Ad imageAd image

ಕಾಂಗ್ರೆಸ್ ಸರಕಾರವು ಬೆಲೆ ಏರಿಕೆ ಮಾಡಿದ್ದು ಸಾಕಾಗಿಲ್ಲ, ಅಡವಿಡಲು ಹೊರಟಿದೆ : ಸಿ.ಟಿ.ರವಿ

Bharath Vaibhav
ಕಾಂಗ್ರೆಸ್ ಸರಕಾರವು ಬೆಲೆ ಏರಿಕೆ ಮಾಡಿದ್ದು ಸಾಕಾಗಿಲ್ಲ, ಅಡವಿಡಲು ಹೊರಟಿದೆ : ಸಿ.ಟಿ.ರವಿ
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದಲ್ಲಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಬೆಲೆ ಏರಿಕೆ ಮಾಡಿದ್ದು ಸಾಕಾಗಿಲ್ಲ ಎಂದು ಇದ್ದೆಲ್ಲ ಆಸ್ತಿಗಳ ಮಾರಾಟ, ಅಡವಿಡಲು ಹೊರಟಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಆಕ್ಷೇಪಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಭವಿಷ್ಯದ ಹಲವು ಯೋಜನೆಗಳಿಗೆ ಬಳಕೆ ಮಾಡಲು ಉದ್ದೇಶಿಸಿದ ಸಂರಕ್ಷಿತ ಸರಕಾರಿ ಭೂಮಿಯನ್ನು ಇವತ್ತಿನ ತಾತ್ಕಾಲಿಕ ಕೊರತೆ ತುಂಬಿಸಿಕೊಳ್ಳಲು ಮಾರಾಟ ಮಾಡುವುದು, ಲೀಸ್ ಕೊಡುವ ಹುನ್ನಾರವನ್ನು ಮಾಡುತ್ತಿದೆ. ಇದರ ಹಿಂದೆ ದೊಡ್ಡ ಸಂಚು ಇದ್ದಂತೆ ಭಾಸವಾಗುತ್ತಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಬಹುತೇಕ ಸಚಿವರು ರಿಯಲ್ ಎಸ್ಟೇಟ್ ಜೊತೆ ಸಂಬಂಧ ಹೊಂದಿರುವುದು ಗೊತ್ತಿರುವ ಸಂಗತಿ. ಅವರಿಗೆ ಈ ಭೂಮಿ ಕೊಡುವ ಸಂಚು ನಡೆದಿರುವ ಸಾಧ್ಯತೆ ಇದೆ ಎಂದ ಅವರು, ಮುಖ್ಯಮಂತ್ರಿಗಳ ಹೇಳಿಕೆಯಂತೆ ಕಾಂಗ್ರೆಸ್ ಸರಕಾರದ ಖಜಾನೆ ಭರ್ತಿ ಇದ್ದ ಮೇಲೆ ಒಂದು ಕಡೆ ಬೆಲೆ ಏರಿಕೆ, ಇನ್ನೊಂದು ಕಡೆ ಸರಕಾರಿ ಭೂಮಿ ಮಾರಾಟ ಮಾಡುವ ಸಂಚು ಯಾಕೆ ಎಂದು ಪ್ರಶ್ನಿಸಿದರು.

ನಿಮ್ಮನ್ನು ನೋಡಿದ ಮೇಲೆ ಸೋಮಪ್ಪ ಸಾಕಿದ ಕೋಳಿ ದಿನವೂ ಚಿನ್ನದ ಮೊಟ್ಟೆ ಇಡುತ್ತಿದ್ದ ಕಥೆ ನೆನಪಾಗುತ್ತದೆ. ದಿನಕ್ಕೊಂದೇ ಮೊಟ್ಟೆ ಇಡುವ ಕೋಳಿಯ ಹೊಟ್ಟೆ ಬಗೆದರೆ ಎಲ್ಲ ಮೊಟ್ಟೆ ಸಿಕ್ಕಿದರೆ, ಒಂದೇ ಸಾರಿ ನಾವು ಸಾಹುಕಾರ ಆಗಬಹುದೆಂಬ ಯೋಚನೆ ಬಂತಂತೆ.

ಹೊಟ್ಟೆ ಬಗೆದು ನೋಡಿದರೆ ಮೊಟ್ಟೆಗಳೂ ಇಲ್ಲ; ಕೋಳಿಯೂ ಇಲ್ಲ. ಈ ಕಾಂಗ್ರೆಸ್ಸಿನ ದುರಾಸೆಯಿಂದ ರಾಜ್ಯವೇ ದಿವಾಳಿ ಆಗುವ ಅಪಾಯದ ಸ್ಥಿತಿಗೆ ಬಂದು ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಎಲ್ಲವನ್ನೂ ಮಾರಿ, ಗುಡಿಸಿ ಗುಂಡಾಂತರ ಮಾಡಿ ಹೋಗಬೇಕೆನ್ನುವ ಮನಸ್ಥಿತಿಯಲ್ಲಿ ಇವತ್ತಿನ ಕಾಂಗ್ರೆಸ್ ಸರಕಾರ ಇದೆ. ಇವರನ್ನು ನೋಡಿದರೆ ಈ ರಾಜ್ಯವನ್ನು ಉಳಿಸುವರೆಂದು ಅನಿಸುವುದಿಲ್ಲ ಎಂದು ತಿಳಿಸಿದರು. ಆಸ್ತಿ ಮಾರಾಟ ಮಾಡಿ ಗುಡಿಸಿ ಗುಂಡಾಂತರ ಮಾಡಲು ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದರು.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!