ನವದೆಹಲಿ: ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಯೋಜನೆಗಳಲ್ಲಿ 20% ಸುಂಕ ಹೆಚ್ಚಳವನ್ನು ಘೋಷಿಸಿದೆ. ಎರಡೂವರೆ ವರ್ಷಗಳಲ್ಲಿ ಮೊದಲ ಬಾರಿಗೆ ಬೆಲೆ ಹೆಚ್ಚಳವಾಗಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಹರಾಜಿನಲ್ಲಿ ಜಿಯೋ 1800 ಮೆಗಾಹರ್ಟ್ಸ್ ಬ್ಯಾಂಡ್ನಲ್ಲಿ 14.4 ಮೆಗಾಹರ್ಟ್ಸ್ ಸ್ಪೆಕ್ಟ್ರಮ್ ಅನ್ನು 973 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡ ಒಂದು ದಿನದ ನಂತರ ಈ ಪ್ರಕಟಣೆ ಬಂದಿದೆ.
ಒಟ್ಟಾರೆಯಾಗಿ ಜಿಯೋ ಪ್ರೀಪೆಯ್ಡ್ ಗ್ರಾಹಕರಿಗೆ ಬಿಗ್ ಶಾಕ್ ಎನ್ನುವಂತೆ ಟ್ಯಾರಿಫ್ ದರ ಶೇ.20ರಷ್ಟು ಹೆಚ್ಚಳವಾಗಲಿದ್ದು, ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಎನ್ನುವಂತೆ ಆಗಿದೆ.
ಹೊಸ ಪೋಸ್ಟ್ ಪೇಯ್ಡ್ ಯೋಜನೆಗಳು
ಪೋಸ್ಟ್ ಪೇಯ್ಡ್ ಯೋಜನೆಗಳು ಸಹ ಹೆಚ್ಚು ದುಬಾರಿಯಾಗಿವೆ. 30 ಜಿಬಿ ಡೇಟಾವನ್ನು ಒದಗಿಸುತ್ತಿದ್ದ 299 ರೂ.ಗಳ ಯೋಜನೆಯ ಬೆಲೆ ಈಗ ಬಿಲ್ಲಿಂಗ್ ಚಕ್ರಕ್ಕೆ 349 ರೂ. 75 ಜಿಬಿ ಡೇಟಾದೊಂದಿಗೆ 399 ರೂ.ಗಳ ಯೋಜನೆಯ ಬೆಲೆ ಈಗ 449 ರೂ.
ಜಿಯೋ ಎರಡು ಹೊಸ ಅಪ್ಲಿಕೇಶನ್ಗಳನ್ನು ಸಹ ಪ್ರಾರಂಭಿಸುತ್ತಿದೆ:
ಜಿಯೋಸೇಫ್: ಕರೆ, ಮೆಸೇಜಿಂಗ್ ಮತ್ತು ಫೈಲ್ ವರ್ಗಾವಣೆಗಾಗಿ ಕ್ವಾಂಟಮ್-ಸೆಕ್ಯೂರ್ ಸಂವಹನ ಅಪ್ಲಿಕೇಶನ್, ಇದರ ಬೆಲೆ ತಿಂಗಳಿಗೆ 199 ರೂ.
ಜಿಯೋ ಟ್ರಾನ್ಸ್ಲೇಟ್: ಧ್ವನಿ ಕರೆಗಳು, ಸಂದೇಶಗಳು, ಪಠ್ಯ ಮತ್ತು ಚಿತ್ರಗಳನ್ನು ಭಾಷಾಂತರಿಸಲು ಎಐ ಚಾಲಿತ ಬಹುಭಾಷಾ ಸಂವಹನ ಅಪ್ಲಿಕೇಶನ್, ಇದರ ಬೆಲೆ ತಿಂಗಳಿಗೆ 99 ರೂ.ಜಿಯೋ ಬಳಕೆದಾರರು ಈ ಅಪ್ಲಿಕೇಶನ್ಗಳನ್ನು ಒಂದು ವರ್ಷದವರೆಗೆ ಉಚಿತವಾಗಿ ಪಡೆಯಬಹುದು.
ಡೇಟಾ ಆಡ್-ಆನ್ ಯೋಜನೆಗಳು
ಪ್ರಸ್ತುತ ಬೆಲೆ (ರೂ.) 15 ರೂ.ಗೆ ನೀಡಲಾಗುತ್ತಿದ್ದಂತ 1 ಜಿಪಿ ಡೇಟಾ ದರವನ್ನು ರೂ.19ಕ್ಕೆ ಏರಿಕೆಯ ಮಾಡಲಾಗುತ್ತಿದೆ. 25 ರೂ.ಗೆ ನೀಡಲಾಗುತ್ತಿದ್ದಂತ 2 ಜಿಪಿ ಡೇಟಾ ದರವನ್ನೂ ರೂ.29ಕ್ಕೆ ಏರಿಕೆ ಮಾಡಲಾಗುತ್ತಿದೆ. ಇನ್ನೂ ರೂ.61ಕ್ಕೆ ನೀಡಲಾಗುತ್ತಿದ್ದಂತ 6 ಜಿಬಿ ಡೇಟಾ ದರವನ್ನು ರೂ.69ಕ್ಕೆ ಹೆಚ್ಚಳ ಮಾಡಲಾಗುತ್ತಿದೆ.
ಹೀಗಿದೆ ಹೊಸ ಹೆಚ್ಚಳದ ಪ್ಲಾನ್ ದರಗಳ ಪಟ್ಟಿ
ರೂ.155ಗಳಿಗೆ ನೀಡಲಾಗುತ್ತಿದ್ದಂತ 28 ದಿನಗಳ ವ್ಯಾಲಿಡಿಟಿ ಹಾಗೂ 2 ಜಿಬಿ ಪ್ಲಾನ್ ಅನ್ನು ರೂ.189ಕ್ಕೆ ಹೆಚ್ಚಳ ಮಾಡಲಾಗುತ್ತಿದೆ. ರೂ.209ರಿಂದ 249ಕ್ಕೆ 28 ದಿನಗಳ ಪ್ಲಾನ್ ದರ ಏರಿಕೆ ಮಾಡಿದ್ರೇ, ರೂ.239ರಿಂದ 299ಕ್ಕೆ ಏರಿಕೆ ಮಾಡಲಾಗುತ್ತಿದೆ.
ರೂ.395ರ ಪ್ಲಾನ್ ಅನ್ನು ರೂ.449ಕ್ಕೆ ಏರಿಕೆ ಮಾಡಿ, 3 ಜಿಬಿ ಪ್ರತಿ ದಿನ ಡೇಟಾ, 28 ದಿನಗಳ ವ್ಯಾಲಿಡಿಟಿ ನೀಡಲಾಗುತ್ತಿದೆ. ರೂ.533ರ ದರವನ್ನು 629ಕ್ಕೆ ಹೆಚ್ಚಳ ಮಾಡಿ, 56 ದಿನಗಳ ವ್ಯಾಲಿಡಿಟಿ ನೀಡಲಾಗಿದೆ. 666ರೂ ದರವನ್ನು 799ಕ್ಕೆ ಹೆಚ್ಚಿಸಿ, ಪ್ರತಿ ದಿನ 1.5 ಜಿಪಿ ಡೇಟಾದಂತೆ 84 ದಿನಗಳ ವ್ಯಾಲಿಟಿಡಿ ನೀಡಲಾಗಿದೆ.