿದೆ. ಎಂದು ಬಿಜೆಪಿ ನಿಕಟ ಪೂರ್ವ ಜಿಲ್ಲಾ ಅಧ್ಯಕ್ಷರಾದ ರಾಜೇಶ್ ನೇರಲಿ ಮಹೇಶ್ ಭಾತೆ, ಅಭಯ್ ಮಾನವಿ,ಸಂಜೆಯ ಕವಟಗಿಮಠ, ಮತ್ತಷ್ಟು ಬಿಜೆಪಿ ಕಾರ್ಯಕರ್ತರು ಮಾತನಾಡಿದರು
ಈ ಸಂದರ್ಭದಲ್ಲಿ ಎಸ್ ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ಹುಂದ್ರಿ, ಪ್ರಧಾನ ಕಾರ್ಯದರ್ಶಿಗಳಾದ , ಸದಾನಂದ ಹಳಿoಗಳೇ, ಶಿವಾನಂದ ನವೀನಾಳೆ, ಮಹಿಳಾ ಮೋರ್ಚಾ ಅಧ್ಯಕ್ಷೆ ಶಾಂಭವಿ ಅಶ್ವಥ್ಪುರ, ಶ್ರೀ ಜಿಲ್ಲಾ ವಕ್ತಾರ ಗೋಪಾಲ ಚನಗೌಡರ, ಮಾಧ್ಯಮ ಸಹ ಪ್ರಮುಖರಾದ ಕೈಲಾಸ ಮಾಳಗೆ, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ರಾಜು ಹರಗಣ್ಣವರ ಓ ಬಿ ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷರು , ಎಸ್ ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷರು, ಸಂಜು ಕವಟಗಿಮಠ ಹಾಗೂ ಪವನ ಮಹಾಜನ, ಜಯವಂತ ಭಾಟಲೆ, ರಾವಸಾಹೇಬ ಕಮತೆ, ಸುರೇಶ್ ಬೆಲ್ಲದ, ಹಾಗೂ ಪಕ್ಷದ ಕಾರ್ಯಕರ್ತರ ಹಾಗೂ ಎಲ್ಲ ಬಿಜೆಪಿ ಕಾರ್ಯಕರ್ತರು ಉಪಸ್ಥಿತಿಯಲ್ಲಿ ಈ ಪ್ರತಿಭಟನೆ ಕಾರ್ಯ ನಡೆಯಿತು.
ವರದಿ:- ರಾಜು ಮುಂಡೆ