ಚಾಮರಾಜನಗರ:-ಕಣ್ಮುಚ್ಚಿ ಕುಳಿತ ಜನ ಪ್ರತಿನಿಧಿಗಳಿಗೆ ಮಾದರಿಯಾಗಿರುವ ಘಟನೆ ಕರ್ನಾಟಕ ತಮಿಳುನಾಡು ಸಂಪರ್ಕದ ಗಡಿಯಲ್ಲಿ ನಡೆದಿದೆ.ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ರಾಮಾಪುರ ಹೋಬಳಿಯ ನಾಲ್ ರೋಡ್ ಮೂಲಕ ಗರಿಕೆಕಿಂಡಿ ಬಳಿ ರಾಜ್ಯದ ರಸ್ತೆ ಗುಂಡಿಮಯವಾಗಿದ್ದು, ರಸ್ತೆ ದುರಸ್ಥಿಗೆ ಹಾಗೂ ಗುಂಡಿ ಮುಚ್ಚಲು ಮುಂದಾಗದ ಸರ್ಕಾರ, ಜನಪ್ರತಿನಿಧಿಗಳಿಗೆ ಪಾಠ ಕಲಿಸುವ ಹಿನ್ನಲೆಯಲ್ಲಿ ಲಾರಿ ಚಾಲಕರೊಬ್ಬರು ಸ್ವತಹ ಗುಂಡಿಗೆ ಮಣ್ಣು ಮುಚ್ಚಿ ಮಾನವೀಯತೆ ತೋರಿದ್ದಾರೆ.
ಚಾಮರಾಜನಗರ ಮಾರ್ಗವಾಗಿ ದಿಂಬಂ ಮೂಲಕ ತಮಿಳುನಾಡು ಕಡೆಗೆ ರಾತ್ರಿ ಸಂಚಾರ ನಿಷೇಧ ಹೇರಿದ ಮೇಲೆ ನಾಲ್ ರೋಡ್ ಗರಿಕೆಕಿಂಡಿ ಮೂಲಕ ತಮಿಳುನಾಡಿಗೆ ಹೆಚ್ಚಿನ ವಾಹನ ಸಂಚಾರವಾಗುತ್ತಿದ್ದು, ಗುಂಡಿಮಯ ರಸ್ತೆಯಿಂದ ವಾಹನ ಸವಾರರು ಪರದಾಡುವಂತಾಗಿದೆ. ಇದನ್ನು ನಿತ್ಯ ಕಾಣುವ ಲಾರಿ ಚಾಲಕರೊಬ್ಬರು ಗುಂಡಿ ಮುಚ್ಚುತ್ತಿದ್ದಾರೆ. ಇದನ್ಮು ಕಂಡ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಂತರಾಜ್ಯ ಸಂಪರ್ಕದ ರಸ್ತೆ ದುರಸ್ಥಿಗೆ ಮುಂದಾಗಿ ಸುಗಮ ಸಂಚಾರಕ್ಕೆ ಕ್ರಮವಹಿಸಬೇಕಾಗಿದೆ.
ವರದಿ : ಸ್ವಾಮಿ ಬಳೇಪೇಟೆ