ಹುಬ್ಬಳ್ಳಿ :-ಪ್ರೇರಣಾ ಕಲಾ ಬಳಗ (ರಿ) ಪ್ರಸ್ತುತ ಪಡಿಸುತ್ತಿರುವ ವಿದ್ಯಾರ್ಥಿಗಳ ರಂಗಪ್ರವೇಶ ಮತ್ತು ಕುಚಿಪುಡಿ ನೃತ್ಯಗಳ ಕಾರ್ಯಕ್ರಮವನ್ನು ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆಯವರು ಉದ್ಘಾಟಿಸಿ,ಸತ್ಕಾರ ಸ್ವೀಕರಿಸಿ, ಮಾತನಾಡಿದರು.
ಇದೇವೇಳೆ ಜನಪ್ರಿಯ ಕುಚಿಪುಡಿ ಇದೊಂದು ಶಾಸ್ತ್ರೀಯ ನೃತ್ಯರೂಪ ಕಲೆಯಾಗಿದ್ದು, ಈ ಅಭೂತಪೂರ್ವ ಕಲೆಯನ್ನು ಕಣ್ತುಂಬಿಕೊಳ್ಳುವ ಅವಕಾಶ ನನಗೆ ಸಿಕ್ಕಿದ್ದು ಖುಷಿಯ ಸಂಗತಿ.ಕಲಾ ಬಳಗದ ಸಂಸ್ಥಾಪಕರು ಹಾಗೂ ನನ್ನ ಬಾಲ್ಯದ ಸ್ನೇಹಿತೆಯಾದ ಶ್ರೀಮತಿ ಜ್ಯೋತಿ ಗಲಗಲಿ ಕಳೆದ 38 ವರ್ಷಗಳಿಂದ ನೃತ್ಯ ಸೇವೆಯನ್ನು ಮಾಡುತ್ತಿದ್ದು ಅವರ ಕಾರ್ಯ ಪ್ರೇರಣಾದಾಯಕವಾಗಿದೆ. ಈ ಬಾರಿ ಅಕ್ಷತಾ ನಾಗರೆಡ್ಡಿ, ಭೂಮಿಕಾ ಚೌಗಲಾ,ಸ್ವಾತಿ ಶೆಟ್ಟೆಪ್ಪನ್ನವರ, ಹಾಗೂ ತ್ರಿಶಾ ಶೆಟ್ಟಿ 4 ವಿದ್ಯಾರ್ಥಿಗಳು ಕುಚಿಪುಡಿ ರಂಗ ಪ್ರವೇಶ ಮಾಡಿದ್ದು,ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಸೌ.ಭಾರತಿ ಶಾನಭಾಗ,ಡಾ.ಸುಪ್ರೀತಾ ಮಲ್ಲಿಕಾರ್ಜುನ ಲಗಲಿ,ತಿರುಪತಿಯ ಭಾರತೀಯ ನೃತ್ಯ ಸಂಸ್ಥೆ ಅಧ್ಯಕ್ಷರಾದ ಡಾ.ಆರ್.ಎನ್.ಪಿ. ಶ್ರೀನಾಥಪ್ರಸಾದ, ಗಣ್ಯರು, ಮುಂತಾದವರು ಉಪಸ್ಥಿತರಿದ್ದರು.
ವರದಿ:- ರಾಜು ಮುಂಡೆ