ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿ ಲಕ್ಷ್ಮೀ ನಿಪ್ಪಾಣಿಕರ್ ನೇತೃತ್ವದಲ್ಲಿ ಕಾರ್ಯಾಚರಣೆ.
ಕಳೆದ 45ವರ್ಷಗಳಿಂದ ನಾಲಾ ಪಕ್ಕದಲ್ಲೇ ತಗಡಿನ ಶೆಡ್ ನಿರ್ಮಿಸಿಕೊಂಡು ಜೀವನ ಮಾಡ್ತಿದ್ದ ಕುಟುಂಬಗಳು.
ಆದರೆ, ನಾಲಾ ಅಪೂರ್ಣ ಹಿನ್ನೆಲೆ ಮಳೆ ಆದಾಗೊಮ್ಮೆ ಮನೆಗಳಿಗೆ ನುಗ್ಗುತ್ತಿದ್ದ ನೀರು.ಕಳೆದೊಂದು ವಾರಗಳ ಹಿಂದಷ್ಟೇ ಮಳೆಯಿಂದ 40ಕ್ಕೂ ಅಧಿಕಮನೆಗಳಿಗೆ ನೀರು ನುಗ್ಗಿ ಅವಾಂತರ. ಹೀಗಾಗಿ ಸ್ಥಳೀಯರಿಂದ ಪಾಲಿಕೆಗೆ ನಾಲಾ ಪೂರ್ಣಗೊಳಿಸುವಂತೆ ತಾಕೀತು. ನಾಲಾ ಒತ್ತುವರಿ ಮಾಡಿಕೊಂಡಿದ್ದ ಮೂರು ಶೆಡ್ ತೆರವು ಮಾಡಿದ ಪಾಲಿಕೆ ಅಧಿಕಾರಿಗಳು.
ನಾಲಾ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಮೂರು ಶೆಡ್ ತೆರವು.
ಈ ವೇಳೆ ಪಾಲಿಕೆ ಅಧಿಕಾರಿಗಳು ಮತ್ತು ಕುಟುಂಬಸ್ಥರ ನಡುವೆ ತೀವ್ರ ವಾಗ್ವಾದ. ತಗಡಿನ ಶೆಡ್ ತೆರವು ಮಾಡ್ತಿದ್ದಂತೆ ಕಣ್ಣಿರು ಹಾಕಿದ ಕುಟುಂಸ್ಥರು. 45ವರ್ಷಗಳಿಂದ ವಾಸಮಾಡುತ್ತಿದ್ದೇವೆ ಏಕಾಏಕಿ ತೆರವು ಮಾಡಿದ್ರೆ ಹೇಗೆ ಎಂದು ಕುಟುಂಬಸ್ಥರ ಕಣ್ಣೀರು. ಏಕಾಏಕಿ ತೆರವು ಮಾಡಿದರೆ ನಾವು ಎಲ್ಲಿ ಹೋಗೊದು ಎಂದು ಪ್ರಶ್ನೆ?
ಪೋಲಿಸ್ ಭದ್ರತೆಯಲ್ಲಿ ಶೆಡ್ ತೆರವು ಮಾಡಿದ ಪಾಲಿಕೆ ಅಧಿಕಾರಿಗಳು.
ಮಹಾಂತೇಶ್ ಹುಲಿಕಟ್ಟಿ