ಹುಬ್ಬಳ್ಳಿ : -ಚರಂಡಿ, ನೀರಿನ ತೊಟ್ಟಿಗಳನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಈಡಿಸ್, ಅನಾಫಿಲಿಸ್ ಇತ್ಯಾದಿ ಸೊಳ್ಳೆಗಳ ಮೊಟ್ಟೆಗಳು ನಾಶವಾಗುತ್ತವೆ. ಡೆಂಗ್ಯೂ, ಮಲೇರಿಯಾ ಹರಡುವ ಸೊಳ್ಳೆಗಳು ನಾಶವಾಗುತ್ತವೆ ಎಂದು ಹುಬ್ಬಳ್ಳಿ ತಹಶೀಲ್ದಾರರಾದ ಪ್ರಕಾಶ ನಾಶಿ ಹೇಳಿದರು.ಇಂದು ನೂಲ್ವಿಯ ಎಸ್.ಜೆ.ಆರ್. ಸಮೂಹ ಸಂಸ್ಥೆಯ ಸಭಾಭವನದಲ್ಲಿ ಪ್ರೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಡೆಂಗ್ಯೂ ಜಾಗೃತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂಗಾರು ಮಳೆಯಿಂದ ಮನೆಗಳ ಸುತ್ತಮುತ್ತಲು ನೀರು ನಿಲ್ಲುತ್ತಿದೆ. ಮನೆಗಳ ತೊಟ್ಟಿಗಳಲ್ಲಿ ನೀರು ಸಂಗ್ರಹ ಮಾಡುವುದರಿಂದ, ಅವುಗಳಲ್ಲಿ ವಿವಿಧ ರೀತಿಯ ಸೊಳ್ಳೆಗಳು ಮೊಟ್ಟೆ ಇಟ್ಟು ತಮ್ಮ ಸಂತಾನ ಅಭಿವೃದ್ಧಿ ಮಾಡಿಕೊಳ್ಳುತ್ತವೆ. ಅವುಗಳ ಕಡಿತದಿಂದ ಮಲೇರಿಯಾ ಡೆಂಗ್ಯೂ ಅಂತಹ ರೋಗಗಳಿಗೆ ನಾವು ತುತ್ತಾಗುತ್ತಿದ್ದೇವೆ. ಹೀಗಾಗಿ ಡೆಂಗ್ಯೂ, ಮಲೇರಿಯಾ ಕುರಿತು ಮುಂಜಾಗ್ರತಾ ವಹಿಸುವುದು ಬಹಳ ಮುಖ್ಯ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಡೆಂಗ್ಯೂ ನಿಯಂತ್ರಣಾ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.ಇದೇ ಸಮಯದಲ್ಲಿ ನೂಲ್ವಿ ಪಿ.ಎಚ್.ಸಿಯ ಡಾ. ಶ್ರೀಕಾಂತ ಹಾಗೂ ಜಿ.ವಿ ಓಂಕಾರಗೌಡ್ರ ಅವರು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ವಿಡಿಯೋ, ಪಿಪಿಟಿ ಹಾಗೂ ಜಾಗೃತಿ ಗೀತೆ, ಪ್ರಾತ್ಯಿಕ್ಷತೆಯ ಮೂಲಕ ಡೆಂಗ್ಯೂ ಬಗ್ಗೆ ಅರಿವು ಮೂಡಿಸಿದರು.
ಹುಬ್ಬಳ್ಳಿ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಮಚಂದ್ರ ಹೊಸಮನಿ, ತಾಲೂಕ ವೈದ್ಯಾಧಿಕಾರಿ ಡಾ. ಹುಲಗೇಶ, ನೂಲ್ವಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಸಾವಿತ್ರಿ ತೆಂಬದಮನಿ, ಉಪಾಧ್ಯಕ್ಷರಾದ ಅಶೋಕ ಬುಳ್ಳನ್ನವರ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ, ಚಂದ್ರಗೌಡ ಪಾಟೀಲ, ಜಗನ್ನಾಥ ಸಿದ್ದನಗೌಡ್ರ, ಶಿವಾನಂದ ಕೊಡ್ಲಿ, ವಿ.ಕೆ.ವಸ್ತ್ರದ, ಗಂಗಾಧರಗೌಡ ಸಿದ್ದನಗೌಡ್ರ, ರೇಣುಕಾ ಮೂಗನ್ನವರ, ನಿಂಗವ್ವ ಕುಂಬಾರ, ಬಸವರಾಜ ಹರಿಜನ, ಎಸ್.ಜೆ.ಆರ್ ಸಂಸ್ಥೆಯ ಕಾಲೇಜು ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು, ಆರೋಗ್ಯ ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿ, ಗ್ರಾಮದ ಹಿರಿಯರು, ಸಾರ್ವಜನಿಕರು
ಹಾಜರಿದ್ದರು.
ವರದಿ:-ಸುಧೀರ್ ಕುಲಕರ್ಣಿ